Total Pageviews

Tuesday, September 20, 2016

ಆಧ್ಯಾತ್ಮ ಏಕೆ ಏಕೆ

ಲೌಕಿಕಕದ ಮಾನವ ರೂಪಿಸಿದ
ಸಂಗತಿಗಳಿಗಿದೆ ತರ್ಕದ ಪರಿಧಿ
ಕೇಳಬಹುದಲ್ಲ ಕೇಳಲೇಬೇಕು
ಪ್ರತಿಯೊಂದಕ್ಕೂ ಏಕೆ ಏಕೆ ಎಂದು || ೧ ||

ಆಧ್ಯಾತ್ಮದ ವಿಷಯಗಳ ವಿಸ್ತಾರ
ಮೀರಿದೆ ಮಾನವ ನಿರ್ಮಿತ
ತರ್ಕದ ಪರಿಧಿಯನ್ನು
ಕೇಳಿ ತಿಳಿಯಲಾಗದು
ಎಲ್ಲವನ್ನು  ಏಕೆ ಏಕೆ ಎಂದು || ೧ ||

ಭಗವಂತ ಏಕೆ ಸೃಷ್ಟಿ ಮಾಡಿದ
ನಾವೇಕೆ ಹೀಗೆ ಇದರ ಉದ್ದೇಶವೇನು
ಅದರ ಉದ್ದೇಶವೇನು ಎಂದು
ಕೇಳುವದರಲ್ಲಿ ತಪ್ಪಿಲ್ಲ ಆದರೂ
ವಿಷಯ ನಮ್ಮ ಗ್ರಹಿಕೆಗೆ ಮೀರಿದ್ದು || ೩ ||

ಆಧ್ಯಾತ್ಮದ ಬಗ್ಗೆ ನಮ್ಮ ಉದ್ದೇಶವೇನಿದ್ದರೂ
ನಾವು ನಮ್ಮ ಜೀವನದಲಿ ಇರಬೇಕಾದ
ರೀತಿ ನೀತಿ ಏನು ಅದನು ಮಾಡಿ
ಅನುಭವಗಳ ಗರಡಿಯಲಿ ಪರಿಶೀಲಿಸಿ
ಅಳವಡಿಸಿಕೊಳ್ಳಬೇಕೆಂದೇ ವಿನಃ
ವಿತಂಡ ವಾದದ ಕಾಲಕ್ಷೇಪ ಮಾಡಿ
ಕಾಲ ವ್ಯರ್ಥ ಮಾಡುವುದಲ್ಲ  || ೪ ||

Monday, August 1, 2016

ಶ್ರೀ ಶ್ರೀ ೧೦೦೮ ಸತ್ಯಾತ್ಮ ತೀರ್ಥರು ನೀಡಿದ ಸಂದೇಶ - ತಿರುಕೊಯಿಲುರ್ ೨೦೧೧

ಪ್ರತಿ ದಿನ ಇಷ್ಟಾದರೂ  ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡಿ :

೧. ವಿಷ್ಣು ಸಹಸ್ರ ನಾಮ

೨. ಗೀತೆಯ ಒಂದು ಅಧ್ಯಾಯ [೧೦ ವಿಭೂತಿ, ೧೧ ವಿಶ್ವ]

೩. ಭಾಗವತದ ೧ ಶ್ಲೋಕ [೧೦ ನೇ ಅಧ್ಯಾಯ]
ಇದರಿಂದ ಗುರುಗಳ ಸಮಾಗಮವಾಗಿ ಮೋಕ್ಷಕ್ಕೆ ದಾರಿಯಾಗುತ್ತದೆ.

ವೀಶೇಷ ವೈಶಿಷ್ಟ ಇರುವ ಯಾವುದೇ ವಸ್ತು ಅಥವಾ ವ್ಯಕ್ತಿಯಲ್ಲಿ ಹೆಚ್ಚಾದ ದೇವರ ಸನ್ನಿಧಾನ ಇದೆ ಎಂಬ ಅನುಸಂಧಾನ ಇರಬೇಕು.

