Total Pageviews

Tuesday, January 16, 2018

ಭಕ್ತಿ ಎಂದರೇನು?

ವಿದ್ವಾನ್ || ಕೃಷ್ಣರಾಜ ಕುಟ್ಪಡಿ
ಭಕ್ತಿ ಎಂದರೇನು? ಭಾಗ ೧
ಭಕ್ತಿ ಎಂದರೇನು? ಭಾಗ ೨
ಭಕ್ತಿ ಎಂದರೇನು? ಭಾಗ ೩

ಸಾರಾಂಶ: ವಿಶ್ವಾಸ ವೃದ್ಧಿಸುವ ಪ್ರವಚನ

ಎಲ್ಲ ಶಾಸ್ತ್ರಗಳ ಮುಖ್ಯ ಗುರಿ ಭಗವಂತನ ಅರಿವು. ಆ ಅರಿವು ಭಗವಂತನ ಪ್ರೀತಿಗೆ ಕಾರಣವಾಗಲು.

ಪ್ರೀತಿಯ ರೂಪ: ಭಕ್ತಿ => ಗೌರವ => ಸ್ನೇಹ(ಜಿಡ್ಡು) => ವಾತ್ಸಲ್ಯ

[೧] ಮಹಾತ್ಮ್ಯ(ದೇಶ ಕಾಲದ ವ್ಯಾಪ್ತಿ ಮೀರಿ ಒಬ್ಬನೇ ಮಹಾ ಆತ್ಮ)  ಜ್ಞಾನ ಪೂರ್ವಕ,
[೨] ಸುದೃಡ (ಬೇರೆ ಎಲ್ಲಕ್ಕೆ ಹೋಲಿಸಿದಾಗ ಕೂಡ)
[೩] ಸರ್ವೋತ್ತಮ
ಎಂಬ ಅರಿವಿನಿಂದ ಕೂಡಿದ ಸ್ನೇಹ.

ದೇವರು ಪ್ರತಿ ಉಸಿರು, ಉಂಡ ಅನ್ನವನ್ನು ಮನಸ್ಸು, ದೇಹ ಹಾಗೂ ಮಲವಾಗಿ ಪರಿವರ್ತಿಸಿ ಮಾಡಿದ ಅನಂತ ಉಪಕಾರ. ಎಲ್ಲೆಲ್ಲಿ ಉಪಕೃತರೋ ಅಲ್ಲೆಲ್ಲಿ ಭಕ್ತಿ ಬೇಕು.

ಪ್ರತಿ ಕೆಲಸದಲ್ಲೂ ಅರಿವು ಮೂಡಿದಾಗ ಭಕ್ತಿ ಸ್ವಾಭಾವಿಕವಾಗಿ ಹುಟ್ಟುತ್ತದೆ.

ಭಕ್ತಿಯೇ ತಾಯಿ ಬೇರು. ಜ್ಞಾನದ ಆಸಕ್ತಿ ಬರಲು ಕೂಡ ಸ್ವಲ್ಪ ಭಕ್ತಿ ಬೇಕು. ಆದರೆ ಜ್ಞಾನವಿಲ್ಲದೆ ಭಕ್ತಿ ಬೆಳೆದಾಗ ಮೂಡ ನಂಬಿಕೆ ಆಗುವ ಭಯ ಇದೆ.

ನಾರದ : ದೇವರ ಮೇಲೆ ಭಕ್ತಿ ಹುಟ್ಟಿಸುವರು

ನಾವು ದೇವರನ್ನು ನಾವು ಹೇಗೆ ಉಪಾಸನೆ ಮಾಡುತ್ತೇವೋ ಹಾಗೆ ಫಲಗಳು ದೊರೆಯುತ್ತವೆ.

ಒಂದು ಕೆಲಸವಾಗಲು ಮೂರು ಬೇಕು:
[೧] ಜ್ಞಾನ  
[೨] ಇಚ್ಛಾ 
[೩] ಕ್ರಿಯಾ

ಭಕ್ತಿಗೆ ಮೊದಲ ಮೆಟ್ಟಿಲು ಶ್ರವಣ.

ಭಕ್ತಿ ನಮ್ಮನ್ನು ನಾವು ಅರಿತು ಭಗವಂತನ ಅರಿವುದು.

