ಚಾತುರ್ಮಾಸ್ಯ ವ್ರತ ಏಕಾದಶಿ ಹಾಗೂ ಕೃಷ್ಣ ಜಯಂತಿಯಂತೆ ಕಡ್ಡಾಯ ವ್ರತ. ಕೆಲವೊಮ್ಮೆ ಇದು ಗೊತ್ತಿರಬಹುದು. ಗೊತ್ತಾದ ಮೇಲೂ ಹೇಗೆ ಆಚರಿಸಬೇಕು ಎಂಬ ಗೊಂದಲದಿಂದ ಆಚರಣೆ ಮಾಡದಿರಬಹುದು. ಗೊಂದಲಗಳಿಂದ ಆಚರಣೆ ತಪ್ಪದಿರಲಿ ಎಂಬ ಸದುದ್ದೇಶದಿಂದ ಅಭಿಜಿತ ವೀ ಆ ಮತ್ತು ನನ್ನ ನಡುವೆ ಈ ವಿಷಯವಾಗಿ ನಡೆದ ಸಂವಾದವನ್ನು ದಾಖಲಿಸುತ್ತಿರುವೆ.
ಪ್ರಥಮವಾಗಿ ಈ ವ್ರತ ನಾಲ್ಕು ಭಾಗಗಳಿಂದ ಕೊಡಿದ್ದಾಗಿದೆ. ಪ್ರತಿ ಭಾಗದಲ್ಲೂ ಒಂದೊಂದು ಪದಾರ್ಥ ವರ್ಜ್ಯವೆನಿಸಿದೆ.
ಸಂಕಲ್ಪ ಹಾಗೂ ಸಮರ್ಪಣೆ ಪ್ರತಿ ದೇವ ಕಾರ್ಯದ ಮುಖ್ಯ ಅಂಗಗಳು. ಚಾತುರ್ಮಾಸ್ಯ ಕೂಡ ಇದಕ್ಕೆ ಹೊರತಲ್ಲ. ಮುಖ್ಯ ವ್ರತ ಹಾಗೂ ಪ್ರತಿ ಭಾಗದ ಮೊದಲು ಮತ್ತು ಕೊನೆಗೆ ಸಂಕಲ್ಪ ಹಾಗೂ ಸಮರ್ಪಣೆ ಮಾಡುವುದು ಕಡ್ಡಾಯ.
ಚಾತುರ್ಮಾಸ್ಯದ ನಾಲ್ಕು ಭಾಗಗಳು :
ಶಾಕ ವ್ರತ: ಹಣ್ಣು ಮತ್ತು ತರಕಾರಿ ತ್ಯಾಗ
ದಧಿ ವ್ರತ: ಮೊಸರಿನ ತ್ಯಾಗ
ಕ್ಷೀರ ವ್ರತ: ಹಾಲಿನ ತ್ಯಾಗ
ದ್ವಿದಳ ವ್ರತ: ದ್ವಿದಳ ಧಾನ್ಯ ತ್ಯಾಗ
ನಮ್ಮ ಸಂವಾದದ ಮುಖ್ಯ ಗುರಿ ವ್ರತ ಕಾರ್ಯ ರೂಪಕ್ಕೆ ತರುವಾಗ ಪ್ರತಿ ದಿನ ಅನುಕೂಲವಾಗುವ ಕೆಲವು ಸಲಹೆ ಸೂಚನೆಗಳು. ಅದರಲ್ಲೂ ಅನೇಕ ಗ್ರಂಥಗಳು ಏನು ತಿನ್ನಬಾರದು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತವೆ. ಆದರೆ ಏನು ತಿನ್ನಬಹುದು ಎಂಬ ಬಗ್ಗೆ ಮಾಹಿತಿ ದೊರಕುವುದು ಕಡಿಮೆ.
ಇದು ಚಾತುರ್ಮಾಸ್ಯದ ಬಗ್ಗೆ ಸಂಪೂರ್ಣ ಆಧ್ಯಾತಿಕ ಪರಿಚಯವಲ್ಲ. ಮಂತ್ರ, ಜಪ, ತಪ, ಅನುಸಂಧಾನ ಇದರ ಬಗ್ಗೆ ನಾವು ಇಲ್ಲಿ ಗಮನ ಹರಿಸಿಲ್ಲ. ಅದಕ್ಕಾಗೇ ಅನೇಕ ಗ್ರಂಥಗಳುಂಟು.
