ಶನಿವಾರ : ಶನಿ, ಆಂಜನೇಯ, ವೆಂಕಟ್ರಮಣನ ನೆನಪು
ಜಾತಕದಲ್ಲಿ ಗ್ರಹಗಳ ಚಲನೆಯಿಂದ ಜ್ಯೋತಿಷ್ಯ ನುಡಿಯುತ್ತಾರೆ.
ಮನುಷ್ಯನಿಗೂ ಹಾಗೂ ಗ್ರಹಗಳಿಗೂ ಏನಾದರೂ ಸಂಬಂಧ ಇದೆಯೇ?
ಶಾಸ್ತ್ರಗಳೇ ನಮಗೆ ಎಲ್ಲದಕ್ಕೆ ಪ್ರಮಾಣ.
ಆದಿತ್ಯ ನಿಂದ ಪ್ರಾರಂಭ. ಎಲ್ಲ ನವ ಗ್ರಹಗಳು ದೇವತೆಗಳು. ಹಾಗಾದರೆ ಬೇರೆ ದೇವತೆಗಳು ಗ್ರಹಗಳಿಂದ ಗುರುತಿಸಿಲ್ಲವೆವೇಕೆ?
ದೇವತೆಗಳು ಜೀವಗಳು. ಅವರು ಸಾಧನೆ ಮಾಡಿ ಕರ್ಮ ಬಂಧನ ಕಳಚಿಕೊಳ್ಳಬೇಕು. ಮನುಷ್ಯರು ದೇವತೆಗಳನ್ನು ಹಿಡಿದುಕೊಂಡು ಕರ್ಮ ಕಳಚಿಕೊಳ್ಳಬೇಕು. ದೇವತೆಗಳಿಗೆ ಅವರವರ ಸಾಧನೆಯ ಅವಲಂಬಿಸಿ ಭಗವಂತ ಅವರಿಗೆ ಸ್ಥಾನ ಕೊಟ್ಟಿದ್ದಾನೆ. ಮನುಷ್ಯನಿಗೆ ದೇಹ ಒಂದಿದ್ದರೆ ಸಾಲದು. ಜೊತೆಯಲ್ಲಿ ಎಲ್ಲ ಬೇಕು. ಬೆಂಕಿ, ಸೂರ್ಯ, ಚಂದ್ರ ಎಲ್ಲ ಬೇಕು. ಒಂದೊಂದು ಮಂಡಲಗಳ ಅಭಿಮಾನಿಯಾಗಿ ಅವರು ದೇಹದ ಮೇಲೆ ಹಾಗೂ ಜೀವನದ ಮೇಲೆ ಪ್ರಭಾವ ಬೀರುತ್ತಾರೆ.
ಹೇಗೆ ಪ್ರಭಾವ ಬೀರುತ್ತಾರೆ? ಅವರವರ ಸ್ವಭಾವದ ಪ್ರಕಾರ ನಮ್ಮ ಪುಣ್ಯ ಪಾಪಗಳ ಮೂಲಕ ಅಭಿವ್ಯಕ್ತಿ ಮಾಡುತ್ತಾರೆ.
ಗ್ರಹಗಳು ಸ್ವತಂತ್ರ ಫಲ ಉತ್ಪತ್ತಿ ಮಾಡುವುದಿಲ್ಲ. ನಮ್ಮ ಪುಣ್ಯ ಪಾಪ್ಗಳಿಗೆ ಅನುಗುಣವಾಗಿ ಫಲ ಸೂಚಿಸುತ್ತವೆ. ಸಿಗ್ನಲ್ ಲೈಟ್ನಂತೆ ಸೂಚಕಗಳು. ರೆಡ್ ಲೈಟ್ ಬಂದಾಗ ನಾವು ವಾಹನ ನಿಲ್ಲಿಸುತ್ತೇವೆ ಹೊರತು ಅದು ತಾನಾಗಿ ನಿಲ್ಲುವುದಿಲ್ಲ.
