Total Pageviews

Monday, October 1, 2018

ದೇವರೇ ಏಕೆ ನಮಗೆ ನಿಜವಾದ ತಂದೆ ತಾಯಿ?

 
ಊಟ ಮಾಡುವಾಗ ಗೋವಿಂದ ಗೋವಿಂದ ನಾಮಸ್ಮರಣೆ ಮಾಡಬೇಕು. 
 
ಕುಡಿದ ನೀರು ಹಾಗೂ ತಿಂದ ಆಹಾರ ಮೂರು ಭಾಗ ಮಾಡಿ: 
[] ಅತಿ ಸ್ಥೂಲ ಭಾಗ ಮಲ ಮೂತ್ರವಾಗಿ ವಿಸರ್ಜನೆಯಾಗುತ್ತದೆ 
[] ಮಧ್ಯದ ಭಾಗ ರಕ್ತ ಹಾಗೂ ಮಾಂಸವಾಗಿ ಪೋಷಣೆ ನೀಡುತ್ತದೆ 
[] ಸೂಕ್ಸ್ಮ ಭಾಗ ವಾಕ್ ಶಕ್ತಿ ಹಾಗೂ ಮನಸ್ಸಿಗೆ ಪ್ರಚೋದಕವಾಗುತ್ತದೆ 
ನಾವು ಸಾಯುವವರೆಗೆ ವ್ಯವಸ್ಥೆ ಮಾಡುವವನು ದೇವರು. 
 
ದೇವರು ಮಾಡಿ ಕೊಟ್ಟ ದೊಡ್ಡ ಆಸ್ತಿ ದೇಹ. ಆಸ್ತಿಯ ಮಹತ್ವ ಅದರ ಬಗ್ಗೆ ತಿಳುವಳಿಕೆ ಬಂದಾಗ ಮಾತ್ರ ಇಲ್ಲದಿದ್ದರೆ ನಾಸ್ತಿ. ಆಸ್ತಿ ಉತ್ಪತ್ತಿ ಮಾಡಿದವ ದೇವರು. ಭೂಮಿ ಹಾಗೂ ಸಮುದ್ರದ ಆಳದಲ್ಲಿ ಲೋಹಗಳ, ಮುತ್ತು ರತ್ನಗಳ ಸೃಷ್ಟಿ ಮಾಡಿದವ ದೇವರು. ಆದ್ದರಿಂದ ಇದು ನಿಜವಾಗಿ ದೇವರದ್ದೇ. ಮನುಷ್ಯನಿಗೆ ಅದರ ತಿಳುವಳಿಕೆ, ಪಡೆಯುವ ವಿಧಾನ ಹಾಗೂ ಭೋಗಿಸಿ ಆನಂದ ಆಗುವ ಹಾಗೆ ಮಾಡಿದ್ದು ಭಗವಂತ.  
 
ಉಪಕಾರ ಸ್ಮರಣೆ ಮಾಡಬೇಕು. ಮಹೋಪಕಾರ ಮಾಡಿದ ದೇವರ ಸ್ಮರಣೆ ನಿರಂತರವಾಗಿ ಮಾಡಬೇಕು. 

No comments:

Post a Comment