Friday, July 8, 2016

ಶ್ರೀ ಹರಿವಾಯು ಸ್ತುತಿ ಮಾಧ್ವರ ವೇದ





ಶ್ರೀ ಹರಿ ವಾಯು ಸ್ತುತಿಗೆ ಮಾಧ್ವರ ವೇದದ ಸ್ಥಾನಮಾನ ಏಕೆ?

ಈ ಪ್ರಶ್ನೆಗೆ ಉತ್ತರಿಸುವ ಮೊದಲು ವೇದ ಎಂದರೇನು ಹಾಗೂ ವೇದಗಳೇಕೆ ನಮ್ಮ ಸಾಧನೆಗೆ ಬೇಕು ಎಂದು ಅರಿಯುವ.

ಡಿ ವಿ ಜಿ ಯವರ ಶ್ರೀಮಧ್ಬಗವದ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೊಗ ಗ್ರಂಥದ ದೈವಾಸುರಬೇಧವಿವೇಕಯೋಗ ಅಧ್ಯಾಯದ ಪುಟ ೪೧೨ ರ ಆಯ್ದ ಭಾಗ.

ಬರಿ ಬುದ್ಧಿಯ ಸ್ವತಂತ್ರ ವಿಚಾರದಿಂದ ಭಗವಂತನ ಗ್ರಹಿಸಲು ಸಾಧ್ಯವೋ?

ಮನುಷ್ಯ ಬುದ್ಧಿ ಕೆಲಸಮಾಡುವುದಕ್ಕೆ ವಿಷಯ ಸಾಮಗ್ರಿ ಬೇಕು. ಎಲ್ಲಿ ವಿಷಯವು ಶೂನ್ಯವೋ ಅಲ್ಲಿ ಬುದ್ಧಿ ಏನನ್ನೊ ಮಾಡಲಾರದು. ಬುದ್ಧಿಗೆ ಕಾರ್ಯಸಾಮಗ್ರಿ ಒದಗಿಸಿವುದು ಮನಸ್ಸು.  ಮನಸ್ಸಿಗೆ ಕಾರ್ಯಸಾಮಗ್ರಿ ಒದಗಿಸುವುದು ಇಂದ್ರಿಯಗಳು. ಇಂದ್ರಿಯಗಳು ವಿಷಯ ಸಂಪಾದನೆ ಮಾಡದೆ ಇದ್ದರೆ ಮನಸ್ಸಿನ ಕ್ಷೇತ್ರ ಖಾಲಿ. ಮನಸ್ಸು ನಿರುದ್ಯೋಗಿ ಸುಮ್ಮನಾದರೆ ಬುದ್ಧಿಯು ಸುಮ್ಮನಿರಬೇಕಾದದ್ದೆ. ಬುದ್ಧಿಯ ಕರ್ಮಕ್ಷೇತ್ರ ಹೀಗೆ ಪರಿಮಿತವಾಗಿದೆ.

ಭಗವಂತ, ವಾಯು ದೇವರು ದೇವತೆಗಳು ಇಂದ್ರಿಯಾತೀತರು. ಇಂದ್ರಿಯಗಳು ಆ ರಹಸ್ಯಗಳನ್ನು ಮುಟ್ಟಲಾರವು. ಇಂದ್ರಿಯಗಳೇ ಹೋಗದ ಕಡೆ ಮನಸ್ಸು ಹೇಗೆ ಹೊಕ್ಕಿತು?

ಇಂದ್ರಿಯಾಧೀನತೆಯ ಕಾರಣದಿಂದ - ಬುದ್ಧಿಗೆ ಅಸಮಾಥ್ಯ೯.  ಅತೀಂದ್ರಿಯ ವಸ್ತು ಜ್ಞಾನಕ್ಕೆ ವೇದವೊಂದೇ ಸಾಧನ. ವೇದವು ಪರ ವಸ್ತುವನ್ನು ಸಾಕ್ಷಾತ್ತಾಗಿ ಕಂಡವರ ವಾಕ್ಕು. ಅದನ್ನು ಗ್ರಹಿಸದಲ್ಲದೆ ನಮಗೆ ತತ್ವಜ್ಞಾನವಿಲ್ಲ.  ಆದರೆ ಬುದ್ಧಿ ಬೇಕಿಲ್ಲವೋ? ಬೇಕೇ ಬೇಕು. ಪರಿಶುದ್ಧವಾದ ಬುದ್ಧಿಇಲ್ಲದವನಿಗೆ ವೇದ ವಾಕ್ಯವು ಅರ್ಥವನ್ನು ಕೊಡದು.  ವೇದಾಕ್ಷರದಲ್ಲಿ ಅಡಗಿರುವ ಗೂಢವನ್ನು ಸಮ೦ಜಸವಾಗಿ ಗ್ರಹಿಸಿ ಸ್ವಾಧೀನಪಡಿಸಿಕೊಳ್ಳುವ ಕೆಲಸ ಬುದ್ದಿಗೆ ಸೇರಿದ್ದು.