ಈ ಜನ್ಮದಲ್ಲಿ ಅನುಭಿಸುವುದು ಹಿಂದಿನ ಜನ್ಮದ ಕರ್ಮ. ಈಗಿನ ಜನ್ಮದ ಫಲ ಆ ಜನ್ಮದಲ್ಲೇ ಅನುಭವಿಸುವುದಿಲ್ಲ. ಒಳ್ಳೆಯ ಕರ್ಮದ ಫಲ ಅನುಭವಿಸಲು ಕೆಟ್ಟ ಕರ್ಮದ ಫಲ ಅಡ್ಡಿ ಆಗಿರಬಹುದು. ಅದು ಅಡ್ಡ ಯಾಕೆ ಬಂತು ಹೇಗೆ ಬಂತು ನಮಗೆ ಗೊತ್ತಿರುವುದಿಲ್ಲ. ಆಗ ಜಾತಕನ ಗ್ರಹ ಗತಿಗಳ ಮೂಲಕ ಆತನ ಕರ್ಮ ಫಲಗಳ ಬಗ್ಗೆ ಸೂಚನೆ ಪಡೆಯಬಹುದು.
ನಾವು ಜನ್ಮಾಂತರದಲ್ಲಿ ಮಾಡಿದ ಕರ್ಮಗಳನ್ನು ತೋರಿಸಿಕೊಡುವುದು ನವಗ್ರಹಗಳು.
ಉದಾಹರಣೆಗೆ ಸೂರ್ಯ ಈ ಸ್ಥಾನದಲ್ಲಿ ಬಂದರೆ ಜನ್ಮಾಂತರದಲ್ಲಿ ಮಾಡಿದ ಈ ಪಾಪದಿಂದ ನಿಮ್ಮ ಆರೋಗ್ಯ ಹಾನಿ ಆಗಲಿಕ್ಕೆ ಉಂಟು.
ಸೂರ್ಯ - ಆರೋಗ್ಯದ ಬಗ್ಗೆ ಚಿಂತನೆ
ಚಂದ್ರ - ಮಾನಸಿಕ ಕಿರಿಕಿರಿ, ಶೀತ ಬಾಧೆ, ಸಂಪತ್ತು, ಜ್ವರ ಬಾಧೆ
ಅಂಗಾರಕ - ಮದುವೆ, ಮಕ್ಕಳು ಬಗ್ಗೆ ಚಿಂತನೆ
ಬುಧ - ಜ್ಞಾನಕ್ಕೆ ಪ್ರತಿಬಂಧಕದ ಬಗ್ಗೆ ಚಿಂತನೆ
ಬೃಹಸ್ಪತಿ - ದುಷ್ಟ ಸಾಧನೆ - ನಮ್ಮ ಮನಸ್ಸು ಹಾಳಾಗಿದೆ ಎಂದರೆ - ಗುರು ಅನುಗ್ರಹ ಇಲ್ಲವೆಂಬ ಚಿಂತನೆ
ಶುಕ್ರ - ದಾರಿದ್ರ್ಯ, ಸಂಪತ್ತು ಬರುವುದಕ್ಕೆ ಪ್ರತಿಬಂಧಕದ ಬಗ್ಗೆ ಚಿಂತನೆ
ಶನಿ - ದೊಡ್ಡ ದೊಡ್ಡ ಹಾನಿ, ದೊಡ್ಡ ಪಾಪಗಳ ಬಗ್ಗೆ ಚಿಂತನೆ
ರಾಹು- ಆರೋಗ್ಯ ಹಾಗೂ ಪುತ್ರ ಸಂತಾನಕ್ಕೆ ಪ್ರತಿಬಂಧಕದ ಬಗ್ಗೆ ಚಿಂತನೆ
ಕೇತು- ಆರೋಗ್ಯ
ಈ ಗ್ರಹದ ಈ ಸ್ಥಿತಿಯಿಂದಾಗಿ ನಾವು ಹೋದ ಜನ್ಮದಲ್ಲಿ ಈ ಪಾಪ ಮಾಡಿದ್ದೇವೆ ಎಂದು ತೋರಿಸಿಕೊಡುತ್ತವೆ. ಯಾವ ಗ್ರಹ ಯಾವ ಸ್ಥಾನದಲ್ಲಿದೆ ನೋಡಿ, ಆ ಸ್ಥಾನ ಆ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಮಾಡಿದಾಗಲೇ ಅದರಿಂದ ಮುಕ್ತಿ. ಬೇರೆ ಪ್ರಾಯಶ್ಚಿತ್ತ ಮಾಡಿದರೆ ಉಪಯೋಗವಿಲ್ಲ. ಏಕೆಂದರೆ ಜ್ವರ ಬಂದಾಗ ಜ್ವರದ ಮಾತ್ರೆ ತಗೆದುಕೊಳ್ಳಬೇಕು ಹೊಟ್ಟೆ ನೋವಿನ ಮಾತ್ರೆ ತಗೆದುಕೊಂಡರೆ ಉಪಯೋಗವಿಲ್ಲ. ಕಾಯಿಲಿಗೆ ಅನುಗುಣವಾದ ಔಷಧ.
