Total Pageviews

Tuesday, May 31, 2016

ತಾರತಮ್ಯ

ತಾರತಮ್ಯ ಅಡಗಿದೆ ಪ್ರಕೃತಿಯ
ಕಣ ಕಣದಲಿ
ಆದ ತೋರಿದವರು
ಗುರು ಮಧ್ವರೆ ಹೊರತು ಅದು
ಅವರ ಸೃಷ್ಟಿಯಲ್ಲ || ೧ ||

ತಾರತಮ್ಯವೇ ಇಲ್ಲ ಎಂದರೆ
ಹಸುಳೆಗೆ ತಾಯಿ ಹಾಲು
ತರುಣನಿಗೆ ಕಟಿ ರೊಟ್ಟಿ
ಮುದುಕನಿಗೆ ಮೆತ್ತಗಿನ ಅನ್ನ
ಏಕೆ? ತಿನಿಸು ಎಲ್ಲರಿಗೆ ಒಂದೇ ಆಹಾರವನು
ನೋಡಿಕೋ ಎಲ್ಲರನು ಒಂದೇ ರೀತಿ || ೨ ||

ತಾರತಮ್ಯವೇ ಇಲ್ಲ ಎಂದರೆ
ಅಧಿಕಾರಿಗೆ ಖಾಸಗಿ ಕೋಣೆ
ಗುಮಾಸ್ತನಿಗೆ ಬರಿ ಮೇಜು ಕುರ್ಚಿ
ಜವಾನ ಹೊರಗೆ ನಿಲ್ಲುವುದು
ಏಕೆ? ಕೂಡಿಸು ಎಲ್ಲರನು ಒಂದೆಡೆ
ಕೊಡು ಎಲ್ಲರಿಗೂ ಒಂದೇ ಸಂಬಳವನು|| ೩ ||

ತಾರತಮ್ಯವಿದೆ ಯೋಗ್ಯತೆಯಲಿ
ತಾರತಮ್ಯಕ್ಕೆ ಅನುಗುಣವಾಗಿ ವರ್ತನೆ
ನ್ಯಾಯವೇ ಹೊರತು ಅನ್ಯಾಯವಲ್ಲ
ತಾರತಮ್ಯವಿರದಿರುವುದು ಮಾನವೀಯತೆಯಲಿ ಮಾತ್ರ
ಮಾನವೀಯತೆ ಕಳೆದುಕೊಂಡು
ತಾರತಮ್ಯದ ಬಗ್ಗೆ ಬೊಬ್ಬೆ
ಹೊಡೆದರೇನು ಬಂತು? || ೪ ||

|| ಶ್ರೀ ಕೃಷ್ಣಾರ್ಪಣಮಸ್ತು ||

ಗುರು ಸತ್ಯಾತ್ಮ ತೀರ್ಥರ ಹಾಗೂ ಗುರು ಪ್ರಭಂಜನಾಚಾರ್ಯರ ಪ್ರವಚನದಿಂದ ಸ್ಪೂರ್ತಿ ಪಡೆದದ್ದು.
ತಪ್ಪು ತಿಳುವಳಿಕೆ ಇದ್ದರೆ ಅದು ನನ್ನದು ಮಾತ್ರ.

No comments:

Post a Comment