ಸಂಧ್ಯಾವಂದನೆ - ಭಾಗ ೧
ಸಂಧ್ಯಾವಂದನೆ - ಭಾಗ ೨
ಸಂಧ್ಯಾವಂದನೆ - ಭಾಗ ೩
ಸಂಧ್ಯಾವಂದನೆ - ಭಾಗ ೪
ಸಂಧ್ಯಾವಂದನೆ - ಭಾಗ ೫
ಸಂಧ್ಯಾವಂದನೆ - ಭಾಗ ೬
ಸಾರಾಂಶ: ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಕೂಡಿದ ಆಧ್ಯಾತ್ಮಿಕ ಸಾಧನೆಗೆ ಪರಿಪೂರ್ಣವಾದ ದಾರಿ
ಕೃತಜ್ಞತೆ ಸಲ್ಲಿಸುವುದು ಅಥವಾ ಉಪಕಾರದ ಸ್ಮರಣೆ. ತಿಳಿದು ಮಾಡಿದ ಜಾಣತನದಿಂದ ಸತ್ಫಲ ಬೇಗ ದೊರೆಯುತ್ತದೆ. ನಿತ್ಯ ಅನುಷ್ಟಾನ ಸಾವಿರಾರು ವರ್ಷಗಳ ಆಚರಿಸಿ ಸಂಸ್ಕರಿಸಿ ಸಿದ್ಧಿಯಾದ ಸಾಬೀತಾದ ಕ್ರಮ.
ಪುಂಡರೀಕಾಕ್ಷ : ಪುಂಡರೀಕ ಅಕ್ಷ - ಕಮಲದಂತಹ ಕಣ್ಣು - ಕಮಲ ಕೆಸರಲ್ಲಿ ಬೆಳೆದರೂ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ. ಕಣ್ಣನ್ನು ಎಂದು ಸ್ವಚ್ಛಗೊಳಿಸುವ ಅವಶ್ಯಕತೆ ಇಲ್ಲ. ಭಗವಂತ ಶುದ್ಧ ಎಂದು ನೆನೆಪಿಸಿಕೊಂಡಾಗ ನಮ್ಮ ದೋಷ ಕಳೆದುಕೊಳ್ಳುತ್ತೇವೆ
ನೆಲದಲ್ಲಿ ಗುರುತ್ವಾಕರ್ಷಣ ಶಕ್ತಿ ಕೆಳಕ್ಕೆ ಎಳೆಯುತ್ತೆ. ರೇಷ್ಮೆ, ಅಜಿನ ಹಾಗೂ ದರ್ಭೆ ಆ ಕೆಳಕ್ಕೆ ಎಳೆಯುವ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ.
ತಾಮ್ರ, ಭಂಗಾರ ಅಥವಾ ಹಿತ್ತಾಳೆಯ ಪಾತ್ರೆ ಉಪಯೋಗಿಸುವುದು ಉತ್ತಮ. ಬೆಳ್ಳಿ ದೇವ ಕಾರ್ಯಕ್ಕೆ ಉಪಿಯೋಗಿಸುವುದು ಒಳ್ಳೆಯದಲ್ಲ.
ಕೇಶವ: ಸೂರ್ಯನ ಕಿರಣಗಳೆಂಬ ಕೂದಲು
ಅಹಂ ಭಾವವೇ ಕಲಿ.