ವಾಯುಸ್ತುತಿಯಲ್ಲಿ ಕೇಳಿದ ಭಕ್ತಿ: ಶ್ಲೋಕ ೧೪ ಮಾತರ್ಮೆ ಮಾತರಿಶ್ವನ್
[೧] ಎತ್ತರವಾದ
[೨] ನಿಮಿತ್ತವಾಗಿ ಅಲ್ಲದ (ಆಗ ಆ ಸಂದರ್ಭಕ್ಕೆ ಸೀಮಿತವಾಗದ)
[೩] ಯಾವದೋ ಪ್ರಭಾವಕ್ಕೆ ಮಾತ್ರ ಸೀಮಿತವಾಗದ
[೪] ನಿಶ್ಚಲವಾದ : ದೃಡವಾದ
[೫] ಸರ್ವ ಗುಣ ಪೂರ್ಣ ಮತ್ತು ಸರ್ವ ಶಕ್ತನಾದ ಅವನು ನಮಗೆ ಏನು ಮಾಡುತ್ತಾನೋ ಅದೇ ಸರಿ ಎಂಬ ನಂಬಿಕೆ ಇರುವಂತ
[೬] ನಿರಂತರವಾದ
ಭಕ್ತಿಯನ್ನು ಈಗಲೇ ಕೊಡಿ.

ದುಡ್ಡಿಗಾಗಲಿ, ಪ್ರಭಾವ, ಪೌರುಷ, ಬಲ,  ರೂಪ, ಕೀರ್ತಿ, ಬುದ್ಧಿ, ಆರೋಗ್ಯ : ಬರೀ ಇದೆ ಆರಾಧನೆಗೆ ಆರ್ಹತೆ ಅಲ್ಲ.

ಪ್ರತಿ ಕಾರ್ಯದಲ್ಲಿ ಜ್ಞಾನಯಜ್ಞ ಆಗಬೇಕು.

ಕೇಳಿ ಕೇಳಿ ತಿಳೀಬೇಕು. ಕೇಳುವುದೇ ಹೆದ್ದಾರಿ.

ನವ ವಿಧ ಭಕ್ತಿ:
ಶ್ರವಣ: ಕೇಳಬೇಕು
ಕೀರ್ತನ:  ಕೇಳಿದನ್ನು ಹೇಳಬೇಕು
ವಂದನೆ : ಅಕ್ರೊರ ಸ್ಯಮಂತಕ ಮಣಿ ಇಟ್ಟು ಕೊಳ್ಳಲು ಕೊಟ್ಟಿದ್ದು
ದಾಸ್ಯ: ದಾಸೋಹಂ ಕೌಸಲೆಂದ್ರಸ್ಯ
ಅರ್ಚನ : ಗೌರವ ಭಾವ. ಧೃತಿ
ಆತ್ಮ ನಿವೇದನ:
ಸಖ್ಯ : ನೇರವಾಗಿ ಸಿಗದ್ದು. ಸಜ್ಜರನ ಸಖ್ಯ
ಪಾದ ಸೇವೆ : ನೇರವಾಗಿ ಸಿಗದ್ದು. ಜ್ಞಾನಿಗಳ ಹಾಗೂ ಹಿರಿಯರ ಸೇವೆ

ಅರ್ಜುನ : ಪ್ರಯತ್ನದ ಪ್ರತಿನಿಧಿ

ಒಂದೇ ವಿಷಯದಲ್ಲಿ ನಿಲ್ಲಲು ವಿವಿಧ ಆಯಾಮಗಳಲ್ಲಿ ಕಾಣಬೇಕು.
ಮದ್ದಿಲ್ಲದ ಮದ ವಿದ್ಯೆಯ ಮದ.

ವೇದವ್ಯಾಸ ಮಹಾಭಾರತ ಬಗ್ಗೆ ಹೇಳ ಹೊರಟಾಗ ನೆನಪಿಸಿದ್ದು:
[೧] ಕುಂತಿಯ ಧೃತಿ (ಅದೆಷ್ಟೋ ಕಷ್ಟ ಪಟ್ಟರೂ ದೇವರಿಗೆ ಕೇಳಿ ಕೊಂಡಿದ್ದು ಕಷ್ಟ ಕೊಡು ಎಂದು)
[೨] ಗಾಂಧಾರಿಯ ಧರ್ಮಶೀಲತೆ
[೩] ವಿದುರನ ನಿಷ್ಠೆ

ಭಕ್ತರ ವಿಧಗಳು:
[೧] ದುಃಖದಲ್ಲಿ ಕೇಳುವವುನು
[೨] ಜಿಜ್ಞಾಸು : ಇದೇನು ಹೊಸದು ಎಂದು ತಿಳಿಯುವ ಆಸಕ್ತಿ
[೩] ಪ್ರಯೋಜನ : ತನಗೇನೋ ಬೇಕಾದಾಗ
[೪] ಜ್ಞಾನಿ : ದೇವರ ತಿಳಿದು ದೇವರನ್ನು ಭಕ್ತಿ ಮಾಡುವವ

No comments:

Post a Comment