Total Pageviews

Sunday, January 14, 2018

ಭಾಗವತದ ಸಾರ

ಶ್ರೀ ಸತ್ಯಾತ್ಮ ತೀರ್ಥರ ಶ್ರೀಮದ್ ಭಾಗವತ ಪ್ರವಚನ -  ೨೦೧೭ - ಮುಂಬೈ

ಸಾರಾಂಶ:
ಭಗವಂತನ ಸ್ಪಷ್ಟ ಜ್ಞಾನಕ್ಕಾಗಿ ಭಾಗವತದಲ್ಲಿ ಈ ಕೆಳಗಿನ ವಿಷಯ ತಿಳಿಸಿದ್ದಾರೆ.
[೧] ಸೃಷ್ಟಿ ಕ್ರಮ
[೨] ದುಷ್ಟರ ನಿಗ್ರಹ
[೩] ಶಿಷ್ಟರ ಪೋಷಣೆ
[೪] ಕರ್ಮಗಳ ಫಲ - ವಿವೇಕ
[೫] ಮನ್ವಂತರ - ಇಂದ್ರ, ಸಪ್ತ ಋಷಿ
[೬] ಭಗವಂತನ ರೂಪಗಳು
[೭] ಶಾಸ್ತ್ರಕ್ಕೆ ಅನುಗುಣವಾದ ಜೀವನ ಯೋಗ್ಯತೆಗೆ  ಸರಿಯಾದ ಶಿಕ್ಷಣದ ಕತೆಗಳು
[೮] ಪ್ರಳಯ
[೯] ಮೋಕ್ಷದ ಸ್ಪಷ್ಟ  ಕಲ್ಪನೆ - ಸ್ವರೂಪಾನಂದ ಭಾವವೇ ಮೋಕ್ಷ



ಭಾಗವತ(ಭಗವಂತ => ಬ್ರಹ್ಮ => ನಾರದ) ನಾಲ್ಕು ಭಾಗ ಮಾಡಿದರೆ. ಅವು ಕೆಳಗಿನವುಗಳು.
[೧] ಭಗವಂತ ಸದಾ ಸ್ವತಂತ್ರ ನಾವು ಸದಾ ಪರತಂತ್ರರು
[೨] ಭಗವಂತನಿಗೆ ಈ ಲೋಕದ ಅನಂತ ಜೀವ ಅಥವಾ ಜಡಗಳಿಂದ ಯಾವುದೇ ಪ್ರಯೋಜನವಿಲ್ಲ
[೩] ಭಗವಂತ ಒಳಗೆ ಹೊರಗೆ ಎಲ್ಲಡೆ ಇದ್ದಾನೆ
[೪] ಎಲ್ಲರೂ ಇರುವ ಕಾಲದಲ್ಲೂ ದೇವರಿದ್ದಾನೆ. ಯಾರು ಇಲ್ಲದ ಕಾಲದಲ್ಲೂ ದೇವರಿದ್ದಾನೆ
ಎಲ್ಲರೂ ಇರುವ ಸ್ಥಳದಲ್ಲೂ ದೇವರಿದ್ದಾನೆ. ಯಾರೂ ಇಲ್ಲದ ಸ್ಥಳದಲ್ಲೂ ದೇವರಿದ್ದಾನೆ
ಎಲ್ಲರಿಗೆ ಇರುವ ಶಕ್ತಿಯು ದೇವರಲ್ಲಿದೆ. ಯಾರಲ್ಲೂ ಇಲ್ಲದ ಶಕ್ತಿಯು ದೇವರಲ್ಲಿದೆ

ಎಲ್ಲ ದೇವರ ಸ್ತೋತ್ರ ಅಥವಾ ಜಪಗಳ ಸಂದರ್ಭದಲ್ಲಿ ಶ್ರೀ ಹರಿಯೇ ಇದೆಲ್ಲ ಶಬ್ದಗಳಿಂದ ಮುಖ್ಯ ವಾಚ್ಯ ಎಂಬ ಎಚ್ಚರಿಕೆ ಹಾಗೂ ಅನುಸಂಧಾನದಿಂದ ಮಾಡಿದಾಗ ಮಾತ್ರ ಆಯಾ ದೇವರು ನಮ್ಮನ್ನು ಅನುಗ್ರಹಿಸುವರು.

ನಾನು : ಇದು ಕೂಡ ದೇವರ ನಾಮ. ಸರ್ವಥಾ ಯಾರಿಗೆ ಯಾವಾಗಲೂ ಪ್ರೇರಕರೇ ಇಲ್ಲವೋ ಅವನು.
ಸಮೀರ : ಎಲ್ಲರಿಗೂ ಪ್ರೇರಕ. ಪ್ರಾಣ ದೇವರು

ಎಷ್ಟು ಅನಿವಾರ್ಯವೋ ಅಷ್ಟು ಮಾತಾಡಬೇಕು. ಪ್ರಾಣ ದೇವರು ಭಗವಂತನ ಮಹಿಮೆಯ ಬಗ್ಗೆ ಮಾತಾಡುತಿದ್ದರು.

ಕಾಮನೆಗಳ ಕಡಿಮೆ ಮಾಡಿಕೊಳ್ಳಬೇಕು. ಬಿಡಲಾಗದಿದ್ದಾರೆ ಭಗವಂತನ ಬೇಡಿ ಶರಣು ಹೋಗಬೇಕು. ಎಲ್ಲ ಇಷ್ಟಾರ್ಥಗಳನ್ನು ಕೊಡುವವ ಹಾಗೂ ಅನಿಷ್ಟಗಳನ್ನು ಕಳೆಯುತ್ತಾನೆ ಎಂಬ ದೃಡ ವಿಶ್ವಾಸದಿಂದ ಅವನನ್ನೇ ಭಜಿಸುವುದು ಅಂತರದೀಕ್ಷೆ.

ದೇವರ ಕಥೆ ಕೇಳದ ಕಿವಿಗಳು ಹೆಗ್ಗಣದ ಬಿಲ
ದೇವರ ಬಗ್ಗೆ ಮಾತಾಡದ ನಾಲಿಗೆ ಕಪ್ಪೆ ವಟಗುಟ್ಟಿದಂತೆ
ದೇವರಿಗೆ ಬಾಗದ ತಲೆ ದೊಡ್ಡ ಭಾರ
ದೇವರ ಪೂಜೆ ಮಾಡದ ಕೈ ಹೆಣದ ಕೈಯಂತೆ
ದೇವರ ಗುಡಿಗೆ ಹೋಗದ ಕಾಲುಗಳು ಕಟ್ಟಿಗೆಯ ಫಲಕದಂತೆ
ಸಾಮಗ್ರವನ್ನು ಭಗವಂತನಿಗೆ ಅರ್ಪಿಸಿದವನೆ ಧನ್ಯ

ಅನಾದಿ ಕಾಲದ ಅನಂತ ಕಾಲದವರೆಗೆ ಎಷ್ಟು ಉಪಯೋಗಿಸುದರೂ ಖಾಲಿಯಾಗದ ಸಂಪತ್ತು ಜೀವ ಸ್ವರೂಪದಲ್ಲಿ ತುಂಬಿದ್ದಾನೆ

ಅತ್ಯಂತ ಶ್ರೇಷ್ಟವಾದ ಸಂಪತ್ತು ತಪಸ್ಸು



No comments:

Post a Comment