ಮನಸ್ಸು ಒಂದೇ ವಿಷಯದಲ್ಲಿ ಏಕಾಗ್ರವಾಗಿ ಕೂಡಿಸುವುದೇ ಕುಂಡಲಿನೀ ಶಕ್ತಿ
ಚಕ್ರ: ಧರ್ಮ ಚಕ್ರ. ಅಜ್ಞಾನ ಕಳೆಯಲು
ಶಂಖ: ಜ್ಞಾನ ಸಿಗಲು ಹಾಗೂ ಪಾಪ ಕಳೆಯಲು
ಗಧೆ : ದುಷ್ಟ ಕಾಮನೆಗಳ ನಿಗ್ರಹ
ಪದ್ಮ: ಕೊಳೆಯನ್ನು ತಗೆದು ಶುದ್ಧವಾಗಿಸಲು
ನಾರಾಯಣ : ರಕ್ಷಣೆ
ಅಕ್ಷತೆ: ತುಂಡಾಗದ ಅಕ್ಕಿ. ಕೈಯ ಪ್ರಾಣ ಶಕ್ತಿಯ ಪ್ರಭಾವವನ್ನು ನಮಗೆ ತಂದು ಕೊಡುತ್ತದೆ
೨೪ ನಾಮಗಳ ಅರ್ಥ:
ನಾರಾಯಣ : ದೋಷರಹಿತ
ಮಾಧವ : ಮಾ - ಲಕ್ಷ್ಮಿ ದೇವಿ ಧವ - ಗಂಡ - ಲಕ್ಷಿ ನಾರಾಯಣ
ಗೋವಿಂದ : ಗೋವು, ವೇದ ಹಾಗೂ ನಂಬಿದವರನ್ನು ರಕ್ಷಿಸುವವನು. ವೇದದಿಂದ ತಿಳಿಯತಕ್ಕವನು
ವಿಷ್ಣು : ಪ್ರತಿ ವಸ್ತುವಿನಲ್ಲೂ ಪ್ರವೇಶಿಸುವವ. ಸಂಸಾರ ಎಂಬ ವಿಷ ಕಳೆಯುವವ
ಹೃಷಿಕೇಶ: ಭಗವಂತನ ಸ್ಮರಣೆಯಿಂದ ರೋಮ ನಿಮಿರುವಂತ ಸಂತೋಷ ಕೊಡುವವ
ಪದ್ಮನಾಭ: ಹೊಕ್ಕಳಿಂದ ಬ್ರಹ್ಮಾಂಡ ಸೃಷ್ಟಿಸಿದವ
ದಾಮೋದರ: ಹೊಟ್ಟೆಗೆ ತಾಯಿಯಿಂದ ಹಗ್ಗ ಕಟ್ಟಿಸಿಕೊಂಡವ
ಸಂಕರ್ಷಣ: ಎಲ್ಲವನ್ನು ಚೆನ್ನಾಗಿ ತನ್ನೆಡೆ ಎಳೆದುಕೊಳ್ಳುವವ
ಮಧುಸೂಧನ :
ತ್ರಿವಿಕ್ರಮ:
ವಾಮನ :
ಶ್ರೀಧರ:
ವಾಸುದೇವ: ಯಾರಿಗೆ ನಂಬಿಕೆ ಇದೆಯೋ ಅವರಿಗೆ ನಂಬಿಕೆ ಹುಟ್ಟಿಸುವ ಯಾರಿಗೆ ನಂಬಿಕೆ ಇಲ್ಲವೋ ಅವರಿಗೆ ನಂಬಿಕೆ ಕಳೆಯುವ
ಪ್ರದ್ಯುಮ್ನ: ಹೃದಯದಲ್ಲಿ ಹೊಳೆಯುವ
ಅನಿರುದ್ಧ: ಯಾರನ್ನೂ ತಡೆಯಲು ಸಾಧ್ಯವಿಲ್ಲ
ಪುರುಷೋತ್ತಮ: ಸಾಧಕ ಜೀವರಲ್ಲೇ ಸರ್ವೋತ್ತಮ
ಅಧೋಕ್ಷಜ: ಮುಚ್ಚಿದ ಕಣ್ಣಿಗೆ ಕಾಣುವವ
ನರಸಿಂಹ: ನರ (ಬುದ್ಧಿ) + ಸಿಂಹ (ಪ್ರಾಮಾಣಿಕತೆ)
ಅಚ್ಯುತ: ಚ್ಯುತಿ ಇಲ್ಲದವ
ಜನಾರ್ಧನ: ಜನನ ನಾಶ
ಉಪೇಂದ್ರ: ಇಂದ್ರನ(ಚಟುವಟಿಕೆ ಕಾರಣ) ಹತ್ತಿರ ಇರುವವ
ಹರಿ: ಪಾಪಗಳನ್ನು ಪರಿಹರಿಸುತ್ತಾನೆ
ಕೃಷ್ಣ: ಜೀವನ ಕೃಷಿಕ. ಜೀವನವೆಂಬ ಭೂಮಿಯನ್ನು ಚೆನ್ನಾಗಿ ಉಟ್ಟು ಕರ್ಮ ಫಲವನ್ನು ಕೊಡುವ ಕೃಷಿಕ
ಅಚ್ಯುತ, ಅನಂತ, ಗೋವಿಂದ: ನಾಮದ ಅರ್ಥ
ಅಚ್ಯುತ: ಚ್ಯುತಿ ಇಲ್ಲದವ
ಅನಂತ : ಸಾಮಥ್ಯ೯ ಕಾಲ ಮತ್ತು ದೇಶದ ಮಿತಿ ಇಲ್ಲದವನುಅದಕ್ಕೆ ಅವನು ಅಚ್ಯುತ.
ಗೋವಿಂದ : ಗೋವು, ವೇದ ಹಾಗೂ ನಂಬಿದವರನ್ನು ರಕ್ಷಿಸುವವನು. ವೇದದಿಂದ ತಿಳಿಯತಕ್ಕವನು
ಒಟ್ಟು ಉಸಿರಾಟದ ಸಂಖ್ಯೆ ೭೭ ಕೋಟಿ ೭೮ ಲಕ್ಷ್ಯ. ಒಂದು ಉಸಿರಿಗೆ ೪ಸೆ.
