Total Pageviews

Wednesday, January 24, 2018

ಸಂಧ್ಯಾವಂದನೆ - ಡಾ|| ವ್ಯಾಸನಕೆರೆ ಪ್ರಭಂಜನಚಾರ್ಯ ಪ್ರವಚನ

ಡಾ|| ವ್ಯಾಸನಕೆರೆ ಪ್ರಭಂಜನಚಾರ್ಯ ಪ್ರವಚನ

ಆರೋಗ್ಯ = ದೈಹಿಕ + ಮಾನಸಿಕ + ಆಧ್ಯಾತ್ಮಿಕ

ದೈಹಿಕ : ಶ್ರವಣ
ಮಾನಸಿಕ: ಮನನ
ಆಧ್ಯಾತ್ಮಿಕ: ಧ್ಯಾನ

ಕಾಲಕ್ಕೆ ತಕ್ಕಂತೆ ಮಾಡದಿದ್ದರೆ ಸಂಧ್ಯಾವಂದನೆಗೆ ಅರ್ಥವಿಲ್ಲ. ಕಾಲದ ಪ್ರಾಮುಖ್ಯತೆ ತೋರಲು ಸಂಧ್ಯಾ ಪದದ ಬಳಕೆ.

ಮೂರು ಭಾಗ:
[೧] ಜಪದ ಮೊದಲು
[೨] ಜಪ
[೩] ಜಪದ ನಂತರ

ಆಚಮನ: ೨೪ ನಾಮಗಳ ಮೂಲಕ ದೇವರ ಗುಣಗಳ ಸ್ಮರಣೆ.
ಕೇಶವ: ಬ್ರಹ್ಮ ರುದ್ರ ಪ್ರವರ್ತಕ. ಹರಿ ಸರ್ವೋತ್ತಮ. ಸ್ವತಂತ್ರ.

ಪ್ರಾಣಾಯಾಮ: ಆಯಾಮ - ನಿಯಂತ್ರಣ. ಪ್ರಾಣ ಶಕ್ತಿಯ ನಿಯಂತ್ರಣ. ಸ್ನಾನ ಹೊರಗಿನ ಶುದ್ದತೆ. ಪ್ರಾಣಾಯಾಮ ಆಂತರಿಕ ಶುದ್ಧತೆ.
ರೇಚನ: ಹೊರಗೆ ಹಾಕುವುದು (ಕೆಟ್ಟದ್ದು )
ಪೂರಕ: ಒಳಗೆ ತಗೆದುಕೊಳ್ಳುವುದು (ಒಳ್ಳೆಯದು)
ಕುಂಭಕ: ಹಿಡಿದಿಟ್ಟುಕೊಳ್ಳುವುದು

ಅನ್ನ, ನೀರು ಹಾಗೂ ವಾಯು ಮೂರು ಆಹಾರಗಳು. ಉಪವಾಸದಲ್ಲಿ ವಾಯು ಸೇವನೆಯಿಂದ ಶುದ್ದತೆ ಹೆಚ್ಚು.

ಬ್ರಾಹ್ಮ ಮುಹೂರ್ತ: ಬ್ರಹ್ಮ + ವಾಯು

ಆಚಮನ + ಪ್ರಾಣಾಯಾಮ + ಸಂಕಲ್ಪ : ಮೂರು ಪ್ರತಿ ಕಾರ್ಯ ಮಾಡುವ ಮೊದಲು ಮಾಡಲೇಬೇಕು

ನಾರಾಯಣ + ಲಕ್ಷ್ಮಿ ಬದಲಾಗದಿರುವರು. ಲಕ್ಷ್ಮಿ ಬರೀ ನಾರಾಯಣನ ಮೇಲೆ ಅಷ್ಟೇ ಅವಲಂಬಿತರು.

