Total Pageviews

Tuesday, May 31, 2016

ತಾರತಮ್ಯ

ತಾರತಮ್ಯ ಅಡಗಿದೆ ಪ್ರಕೃತಿಯ
ಕಣ ಕಣದಲಿ
ಆದ ತೋರಿದವರು
ಗುರು ಮಧ್ವರೆ ಹೊರತು ಅದು
ಅವರ ಸೃಷ್ಟಿಯಲ್ಲ || ೧ ||

ತಾರತಮ್ಯವೇ ಇಲ್ಲ ಎಂದರೆ
ಹಸುಳೆಗೆ ತಾಯಿ ಹಾಲು
ತರುಣನಿಗೆ ಕಟಿ ರೊಟ್ಟಿ
ಮುದುಕನಿಗೆ ಮೆತ್ತಗಿನ ಅನ್ನ
ಏಕೆ? ತಿನಿಸು ಎಲ್ಲರಿಗೆ ಒಂದೇ ಆಹಾರವನು
ನೋಡಿಕೋ ಎಲ್ಲರನು ಒಂದೇ ರೀತಿ || ೨ ||

ತಾರತಮ್ಯವೇ ಇಲ್ಲ ಎಂದರೆ
ಅಧಿಕಾರಿಗೆ ಖಾಸಗಿ ಕೋಣೆ
ಗುಮಾಸ್ತನಿಗೆ ಬರಿ ಮೇಜು ಕುರ್ಚಿ
ಜವಾನ ಹೊರಗೆ ನಿಲ್ಲುವುದು
ಏಕೆ? ಕೂಡಿಸು ಎಲ್ಲರನು ಒಂದೆಡೆ
ಕೊಡು ಎಲ್ಲರಿಗೂ ಒಂದೇ ಸಂಬಳವನು|| ೩ ||

ತಾರತಮ್ಯವಿದೆ ಯೋಗ್ಯತೆಯಲಿ
ತಾರತಮ್ಯಕ್ಕೆ ಅನುಗುಣವಾಗಿ ವರ್ತನೆ
ನ್ಯಾಯವೇ ಹೊರತು ಅನ್ಯಾಯವಲ್ಲ
ತಾರತಮ್ಯವಿರದಿರುವುದು ಮಾನವೀಯತೆಯಲಿ ಮಾತ್ರ
ಮಾನವೀಯತೆ ಕಳೆದುಕೊಂಡು
ತಾರತಮ್ಯದ ಬಗ್ಗೆ ಬೊಬ್ಬೆ
ಹೊಡೆದರೇನು ಬಂತು? || ೪ ||

|| ಶ್ರೀ ಕೃಷ್ಣಾರ್ಪಣಮಸ್ತು ||

ಗುರು ಸತ್ಯಾತ್ಮ ತೀರ್ಥರ ಹಾಗೂ ಗುರು ಪ್ರಭಂಜನಾಚಾರ್ಯರ ಪ್ರವಚನದಿಂದ ಸ್ಪೂರ್ತಿ ಪಡೆದದ್ದು.
ತಪ್ಪು ತಿಳುವಳಿಕೆ ಇದ್ದರೆ ಅದು ನನ್ನದು ಮಾತ್ರ.

Wednesday, May 25, 2016

ಕನ್ಯಾ ದಾನ















ವಧುವಿನ ತಂದೆ ತಾಯಿ ಹೇಳಿ
ವರನ ತಂದೆ ತಾಯಿಗೆ
ಧನ್ಯವಾದಗಳು ತಮ್ಮ ಈ ಅನುಪಮ
ಆಸ್ತಿಯನ್ನು ಇಷ್ಟು ದಿವಸ
ನಮ್ಮ ಮನೆಯಲ್ಲಿ ಇಟ್ಟುಕೊಳ್ಳಲು
ಅವಕಾಶ ಮಾಡಿ ಕೊಟ್ಟದ್ದಕ್ಕೆ || ೧ ||