ಜ್ಞಾನ ಮುದ್ರೆಯ ಮಹತ್ವ: ಯಾವುದೇ ಕಾರ್ಯದಲ್ಲಿ ಕೈ ಉಪಯೋಗಿಸದೆ ಇದ್ದಾಗ ಜ್ಞಾನ ಮುದ್ರೆ ಮಾಡುವುದು ಉತ್ತಮ
ಜಪ ಸಿದ್ಧಿಯಾಗಬೇಕು ಎಂದರೆ:
[೧] ಸಂತೋಷದ ಮನಸ್ಸಿನಿಂದ ಕೂಡಿರಬೇಕು
[೨] ಶುಚಿಯಾದ ಬಟ್ಟೆ, ಆಸನ ಹೊಂದಿರಬೇಕು
[೩] ಮೌನ: ನಿಜವಾದ ಅರ್ಥ ಮನನ. ಬೇರೆ ವಿಷಯ ಯೋಚಿಸದೇ. ಇಡೀ ಮಂತ್ರದ ಅರ್ಥ ಒಟ್ಟು ತಾತ್ಪರ್ಯ. ಈ ಮಂತ್ರದಲ್ಲಿ ಏನು ಚಿಂತಿಸುತಿದ್ದೇನೆ ಎಂಬುದರ ಮೇಲೆ ಗಮನ
[೪] ಸಮಾಧಾನದಿಂದ ಹಾಗೂ ಆಲಸ್ಯವನ್ನು ತೊರೆದು ಉತ್ಸಾಹದಿಂದ ಕೂಡಿರಬೇಕು
ಅರ್ಘ್ ಕೊಡುವಾಗ ಹೆಬ್ಬೆರಳು ತರ್ಜನೆ ಬೆರಳಿಗೆ ಸ್ಪರ್ಶಿಸದೆ ಇರುವುದು ನಾನು ಮಾಡುತ್ತೇನೆ ಎಂಬ ಭಾವನೆಯ ತ್ಯಾಗ
ಮಂದೇಹ ಉದಾಸೀನ ಎಂಬ ರಾಕ್ಷಸರನ್ನು ಓಡಿಸುವುದು. ಕಾಲಕ್ಕೆ ಸರಿಯಾಗಿ ಮಾಡಲು ಬಿಡದ ರಾಕ್ಷಸರು
ಧನಾತ್ಮಕ ಶಕ್ತಿ ಇರುವವರೆಗೆ ಋಣಾತ್ಮಕ ಶಕ್ತಿ ಇದ್ದದ್ದೇ
ಅಶುಚಿ ಇದ್ದಾಗಲೂ ಕೂಡ ಸರಿಯಾದ ಸಮಯದಲ್ಲಿ ಮಾಡಲೇಬೇಕು
ಓಂ (ಆ + ಉ + ಮ) => ವ್ಯಾಹೃತಿ => ಗಾಯತ್ರಿ => ಪುರುಷಸೂಕ್ತ => ಸಮಗ್ರ ವೇದಗಳು
ಗಾಯತ್ರಿ ಮಂತ್ರದಲ್ಲಿ ಸಕಲ ವೇದಗಳ ಅರ್ಥವನ್ನು ಕಂಡುಕೊಳ್ಳಬಹುದು
ಆ : ನಾವು ತಿಳಿಯಲಾಗದ್ದು
ಉ : ನಾವು ತಿಳಿದದ್ದೆಲ್ಲಕಿಂತಲೂ ಎತ್ತರದಲ್ಲಿ ಇರುವುದು
ಮ: ನಾವು ತಿಳಿದದ್ದು ಯಾವುದು ಅಲ್ಲ ಎಂದು ತಿಳಿದುಕೊಳ್ಳಬೇಕು
ಭೂರ್ಭೂವ ಸ್ವಃ : ಪೂರ್ಣ, ಸುಖವನ್ನು ನೀಡುವವ, ಎಲ್ಲಕಿಂತ ಹೆಚ್ಚು ಬೆಳೆಯುವವ
ಯಾರು ನಮ್ಮ ಬುದ್ಧ್ಹಿಯನ್ನು ಪ್ರೇರೇಪಿಸುತ್ತಾರೋ
ಯಾರು ಸೃಷ್ಟಿಯ ಆದಿಯಿಂದ ಇಲ್ಲಿಯವರೆಗೂ ವ್ಯಾಪಿಸಿಕೊಂಡು ನಿಂತು
ಸ್ತೋತ್ರ ಮಾಡಲಿಕ್ಕೆ ಯೋಗ್ಯರಾದರವರಲ್ಲಿ ಎಲ್ಲಕಿಂತ ಉತ್ತಮನಾದ ಎಲ್ಲ ಕಡೆ ಇರುವ