ಹೀಗೆ ಶ್ರೀ ಹರಿವಾಯು ಸ್ತುತಿ ಕೂಡ ತ್ರಿವಿಕ್ರಮಪಂಡಿತಾಚಾರ್ಯರು ವಾಯುದೇವರ ಹನುಮ ಭೀಮ ಮಧ್ವ ರೂಪದಲ್ಲಿ ಶ್ರೀರಾಮ ಕೃಷ್ಣ ವೇದವ್ಯಾಸ ನಾರಾಯಣ ರೂಪಗಳನ್ನು ಪೂಜಿಸುವದನ್ನು ಕಣ್ಣಿಂದ ಕಂಡಾಗ ಸಹಜವಾಗಿ ಬಂದ ಸ್ತುತಿಯಾಗಿದೆ. ಆದ್ದರಿಂದ ವಾಯುದೇವರ ದರ್ಶನಕ್ಕೆ ನಮಗೆ ಕೊಂಡಿಯಾಗಿದೆ.  ಆದ್ದರಿಂದ ಶ್ರೀ ಹರಿ ವಾಯು ಸ್ತುತಿ ಮಾಧ್ವರಿಗೆ ವೇದ ಸಮಾನ ಸ್ತುತಿಯಾಗಿದೆ.


ವಿದ್ವಾನ: ಪವಮಾನಾಚಾರ್ ಕಲ್ಲಾಪುರ - ಶ್ರೀ ಹರಿ ವಾಯು ಸ್ತುತಿ ಪ್ರವಚನ (ಡಾ|| ರವಿಕಿರಣ ಕರಣಮ್ ಹಂಚಿಕೊಂಡ ಕೊಂಡಿ)
ಡಾ || ವ್ಯಾಸನಕೆರೆ ಪ್ರಭಂಜನಾಚಾರ್ಯರ ಅಮರ ಜ್ಯೋತಿ ನಗರದಲ್ಲಿ ನಡೆದ ಪ್ರವಚನ- ಪರಿಚಯ
ಡಾ || ವ್ಯಾಸನಕೆರೆ ಪ್ರಭಂಜನಾಚಾರ್ಯರ ಪ್ರತಿ ಶ್ಲೋಕದ ಪ್ರವಚನ

ಪ || ಡಾ || ಜಯತೀರ್ಥಾಚಾರ್ಯ ಮಳಗಿಯವರ ಅತ್ಯಅದ್ಭುತ ಭೀಮಸೇನ ದೇವರ ಬಗ್ಗೆ ಪ್ರವಚನ



|| ಶ್ರೀ ಕೃಷ್ಣಾರ್ಪಣ ಮಸ್ತು ||

Thursday, June 23, 2016

ಭೋಗದಾಸೆ





















ತನ್ನದೇ ತಂದೆಯ
ತೊಡೆಯ ಮೇಲೆ
ಕೊಡಬೇಕೆಂಬ
ಭೋಗದ ಆಸೆ
ಕಟ್ಟಿ ಹಾಕಿತು
ಧ್ರುವನನ್ನು
ಧ್ರುವ ನಕ್ಷತ್ರಕ್ಕೆ
ಸಾವಿರಾರು ವರ್ಷ
ಇನ್ನೂ ಕಂಡ ಕಂಡದಕ್ಕೆ
ಆಸೆ ಪಡುವ
ನಮ್ಮ ಪಾಡೇನು?