ಡಾ|| ವ್ಯಾಸನಕೆರೆ ಪ್ರಭಂಜನಚಾರ್ಯರು ಈ ಬಗ್ಗೆ ಎರಡು ಗ್ರಂಥ ಪ್ರಕಟಿಸಿದ್ದಾರೆ. ಒಂದು ಚಾತುರ್ಮಾಸ್ಯ ವ್ರತ ಇನ್ನೊಂದು ಸದಾಚಾರ ವಿನೋದ. ಭಕ್ತರು ಅದರ ಪ್ರಯೋಜನ ಪಡೆಯಬೇಕು ಎಂದು ವಿನಂತಿ.
ಚಾತುರ್ಮಾಸ್ಯ ವ್ರತ ಕಾರ್ಯ ರೂಪಕ್ಕೆ ತರುವಾಗ ಎರಡು ಭಾಗಗಳು ಸವಾಲಿನಿಂದ ಕೂಡಿದವಾಗಿವೆ. ಅವು ಶಾಕ ವ್ರತ ಹಾಗೂ ದ್ವಿದಳ ವ್ರತ. ಇವೆರಡಕ್ಕೂ ಮನೆಯಲ್ಲಿ ಎಲ್ಲರ ಸಹಕಾರ ಬಲು ಮುಖ್ಯ. ಏಕೆಂದರೆ ಎಲ್ಲರೂ ವ್ರತ ಮಾಡದಿರುವಾಗ ಎರಡು ಅಡಿಗೆ ಒಂದು ವ್ರತದ್ದು ಮತ್ತೆ ಇನ್ನೊಂದು ಸಾಮಾನ್ಯದ್ದು ಮಾಡುವುದು ಕಠಿಣ.
ಶಾಕ ವ್ರತ
ತರಕಾರಿ ಮತ್ತು ಹಣ್ಣುಗಳನ್ನು ಬಿಡುವುದಾಗಿದೆ.
ಮಾಸ ನಿಯಾಮಕ : ಶ್ರೀಧರ
ತಿನ್ನಬಹುದು:
ತೊಗರಿ ಬೆಳೆ
ಹೆಸರ ಕಾಳು
ಉದ್ದಿನ ಬೆಳೆ
ಎಳ್ಳು
ಜೀರಿಗೆ
ಮೆಣಸು
ಬೆಲ್ಲ
ಒಣಗಿದ ಮಾವಿನಕಾಯಿ ಪುಡಿ (ಆಮ್ಚುರ್)
ಅಕ್ಕಿ ಹಿಟ್ಟು
ಗೋಧಿ ಹಿಟ್ಟು
ರವಾ
ಒಣ ಕೊಬ್ಬರಿ
ಹಣ್ಣಾದ ಮಾವು
ಒಣಗಿದ ನೆಲ್ಲಿಕಾಯಿ
ಒಣಗಿದ ಶುಂಠಿ
ಸಕ್ಕರೆ
ಹಾಲು, ಮೊಸರು, ಬೆಣ್ಣೆ
ಅಗಿಸೆ ಸೊಪ್ಪು
ಬಿಳೆ ದಂಟು ಸೊಪ್ಪು
ಗೋಯಿನ ಜೋಳ ಅಥವಾ ಮುಸುಕಿನ ಜೋಳ
ತಿನ್ನಬಾರದ್ದು:
ತರಕಾರಿ
ಹುಣಸೆ
ಕಡ್ಲಿ ಬೆಳೆ ಹಾಗೂ ಹಿಟ್ಟು
ತೆಂಗಿನ ಕಾಯಿ
ಹಣ್ಣು (ಮಾವಿನ ಹಣ್ಣು ಮತ್ತು ಉತ್ತತ್ತಿ ಬಿಟ್ಟು)
ಕೆಂಪು ಮೇಣಸೀನ ಕಾಯಿ
ಅರಿಶಿಣ
ಇಂಗು
ಕೇಸರಿ, ಪಚ್ಚ ಕರ್ಪೂರ , ಲವಂಗ ದೇವರ ತೀರ್ಥಕ್ಕೆ ಹಾಕುವಂತಿಲ್ಲ
ಜೇನು (ಪಂಚಾಮೃತಕ್ಕೂ ಉಪಯೋಗಿಸಕೂಡದು)
ಒಣ ಹಣ್ಣುಗಳು (ಯಾಲಕ್ಕಿ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ )
ಬಾಳಿ ಕಾಯಿ