ಭಗವಂತ ಹೇಳಿದ್ದನ್ನು ಮಾಡಬೇಕು. ಅವನಿಗೆ ಪ್ರೀತಿಯಾಗುವಂತೆ ಮಾಡಬೇಕು. ಅವನಿಗೆ ಸಮರ್ಪಣೆ ಮಾಡಬೇಕು.

ಮಾರ್ಜನ: ಮಂತ್ರ ಸ್ನಾನ. ನೀರಿನಲ್ಲಿ ಹತ್ತು ದೇವತೆಗಳಿದ್ದಾರೆ. ವಾಯು ದೇವರಿದ್ದಾರೆ. ಜಲಚರ ಬದುಕಿರುವುದು ಆ ಗಾಳಿಯಿಂದಲೇ. ನೀರು ದೇವರ ಮೊದಲ ಸೃಷ್ಟಿ. ನೀರೇ ಜೀವನ.

ಜಲಾಭಿಮಂತ್ರಣ:


ಸೂರ್ಯ ಮಂತ್ರ : ಅನ್ನ + ಆರೋಗ್ಯ + ಜಾತಕ


ಅಪ್ಪಣೆ ತಗೆದುಕೊಂಡು ಕೊಡುವುದು.

ಋಷಿ: ತಲೆ
ದೇವತೆ: ಮುಖ
ಛಂದಸ್ಸು: ಹೃದಯ

ಸಂಧ್ಯಾ ಕಾಲಕ್ಕೆ ಮಂತ್ರ ನವೀಕರಣ.

ಅಂಗನ್ಯಾಸ: ಅಂಗಗಳ(ತಲೆ, ಹೃದಯ) ನ್ಯಾಸ
ಕರನ್ಯಾಸ: ಕರಗಳ ನ್ಯಾಸ

ಉಪಸ್ಥಾನ : ಎಲ್ಲ ದೇವರಿಗೂ ನಮಸ್ಕಾರ. ಹತ್ತು ದಿಕ್ಕುಗಳಿಗೂ ನಮಸ್ಕಾರ.  ಋಷಿಗಳಿಗೆ, ಜನ್ಮಾಂತರದ ತಂದೆ ತಾಯಿಗಳಿಗೆ ನಮಸ್ಕಾರ. ದುರ್ಗ ನಮಸ್ಕಾರ. ವಾಸುದೇವ ನಮಸ್ಕಾರ. ನಮೋಸ್ತು ಅನಂತಾಯ..

ಅಭಿವಾದನ: ತಾನು ಯಾರು ಎಂದು ಹೇಳಿಕೊಂಡು ಸಾಷ್ಟಾಂಗ ಮಾಡಬೇಕು.

ವಾಸುದೇವ: ಮುಕ್ತಿ ಕೊಡುವ ರೂಪ

ವಿಧಿ-ವಿಧಾನ

ತುಳಸಿ ಪೂಜೆ: ಸ್ತ್ರೀಯರಿಗೆ.
- ಕಾರ್ತಿಕ ಮಾಸದಲ್ಲಿ ಹುಣ್ಣಿಮೆ ಅವತಾರ
- ಸಮುದ್ರ ಮಥನ ಕಾಲದಲ್ಲಿ ಧನ್ವಂತರಿ ಅವತಾರದ ಕಣ್ಣಿನಿಂದ ಬಿದ್ದ ಅಮೃತ ಬಿಂದುವಿನಿಂದ ಹುಟ್ಟಿದ್ದು
- ಬೆಳಸಬಹುದು ಆದರೆ ಬಿಡಿಸುವಂತಿಲ್ಲ
- ಪ್ರದಕ್ಷಿಣೆ
- ಅರಿಶಿನ ಹಾಗೂ ಕುಂಕುಮ
- ತುಳಸಿ ಸಹಸ್ರ ನಾಮ
- ಉತ್ತ್ಹಾನ ದ್ವಾದಶಿ : ತುಳಸಿ ಲಗ್ನ


ಗೋವಿನಲ್ಲಿಲ್ಲದ ದೇವರೇ ಇಲ್ಲ.

No comments:

Post a Comment