Thursday, June 9, 2016

ಆಧ್ಯಾತ್ಮ ಮತ್ತು ಅನುಭವ

ಸೀಮಿತ ಅನುಭವಗಳ
ಪರಿಧಿ ಮೀರಿ
ಜ್ಞಾನದ ಹೊಸ
ಪರ್ವತಗಳ ಏರಿ
ಅಂಧ ಶ್ರದ್ಧೆಯ
ಪ್ರಪಾತಕ್ಕೆ ಜಾರದೇ
ತನ್ನ ಅನುಭವಗಳ
ಪರಿಧಿ ಹಿಗ್ಗಿಸಿ
ಅನುಭವಿಸಿ ಅರಿತು
ನಡೆಯುವ ದಾರಿಯೇ
ಆಧ್ಯಾತ್ಮ

Tuesday, May 31, 2016

ತಾರತಮ್ಯ

ತಾರತಮ್ಯ ಅಡಗಿದೆ ಪ್ರಕೃತಿಯ
ಕಣ ಕಣದಲಿ
ಆದ ತೋರಿದವರು
ಗುರು ಮಧ್ವರೆ ಹೊರತು ಅದು
ಅವರ ಸೃಷ್ಟಿಯಲ್ಲ || ೧ ||

ತಾರತಮ್ಯವೇ ಇಲ್ಲ ಎಂದರೆ
ಹಸುಳೆಗೆ ತಾಯಿ ಹಾಲು
ತರುಣನಿಗೆ ಕಟಿ ರೊಟ್ಟಿ
ಮುದುಕನಿಗೆ ಮೆತ್ತಗಿನ ಅನ್ನ
ಏಕೆ? ತಿನಿಸು ಎಲ್ಲರಿಗೆ ಒಂದೇ ಆಹಾರವನು
ನೋಡಿಕೋ ಎಲ್ಲರನು ಒಂದೇ ರೀತಿ || ೨ ||

ತಾರತಮ್ಯವೇ ಇಲ್ಲ ಎಂದರೆ
ಅಧಿಕಾರಿಗೆ ಖಾಸಗಿ ಕೋಣೆ
ಗುಮಾಸ್ತನಿಗೆ ಬರಿ ಮೇಜು ಕುರ್ಚಿ
ಜವಾನ ಹೊರಗೆ ನಿಲ್ಲುವುದು
ಏಕೆ? ಕೂಡಿಸು ಎಲ್ಲರನು ಒಂದೆಡೆ
ಕೊಡು ಎಲ್ಲರಿಗೂ ಒಂದೇ ಸಂಬಳವನು|| ೩ ||

ತಾರತಮ್ಯವಿದೆ ಯೋಗ್ಯತೆಯಲಿ
ತಾರತಮ್ಯಕ್ಕೆ ಅನುಗುಣವಾಗಿ ವರ್ತನೆ
ನ್ಯಾಯವೇ ಹೊರತು ಅನ್ಯಾಯವಲ್ಲ
ತಾರತಮ್ಯವಿರದಿರುವುದು ಮಾನವೀಯತೆಯಲಿ ಮಾತ್ರ
ಮಾನವೀಯತೆ ಕಳೆದುಕೊಂಡು
ತಾರತಮ್ಯದ ಬಗ್ಗೆ ಬೊಬ್ಬೆ
ಹೊಡೆದರೇನು ಬಂತು? || ೪ ||

|| ಶ್ರೀ ಕೃಷ್ಣಾರ್ಪಣಮಸ್ತು ||

ಗುರು ಸತ್ಯಾತ್ಮ ತೀರ್ಥರ ಹಾಗೂ ಗುರು ಪ್ರಭಂಜನಾಚಾರ್ಯರ ಪ್ರವಚನದಿಂದ ಸ್ಪೂರ್ತಿ ಪಡೆದದ್ದು.
ತಪ್ಪು ತಿಳುವಳಿಕೆ ಇದ್ದರೆ ಅದು ನನ್ನದು ಮಾತ್ರ.