ವರನ ತಂದೆ ತಾಯಿ ಹೇಳಿ
ವಧುವಿನ ತಂದೆ ತಾಯಿಗೆ
ಧನ್ಯವಾದಗಳು ನಮ್ಮ ಈ  ಅತ್ಯಂತ
ಬೆಲೆ ಬಾಳುವ  ಸಂಪತ್ತನ್ನು
ಇಷ್ಟು ಚೆನ್ನಾಗಿ ರಕ್ಷಿಸಿ ಬೆಳಿಸಿ
ನಮಗೆ ಹಿಂತಿರುಗಿ ಕೊಟ್ಟಿದ್ದಕ್ಕೆ|| ೨ ||

ವಧುವನ್ನು ಕರೆದು ಕೊಂಡು ಹೋಗಿ
ವರನ ಮನೆಗೆ  ವಧು ತನ್ನದೇ ಮನೆಗೆ
ಹಿಂತಿರುಗಿ  ಬರುತ್ತಿರುವ ಹಾಗೆ
ಅದೆಷ್ಟು ಸುಂದರ ಮದುವೆಯ
ಪರಿಕಲ್ಪನೆ ವೈದಿಕ ಧರ್ಮದಲ್ಲಿ || ೩ ||

Friday, May 20, 2016

ತೊರವಿ ನರಸಿಂಹ





















ನಮ್ಮೊಳಗಿನ ಹಿರಣ್ಯ ಕಶ್ಯಪು ಕೊಬ್ಬಿದ್ದಾನೆ
ಬಿದ್ದಿದ್ದಾನೆ ಹಿರಣ್ಯದ ಲೋಭದ ಹಿಂದೆ
ಕೇಳದಾಗಿದೆ ಪ್ರಹ್ಲಾದನ ಕರೆ ಆತನಿಗೆ
ನಾರಾಯಣನ ನಾಮವಿಲ್ಲ ನಾಲಗೆಯಲಿ || ೧ ||

ಮನದೊಳಗಿನ ಗಾಡಂಧಾಕಾರದ ಕಂಭ
ಸೀಳಿ ಬಾ ಉಗ್ರ ತೊರವಿ ನರಸಿಂಹನೇ
ಮಾಡು ದಮನ  ಹಿರಣ್ಯ ಕಶ್ಯಪುವನ್ನು
ಕೇಳುವಂತೆ ಮಾಡು ಪ್ರಹ್ಲಾದನ ಕರೆ || ೨ ||

ನಾಲಗೆಯಲಿ ನಲಿದಾಡಲಿ ನಿನ್ನ ನಾಮ
ಮಾಡು ದುಷ್ಟ ವಿಚಾರಗಳ ದಹನ
ಪ್ರೇರಿಸು ನಮ್ಮನು ನಡೆಯಲು ಸನ್ಮಾರ್ಗದಲಿ
ಕಾಪಾಡು ತ್ವರಿತವಾಗಿ ತೊರವಿ ನರಸಿಂಹನೇ  || ೩ ||
|| ಶ್ರೀ ಕೃಷ್ಣಾರ್ಪಣ ಮಸ್ತು ||

Tuesday, May 17, 2016

ಹನುಮ ಭೀಮ ಮಧ್ವ

ಹನುಮ ಹನುಮ ಹನುಮ
ಎಂದೊಡೆ ಬರುವದು ಬಲ ತಾಪತ್ರಯಗಳ ಭಾರ ಹೊತ್ತು
ದಾಟಲು ಸಂಸಾರ ಸಾಗರ || ೧ ||

ಭೀಮ ಭೀಮ ಭೀಮ
ಎಂದೊಡೆ ಬರುವದು ಬಲ ಅರಿಷಡ್ವ್ವರ್ಗಗಳ ಶತ್ರು
ಸೇನೆಯ ಸದೆಬಡಿದು ಜಯಿಸಲು || ೨ ||

ಮಧ್ವ ಮಧ್ವ ಮಧ್ವ
ಎಂದೊಡೆ ಬರುವದು ಬಲ ಅಜ್ಞಾನದ ಅಂಧಕಾರ ಕಳೆದು
ಸಾಧನೆಯ ದಾರಿ ಕ್ರಮಿಸಲು || ೩ ||