ಎಲ್ಲ ಮಂತ್ರಗಳ ರಾಜ ಓಂಕಾರ
ವ್ಯಾಹೃತಿಯ ಅರ್ಥ:
ಭೂ : ಪೂರ್ಣ (ಸ್ಪೂರ್ತಿ ಕೊಡುತ್ತದೆ) (ವರಾಹ)
ಭೂವಃ : ಯಾರು ಯಾರು ಎತ್ತರಕ್ಕೆ ಏರುವರಿದ್ದರೋ ಅವರೆಲ್ಲರಿಗಿಂತಲೂ ಎತ್ತರದಲ್ಲಿ ಇರುವವನು (ಹಿಡಿದ ಕೆಲಸವನ್ನು ಮುಗಿಸುವ ತಾಕತ್ತು ಬರುತ್ತೆ)
ಸ್ವ : ಅನಂತ ಸುಖ. ಜ್ಞಾನ ಮತ್ತು ಆನಂದವನ್ನು ಚೆನ್ನಾಗಿ ಹೊಂದಿದವ ಭಗವಂತ. ಸುಬಲ (ನಮ್ಮ ಯೋಗ್ಯತೆಗೆ ಅನುಗುಣವಾದ ಬಲ ದೊರಕುತ್ತೆ)
ಗಾಯತ್ರಿ ಹತ್ತು ಶಬ್ದಗಳು
ಎಂಟು ಮಹಾ ಮಂತ್ರಗಳು
ತರ್ಪಣ : ಋಣ ಅಥವಾ ಕೃತಜ್ಞತೆ ಸಲ್ಲಿಸಿ ದೇವರನ್ನು ಸಂತುಷ್ಟಿಗೊಳಿಸುವುದು
ತತ್ - ಪರಶುರಾಮ ಚಿಂತಿಸಬೇಕು
ವರೇಣ್ಯಂ : ಬಿಡಿಸಿ ಕೊಂಡು ಜಪಿಸಿಬೇಕು
ಪಂಚ ಅವಸಾನ : ಮಂತ್ರಾರ್ಥ ಚಿಂತನೆಗೆ ಐದು ಸಲ ನಿಲ್ಲಿಸಬೇಕು
ಚಕ್ರ ಅಜ್ಞಾನ ಹೋಗಲು. ಶಂಖ ಜ್ಞಾನ ದೊರೆಯಲು
ಪ್ರತಿ ೧೦ ಜಪಕ್ಕೆ ಒಂದು ಅರ್ಘ್
ಗಾಯತ್ರಿಯಲ್ಲಿ ದಶಾವತಾರ ಚಿಂತನೆ:
ಮತ್ಸ್ಯ : ವ್ಯಾಪಿಸುವುದು
ಕೂರ್ಮ : ಹೊರಗೆ ಹಾಕುವುದು
ವರಾಹ : ಶ್ರೇಷ್ಟ
ನರಸಿಂಹ : ಎಲ್ಲ ದಿಕ್ಕುಗಳನ್ನು ವ್ಯಾಪಿಸಬಲ್ಲ ಹಾಗೂ ಕ್ಷಣ ಮಾತ್ರದಲ್ಲಿ ಎಲ್ಲಿ ಬೇಕೋ ಅಲ್ಲಿ ಹೋಗಬಲ್ಲ
ವಾಮನ: ದೇವರ ಲೋಕದಲ್ಲಿ ಬೆಳೆದ ರೂಪ
ಪರಶುರಾಮ : ಭೂಮಿಯನ್ನು ರಕ್ಷಿಸಿದ ರೂಪ
ರಾಮ: ಲೋಕದಲ್ಲಿ ಹೇಗಿರಬೇಕೆಂಬ ಬುದ್ಧಿವಾದ ಮಾಡಿದ ರೂಪ
ಕೃಷ್ಣ : ಗೀತೆಯ ಉಪದೇಶದ ಮೂಲಕ ಎಲ್ಲವನ್ನು ತಿಳಿಸಿದ ರೂಪ
ಬುದ್ಧ: ನೀವು ತಿಳಿದದ್ದರ ಆಚೆ ಇದ್ದದ್ದು ದೇವರು ಎಂದು ತಿಳಿಸಿದ್ದು
ಕಲ್ಕಿ: ಕಲಿತನ ನಾಶ ಮಾಡಿ ಕೃತಯುಗ ಪ್ರಾರಂಭಕ್ಕೆ ಪ್ರಚೋದನೆ ನೀಡುವ ರೂಪ
Nice Summary. You have captured most of the key points.
ReplyDelete