ಶಾಕ ವ್ರತ ಕಾಲದಲ್ಲಿ ಕರಿ ಮೆಣಸಿನ ಹೆಚ್ಚಿನ ಉಪಯೋಗದಿಂದ ಪಿತ್ತ ಹೆಚ್ಚಾಗಿ ಹೊಟ್ಟೆ ಉರಿತ ಅಥವಾ ಕೆಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ತಂಪಾಗಿಸಲು ಮುಂಜಾನೆ ಹೆಚ್ಚಿನ ಮೊಸರು, ಮಜ್ಜೆಗೆ ಮತ್ತು ಮಧ್ಯಾನ್ಹ ತುಪ್ಪದ ಉಪಯೋಗ ಮಾಡಬಹುದು. ಹೆಸರ ಬೇಳೆ ಪಾಯಸ ಕೂಡ ಹೊಟ್ಟೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಹೆಚ್ಚಾದ ಬೆಲ್ಲ ಕೂಡ ಪಿತ್ತದ ಹೆಚ್ಚಿಸಲು ಕಾರಣವಾಗಬಹುದು. ಅದಕ್ಕೆ ನೋಡಿಕೊಂಡು ಬೆಲ್ಲದ ಬಳಕೆ ಮಾಡಬೇಕು.
ಮಾವಿನ ಹಣ್ಣು ಅಷ್ಟು ಒಳ್ಳೆಯದು ಮಾರುಕಟ್ಟೆಯಲ್ಲಿ ಸಿಗದಿರಬಹುದು. ಅಂದರೆ ಅತಿಯಾಗಿ ಹಣ್ಣಾಗಿರಬಹುದು. ಹಾಗಿದ್ದಾಗ ತಿನ್ನಲಾಗದಿದ್ದಾರೆ ಅದಕ್ಕೆ ಹಾಲು ಸೇರಿಸಿ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು.
ಆಮ್ ಚುರ್ ಪುಡಿ ಎವರೆಸ್ಟ್ ಬ್ರಾಂಡಿನದ್ದು ಎಲ್ಲ ಮಳಿಗೆಗಳಲಿ ದೊರೆಯುತ್ತದೆ. ಇದನ್ನು ಚಾಟ್ ಮಾಡಲು ಕೂಡ ಉಪಯೋಗಿಸುತ್ತಾರೆ.

ಒಣಗಿದ ಮಾವಿನ ಕಾಯಿ ಸಾರಿಗಾಗಿ. ಇದು ಮಾಧ್ವ ಬಂಧುಗಳು ನಡೆಸುವ ಸಾರಿನ ಪುಡಿ ಅಂಗಡಿಗಳಲ್ಲಿ ದೊರಕುತ್ತದೆ.

ಸಾಬೂದಾನೆ, ಮುಸುಕಿನ ಜೋಳ ಹಾಗೂ ಕರಿ ಮೆಣಸಿನ ಬೋಂಡಾ ಸವಿಯಲು ಬೊಂಬಾಟಾಗಿ ಇರುತ್ತೆ.
ಎಳ್ಳು ಬೆಲ್ಲದ ಉಂಡೆ (ಯಾಲಕ್ಕಿ ಇರಕೂಡದು)

ಶಾಕ ವ್ರತ ಮಾಡುವಾಗ ಏಕಾದಶಿ ಹೆಚ್ಚು ಸಹನೀಯವಾಗಿ ಅದು ಕೂಡ ಉತ್ತಮ ಪುಣ್ಯ ಫಲ ಪ್ರಾಪ್ತಿಗೆ ಕಾರಣವಾಗುತ್ತದೆ.
ಶಾಕ ವ್ರತದ ಕೊನೆಗೆ ತರಕಾರಿಗಳ ದಾನವನ್ನು ಯೋಗ್ಯ ಬ್ರಾಹ್ಮಣನಿಗೆ ಕೊಡಬೇಕು. ಅದರಲ್ಲಿ ಟೊಮ್ಯಾಟೋ ಹಾಗೂ ಗಜ್ಜರಿ ನಿಷಿದ್ಧ. ಆಲೂಗಡ್ಡೆ ಕೊಡಬಹುದು.

ಅನ್ನ ತಿನ್ನಬಹುದ
ReplyDeleteಖಾರದ ಪುಡಿ ಬಳಸಬಹುದು
ReplyDelete