Total Pageviews

Tuesday, March 13, 2018

ಊಟಕ್ಕೆ ಯಾವ ದಿಕ್ಕಿಗೆ ಮುಖ ಮಾಡಿ ಕೂಡಬೇಕು?

ಕೂರ್ಮ ಪುರಾಣದ ಪ್ರಕಾರ:
ಪೂರ್ವಕ್ಕೆ ಮುಖ ಮಾಡಿ ಕುಳಿತರೆ ಆಯುಷ್ಯ ವೃದ್ಧಿ
ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಕೀರ್ತಿ ಹೆಚ್ಚುತ್ತದೆ. ಜಪಕ್ಕೆ ನಿಷಿದ್ಧ.
ಪಶ್ಚಿಮ  ಮುಖ ಮಾಡಿ ಸಂಪತ್ತು ಹೆಚ್ಚುತ್ತೆ
ಉತ್ತರಕ್ಕೆ ಮುಖ ಮಾಡಿ ಕುಳಿತರೆ ಯಥಾರ್ಥ ಜ್ಞಾನ ಹಾಗೂ ಪ್ರಾಮಾಣಿಕತೆ ಹೆಚ್ಚುತ್ತದೆ ಆದ್ದರಿಂದ ಆ ದಿಕ್ಕು ಧ್ಯಾನಕ್ಕೆ ಪ್ರಶಸ್ತ. ಅಂತಹ ಮಾನಸಿಕ ಶಕ್ತಿಯನ್ನು ಊಟ ಮಾಡಿ ವ್ಯಯ ಮಾಡಬಾರದು. ಆದ್ದರಿಂದ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬಾರದು

Monday, March 5, 2018

ನಿರ್ಭಯವಾಗಿ ಬದುಕುವುದು ಹೇಗೆ?

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

[೧] (ಯೋ ಧರ್ಮಶೀಲ) ನಾನು ಜೀವನದಲ್ಲಿ ಧರ್ಮದ ದಾರಿಯಲ್ಲಿ ನಡೆಯುತ್ತೇನೆ
[೨] (ಜೀತ ಮಾನ ದೋಷ) ಧರ್ಮದ ಹಾದಿ ನಡೆಯುವಾಗ ತಟಸ್ಥರಾಗಿರುವುದು. ಹೊಗಳಿದಾಗ ಹಿಗ್ಗದಿರುವುದು ಅಥವಾ ತೆಗಳಿದಾಗ ಕುಗ್ಗಬಾರದು
- ಟೀಕೆಯಲ್ಲಿ ಸತ್ಯಾಂಶ ಇದ್ದರೆ ತಿದ್ದಿಕೊ. ಇಲ್ಲದಿದ್ದರೆ ಬಿಟ್ಟು ಬಿಡು.
[೩] (ವಿದ್ಯಾ ವಿನೀತ) ಜ್ಞಾನ ಸಂಪಾದನೆ ಮಾಡಿ ನಾನೆಷ್ಟು ಚಿಕ್ಕವನು ಎಂದು ತಿಳಿ
[೪] (ನ ಪರೋ ತಪಾತಿ) ಅವರಿಗೆ ಸರಿ ಕಂಡಂತೆ ಅವರು ಬದುಕುತ್ತಾರೆ. ಸೇಡಿನ ಪ್ರವೃತ್ತಿ ಬಿಟ್ಟು ಬಿಡುವುದು
[೫] (ಸ್ವಾದಾರ ತುಷ್ಟ ಪರದಾರ ಮಾತೃವತ್/ ವರ್ಜಿತ) ಬೇರೆಯವರ ಹೆಂಡತಿಯನ್ನು ತಾಯಿಯಂತೆ ಕಾಣುವುದು

===

ಜಾನಾತಿ - ಸಾಕ್ಷಾತ್ಕಾರ ಮಾಡಿ ಕೊಳ್ಳುವದು. ಬರೀ ಓದಿ ತಿಳಿಯುವದಲ್ಲ

ಯಾವ ಕೆಲಸ ಮಾಡುವದರಿಂದ ದೇವರ ನೆನಪು ಮಾಡಿಸುತ್ತದೆಯೋ ಅದು ಧರ್ಮ
ಕೆಳಗಿನ ಪ್ರತಿಯೊಂದು ಪ್ರಯತ್ನ ಮಾಡದಿದ್ದಾಗ ಅಹಂಕಾರ ಬರುತ್ತದೆ.