|| ಶ್ರೀ ಕೃಷ್ಣಾರ್ಪಣ ಮಸ್ತು ||

Tuesday, May 3, 2016

ಭೀಮ - ಧುರ್ಯೋಧನ

ಪ್ರತಿಯೊಬ್ಬರ
ಮನದಲ್ಲೂ
ಇದ್ದಾರೆ
ಒಬ್ಬ
ಧುರ್ಯೋಧನ
ಒಬ್ಬ
ಭೀಮಸೇನ || ೧ ||

ಮಾಡಿದ
ಸತ್ಕಾರ್ಯಗಳ
ಅಹಂಕಾರದಿಂದ
ಧುರ್ಯೋಧನ
ಹಿಗ್ಗದಿರಲಿ || ೨ ||

ಮಾಡಿದ
ದುಷ್ಕರ್ಮಗಳ
ಪಾಪ ಪ್ರಜ್ಞೆಯಿಂದ
ಭೀಮಸೇನ
ಕುಗ್ಗದಿರಲಿ || ೩ ||

ಭೀಮಸೇನನೇ
ಗೆಲ್ಲಲಿ
ಆದರೆ
ಧುರ್ಯೋಧನ
ಗೆದ್ದಾಗ
ಭೀಮಸೇನ
ಎದೆಗುಂದದಿರಲಿ || ೪ ||

|| ಶ್ರೀ ಕೃಷ್ಣಾರ್ಪಣ ಮಸ್ತು ||

Monday, May 2, 2016

ನವನೀತ
















ನವನೀತ
ಪ್ರೀಯ
ಉಡುಪಿಯ
ಕೃಷ್ಣ
ಕಡೆಯೋ
ನೀನ್ನ
ಕಡೆಗೋಲಿಂದ
ನನ್ನ
ಮನವೆಂಬ
ಮೊಸರನ್ನು
ಉಣಿಸು
ನನಗೂ
ಒಂದಿಷ್ಟು
ಬೆಣ್ಣೆಯೆಂಬ
ಮಧ್ವ ಶಾಸ್ತ್ರವನು

|| ಶ್ರೀ ಕೃಷ್ಣಾರ್ಪಣ ಮಸ್ತು ||

ಅಂಗೈಯಲ್ಲಿ ಹನುಮ


ಅಂಗೈಯಲ್ಲಿ ಸಂಜೀವೀನಿ ಪರ್ವತವನ್ನೇ
ತಂದ ಹನುಮ
ಅಂಗೈಯಲ್ಲಿ ಕುಳಿತು ತೋರಿದಂತಿದೆ ತನ್ನ
ಲಘು ಹಾಗೂ ಗರಿಮಾ ಶಕ್ತಿಯನ್ನು

|| ಶ್ರೀ ಕೃಷ್ಣಾರ್ಪಣ ಮಸ್ತು ||

ಶ್ರೀ ವಿಷ್ಣು ಪ್ರೇರಣಯಾ

ಶ್ರೀ ವಿಷ್ಣು ಪ್ರೇರಣಯಾ
ಶ್ರೀ ವಿಷ್ಣು ಪ್ರೀತ್ಯರ್ಥಎಂಬ
ಅನುಸಂಧಾನದಿಂದ ಕೆಲಸ ಮಾಡಿ
ನಾಹಂ ಕರ್ತಾ
ಹರಿ ಕರ್ತಾ ಎಂದು
ಅರಿತು ಚಿಂತೆ ಕಳವಳಗಳಿಂದ
ದೂರವಿರಿ

|| ಶ್ರೀ ಕೃಷ್ಣಾರ್ಪಣ ಮಸ್ತು ||