ಮಧ್ಯಮ ವರ್ಗ ಅಂದರೆ ಯಾರು ಎಂಬ ಪ್ರಶ್ನೆ ಪ್ರಥಮವಾಗಿ ಏಳುತ್ತದೆ. ಮಧ್ಯಮ ವರ್ಗ ಆರ್ಥಿಕವಾಗಿ ಸಂಪೂರ್ಣ ಸಬಲರಲ್ಲ. ಆರ್ಥಿಕ ಸಧೃಡತೆ ಆಸೆ ಒಂದು ಕಡೆಯಾದರೆ ಇನ್ನೊಂದು ಕಡೆ ಇದ್ದ ಪರಿಸ್ಥಿತಿ ಹದಗೆಡದಂತೆ ನೋಡುಕೊಳ್ಳುವ ಜವಾಬ್ದಾರಿ. ಎರಡನ್ನು ಸರಿದೂಗಿಸುವ ಲೆಕ್ಕಾಚಾರದಲ್ಲೇ ಇವರ ಹೆಚ್ಚಿನ ಸಮಯ ಕಳೆದು ಹೋಗುತ್ತಿದೆ.
ಮದ್ಯಮ ಪದವೇ ಸೂಚಿಸುವಂತೆ ಯಾವುದನ್ನು ಹಲ್ಲು ಕಚ್ಚಿ ಹಿಡಿದು ನಿಂತು ನಿಭಾಯಿಸಿ ಬಿಡುತ್ತೇನೆ ಎಂಬ ಛಾತಿ ಇಲ್ಲದಿರುವ ಮನಸ್ಥಿತಿ. ಈ ಮನಸ್ಥಿತಿಯಿಂದ ಹೊರ ಬರುವುದು ಸುಲಭವಲ್ಲ. ಆರ್ಥಿಕ ಬಲ ಇದರಿಂದ ಹೊರ ಬರಲು ಒಂದು ಮುಖ್ಯ ಅಂಶ ಎಂಬುದು ಪ್ರಶ್ನಾತೀತ.
ಅದಕ್ಕೆ ಮಧ್ಯಮ ವರ್ಗ ಶಾಸ್ತ್ರವನ್ನು ಸಂಪೂರ್ಣವಾಗಿ ಬಿಡಲು ಆಗದೆ ಹಾಗೂ ಪೂರ್ಣವಾಗಿ ಪಾಲಿಸಲು ಆಗದೆ ಪಾಪ ಪ್ರಜ್ಞೆಯಲ್ಲಿ ತೊಳಲಾಡುತ್ತಿದೆ.
ಅವರಿಗೆ ಬಿಡಲು ಮನಸಿಲ್ಲ. ಸನಾತನವಾಗಿ ಬಂದ ಸಂಸ್ಕಾರಗಳನ್ನು ಬಿಟ್ಟುಕೊಳ್ಳುವ ಮನಸು ಬಾರದಿರುವುದು ಒಂದು ಕಡೆಯಾದರೆ ಬಿಟ್ಟರೆ ಎಲ್ಲಿ ಮತ್ತೆ ಹೊಸ ಬಿಕ್ಕಟ್ಟೊಂದು ಜೀವನದಲಿ ಬಂದು ಬಿಟ್ಟರೆ ಎಂಬ ಭಯ ಕೂಡ. ಕತ್ತಿಯ ಅಲುಗಿನ ಮೇಲೆ ನಡೆದಂತೆ ಅವರ ಜೀವನ.
ಇಂಥ ಪರಿಸ್ಥಿಯಲ್ಲಿ ಅವರಿಗೆ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗುವಂತೆ ಹಾಗೂ ಅಳವಡಿಸಿಕೊಂಡಾಗ ಕೆಲವಾದರೂ ಲಾಭ ಅಥವಾ ಅನುಕೂಲಗಳು ತಕ್ಷಣ ದೊರಕುವಂತೆ ನೋಡಿ ಕೊಳ್ಳುವುದು ಬಹು ಮುಖ್ಯವಾಗುತ್ತದೆ.