Wednesday, May 25, 2016

ಕನ್ಯಾ ದಾನ















ವಧುವಿನ ತಂದೆ ತಾಯಿ ಹೇಳಿ
ವರನ ತಂದೆ ತಾಯಿಗೆ
ಧನ್ಯವಾದಗಳು ತಮ್ಮ ಈ ಅನುಪಮ
ಆಸ್ತಿಯನ್ನು ಇಷ್ಟು ದಿವಸ
ನಮ್ಮ ಮನೆಯಲ್ಲಿ ಇಟ್ಟುಕೊಳ್ಳಲು
ಅವಕಾಶ ಮಾಡಿ ಕೊಟ್ಟದ್ದಕ್ಕೆ || ೧ ||

ವರನ ತಂದೆ ತಾಯಿ ಹೇಳಿ
ವಧುವಿನ ತಂದೆ ತಾಯಿಗೆ
ಧನ್ಯವಾದಗಳು ನಮ್ಮ ಈ  ಅತ್ಯಂತ
ಬೆಲೆ ಬಾಳುವ  ಸಂಪತ್ತನ್ನು
ಇಷ್ಟು ಚೆನ್ನಾಗಿ ರಕ್ಷಿಸಿ ಬೆಳಿಸಿ
ನಮಗೆ ಹಿಂತಿರುಗಿ ಕೊಟ್ಟಿದ್ದಕ್ಕೆ|| ೨ ||

ವಧುವನ್ನು ಕರೆದು ಕೊಂಡು ಹೋಗಿ
ವರನ ಮನೆಗೆ  ವಧು ತನ್ನದೇ ಮನೆಗೆ
ಹಿಂತಿರುಗಿ  ಬರುತ್ತಿರುವ ಹಾಗೆ
ಅದೆಷ್ಟು ಸುಂದರ ಮದುವೆಯ
ಪರಿಕಲ್ಪನೆ ವೈದಿಕ ಧರ್ಮದಲ್ಲಿ || ೩ ||

Friday, May 20, 2016

ತೊರವಿ ನರಸಿಂಹ





















ನಮ್ಮೊಳಗಿನ ಹಿರಣ್ಯ ಕಶ್ಯಪು ಕೊಬ್ಬಿದ್ದಾನೆ
ಬಿದ್ದಿದ್ದಾನೆ ಹಿರಣ್ಯದ ಲೋಭದ ಹಿಂದೆ
ಕೇಳದಾಗಿದೆ ಪ್ರಹ್ಲಾದನ ಕರೆ ಆತನಿಗೆ
ನಾರಾಯಣನ ನಾಮವಿಲ್ಲ ನಾಲಗೆಯಲಿ || ೧ ||

ಮನದೊಳಗಿನ ಗಾಡಂಧಾಕಾರದ ಕಂಭ
ಸೀಳಿ ಬಾ ಉಗ್ರ ತೊರವಿ ನರಸಿಂಹನೇ
ಮಾಡು ದಮನ  ಹಿರಣ್ಯ ಕಶ್ಯಪುವನ್ನು
ಕೇಳುವಂತೆ ಮಾಡು ಪ್ರಹ್ಲಾದನ ಕರೆ || ೨ ||

ನಾಲಗೆಯಲಿ ನಲಿದಾಡಲಿ ನಿನ್ನ ನಾಮ
ಮಾಡು ದುಷ್ಟ ವಿಚಾರಗಳ ದಹನ
ಪ್ರೇರಿಸು ನಮ್ಮನು ನಡೆಯಲು ಸನ್ಮಾರ್ಗದಲಿ
ಕಾಪಾಡು ತ್ವರಿತವಾಗಿ ತೊರವಿ ನರಸಿಂಹನೇ  || ೩ ||
|| ಶ್ರೀ ಕೃಷ್ಣಾರ್ಪಣ ಮಸ್ತು ||

Tuesday, May 17, 2016

ಹನುಮ ಭೀಮ ಮಧ್ವ

ಹನುಮ ಹನುಮ ಹನುಮ
ಎಂದೊಡೆ ಬರುವದು ಬಲ ತಾಪತ್ರಯಗಳ ಭಾರ ಹೊತ್ತು
ದಾಟಲು ಸಂಸಾರ ಸಾಗರ || ೧ ||

ಭೀಮ ಭೀಮ ಭೀಮ
ಎಂದೊಡೆ ಬರುವದು ಬಲ ಅರಿಷಡ್ವ್ವರ್ಗಗಳ ಶತ್ರು
ಸೇನೆಯ ಸದೆಬಡಿದು ಜಯಿಸಲು || ೨ ||

ಮಧ್ವ ಮಧ್ವ ಮಧ್ವ
ಎಂದೊಡೆ ಬರುವದು ಬಲ ಅಜ್ಞಾನದ ಅಂಧಕಾರ ಕಳೆದು
ಸಾಧನೆಯ ದಾರಿ ಕ್ರಮಿಸಲು || ೩ ||

|| ಶ್ರೀ ಕೃಷ್ಣಾರ್ಪಣ ಮಸ್ತು ||

Tuesday, May 3, 2016

ಭೀಮ - ಧುರ್ಯೋಧನ

ಪ್ರತಿಯೊಬ್ಬರ
ಮನದಲ್ಲೂ
ಇದ್ದಾರೆ
ಒಬ್ಬ
ಧುರ್ಯೋಧನ
ಒಬ್ಬ
ಭೀಮಸೇನ || ೧ ||

ಮಾಡಿದ
ಸತ್ಕಾರ್ಯಗಳ
ಅಹಂಕಾರದಿಂದ
ಧುರ್ಯೋಧನ
ಹಿಗ್ಗದಿರಲಿ || ೨ ||

ಮಾಡಿದ
ದುಷ್ಕರ್ಮಗಳ
ಪಾಪ ಪ್ರಜ್ಞೆಯಿಂದ
ಭೀಮಸೇನ
ಕುಗ್ಗದಿರಲಿ || ೩ ||

ಭೀಮಸೇನನೇ
ಗೆಲ್ಲಲಿ
ಆದರೆ
ಧುರ್ಯೋಧನ
ಗೆದ್ದಾಗ
ಭೀಮಸೇನ
ಎದೆಗುಂದದಿರಲಿ || ೪ ||

|| ಶ್ರೀ ಕೃಷ್ಣಾರ್ಪಣ ಮಸ್ತು ||

Monday, May 2, 2016

ನವನೀತ
















ನವನೀತ
ಪ್ರೀಯ
ಉಡುಪಿಯ
ಕೃಷ್ಣ
ಕಡೆಯೋ
ನೀನ್ನ
ಕಡೆಗೋಲಿಂದ
ನನ್ನ
ಮನವೆಂಬ
ಮೊಸರನ್ನು
ಉಣಿಸು
ನನಗೂ
ಒಂದಿಷ್ಟು
ಬೆಣ್ಣೆಯೆಂಬ
ಮಧ್ವ ಶಾಸ್ತ್ರವನು

|| ಶ್ರೀ ಕೃಷ್ಣಾರ್ಪಣ ಮಸ್ತು ||

ಅಂಗೈಯಲ್ಲಿ ಹನುಮ


ಅಂಗೈಯಲ್ಲಿ ಸಂಜೀವೀನಿ ಪರ್ವತವನ್ನೇ
ತಂದ ಹನುಮ
ಅಂಗೈಯಲ್ಲಿ ಕುಳಿತು ತೋರಿದಂತಿದೆ ತನ್ನ
ಲಘು ಹಾಗೂ ಗರಿಮಾ ಶಕ್ತಿಯನ್ನು

|| ಶ್ರೀ ಕೃಷ್ಣಾರ್ಪಣ ಮಸ್ತು ||

ಶ್ರೀ ವಿಷ್ಣು ಪ್ರೇರಣಯಾ

ಶ್ರೀ ವಿಷ್ಣು ಪ್ರೇರಣಯಾ
ಶ್ರೀ ವಿಷ್ಣು ಪ್ರೀತ್ಯರ್ಥಎಂಬ
ಅನುಸಂಧಾನದಿಂದ ಕೆಲಸ ಮಾಡಿ
ನಾಹಂ ಕರ್ತಾ
ಹರಿ ಕರ್ತಾ ಎಂದು
ಅರಿತು ಚಿಂತೆ ಕಳವಳಗಳಿಂದ
ದೂರವಿರಿ

|| ಶ್ರೀ ಕೃಷ್ಣಾರ್ಪಣ ಮಸ್ತು ||