ಇಂದಿನ ಮಠ ಹಾಗೂ ವಿದ್ವಾಂಸರಿಗೆ ಇಂದೊಂದು ದೊಡ್ಡ ಸವಾಲು. ಎಲ್ಲ ತಕ್ಷಣದಲ್ಲಿ ದೊರೆಯುವ ಅಥವಾ ಬೇಕೆನ್ನುವ ಕಾಲ ಘಟ್ಟದಲ್ಲಿ ನಾವಿದ್ದೇವೆ. ಆ ಕಾಲಕ್ಕೆ ಸಮರ್ಪಕವಾದ ಉತ್ತರ ಹಾಗೂ ವಿಧಾನಗಳು ನಮ್ಮ ಸಂಪ್ರದಾಯ ಹಾಗೂ ಪರಂಪರೆಯಲ್ಲೂ ಇವೆ ಎಂದು ತೋರಿಸಿ ಕೊಡಬೇಕಾದ ಅವಶ್ಯಕತೆ ಇದೆ.
ಪ್ರವಚನಗಳು ಇಂದು ವೆಬ್‌ಸೈಟ್ ಹಾಗೂ ಯೂ ಟ್ಯೂಬೀನಲ್ಲಿ ಲಭ್ಯವಿರಿವುದು ನಿಜಕ್ಕೂ ಶ್ಲಾಘನೀಯ. ಪಂಚಾಗ, ಸಂಧ್ಯಾವಂದನೆ, ಸ್ತೋತ್ರಗಳ ಅಪ್ಲಿಕೇಶನ್ ಮೊಬೈಲ್ನಲ್ಲಿ ಸಿಗುವುದು ಕೂಡ ಉತ್ತಮ ಬೆಳವಣಿಗೆ.
ಆದರೆ ಇಲ್ಲಿ ಗಮನಿಸಬೇಕಾದ ಅಂಶ ಇವು ಒಂದು ರಂಗೋಲಿಯ ಚುಕ್ಕಿಗಳಂತೆ. ಅವುಗಳನು ಈ ಕಾಲದ ಕಲಾ ಪ್ರಜ್ಞೆಗೆ ಅನುಗುಣವಾಗಿ ಜೋಡಿಸುವ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವ ಅವಶ್ಯಕತೆ ಇಂದು ಹೆಚ್ಚಾಗಿದೆ.
ಚುಕ್ಕಿಗಳನು ಈ ಕಾಲದ ಕಲಾ ಪ್ರಜ್ಞೆಗೆ ಅನುಗುಣವಾಗಿ ಜೋಡಿಸುವುದು ಅಂದರೇನು?
ಶಾಸ್ತ್ರವೆಂಬುದು ಸನಾತನ ಹಾಗೂ ಸಾರ್ವಕಾಲಿಕವಾದರೂ ಅದನು ಇಂದಿನ ಕಾಲದ ಇತಿ ಮಿತಿಗಳಲ್ಲಿ ಹೇಗೆ ಅಳವಡಿಸಿಕೊಳ್ಳ ಬೇಕು ಹಾಗೂ ಅದರಿಂದ ದಿನ ನಿತ್ಯದ ಜೀವನ ಹೇಗೆ ಉತ್ತಮಗೊಳ್ಳುತ್ತದೆ ಎಂಬುದನ್ನು ಮರು ವ್ಯಾಖ್ಯಾನ ಮಾಡಬೇಕಾಗಿದೆ.
ಉದಾಹರಣೆಗೆ ಅಪಾರ್ಟ್ಮೆಂಟ್‌ಗಳಲ್ಲಿ ಮಡಿ ನೀರು ಹೇಗೆ? ಮಂತ್ರ ಅನ್ನುವದರಿಂದ ನಾನು ಇಂದು ಕಚೇರಿಯ ಮೀಟಿಂಗ್‌ನಲ್ಲಿ ಚೆನ್ನಾಗಿ ಮಾತಾಡಲು ಹೇಗೆ ಅನುಕೂಲ ಆಗುತ್ತದೆ?
ಅಂದರೆ ದಿನ ನಿತ್ಯದಲ್ಲಿ ಶಾಸ್ತ್ರ ಅನುಷ್ಟಾನಕ್ಕೆ ಇರುವ ತೊಂದರೆಗಳಿಗೆ ಸಮಾಧಾನ ಹಾಗೂ ಲೌಕಿಕದಲ್ಲಿ ಅದರ ಉಪಯುಕ್ತತೆ ಬಗ್ಗೆ ಒತ್ತು ಕೊಟ್ಟು ಹೇಳುವ ಅವಶ್ಯಕತೆ ಇದೆ.
ಈ ಬಗ್ಗೆ ಸಹೃದಯರು ಗಮನಿಸಿ ಪರಿಹಾರ ಸೂಚಿಸಬೇಕೆಂದು ಮನವಿ ಮಾಡುತ್ತೇನೆ.

No comments:
Post a Comment