ಗ್ರಹಗಳ ಸ್ಥಿತಿ => ಯಾವ ಪಾಪ => ಅದಕ್ಕೆ ಅನುಗುಣವಾದ ಪ್ರಾಯಶ್ಚಿತ್ತ
ಭಗವಂತನ ಚಿಂತನೆ ಮಾತ್ರ ಎಲ್ಲ ಪಾಪಗಳನ್ನು ಹೋಗಲಾಡಿಸುವ ಪ್ರಾಯಶ್ಚಿತ್ತ. ವಿಷ್ಣು ಸಹಸ್ರ ನಾಮ ಪಾರಾಯಣ, ತಿರುಪತಿ ವೆಂಕಟ್ರಮಣ ದರ್ಶನ ಎಲ್ಲ ಗ್ರಹಗಳ ದೋಷಕ್ಕೂ ಪರಿಹಾರ ಕೊಡುವ ಪ್ರಾಯಶ್ಚಿತ್ತ.
ನಾವು ಸಾಧನೆಯ ತುತ್ತಿದಿಯಲ್ಲಿ ನಿಂತಾಗ ಬರೀ ಭಗವಂತನ ಉಪಾಸನೆ ಸಾಕು ಆದರೆ ಸಾಧನೆಯ ಮೊದಲು ಮೆಟ್ಟಿಲಿನಲ್ಲಿದಾಗ ನಮಗೆ ಎಲ್ಲ ದೇವರ ಅನುಗ್ರಹ ಬೇಕು. ಬೇರೆ ದೇವರಲ್ಲಿ ಅವನ ಅಂತರ್ಗತ ಚಿಂತನೆ ಮಾಡಬೇಕೆ ಹೊರತು ಸ್ವತಂತ್ರ ಎಂದು ಮಾಡಬಾರದು. ಒಂದೊಂದು ದೇವತೆಯ ಅನುಗ್ರಹದಿಂದ ಆಯಾ ಪಾಪ ಕಳೆದುಕೊಂಡು ಹೋಗುತ್ತೇವೆ.
ಗೃಹ್ಯತೆ ಇತಿ ಗ್ರಹ. ನಮ್ಮ ಜನ್ಮಾಂತರದ ಕರ್ಮಗಳ ಮೂಲಕ ನಮ್ಮನ್ನು ಹಿಡಿದುಕೊಳ್ಳುತ್ತವೆ.
ಒಂಬತ್ತು ದೇವತೆಗಳು ಬೇರೆ ಬೇರೆ ಆರಾಧನೆ ಮಾಡಿ (ಸಪ್ತರ್ಷಿ ಮಂಡಲ) ಒಂಬತ್ತು ಮಂಡಲ ಅಧಿಪತ್ಯ ದೊರಕಿದೆ. ಈ ಮಂಡಲಗಳ ಮೂಲಕ ಪ್ರಭಾವ ಬೀರುತ್ತಾರೆ. ಆದ್ದರಿಂದ ಗ್ರಹಗಳ ಮುಖಾಂತರ ನಮ್ಮ ಕರ್ಮಗಳ ಚಿಂತನೆ ಮಾಡಿ ಆ ಗ್ರಹಗಳ ಮುಖಾಂತರ ದೇವರ ಆರಾಧನೆ ಮಾಡಬೇಕು. ಆಗ ಯಾವ ಕರ್ಮದಿಂದ ದೋಷ ಬಂದಿತ್ತು ಅದು ಪರಿಹಾರ ಆಗುತ್ತದೆ. ಒಂಬತ್ತು ಗ್ರಹಗಳ ಅಂತರ್ಗತ ಭಗವಂತನ ಒಂಬತ್ತು ರೂಪಗಳ ಚಿಂತನೆ. ದಶಾವತಾರದ ಒಂಬತ್ತು ರೂಪಗಳು ಒಂಬತ್ತು ಗ್ರಹಗಳಲ್ಲಿ ಅಂತರ್ಗತ ರೂಪ.
ಒಂಬತ್ತು ದೇವತೆಗಳು ದೇವರ ಯಾವ ರೂಪ ಚಿಂತನೆ ಮತ್ತು ಸಾಧನೆ ಮಾಡಿ ಅಧಿಪತ್ಯ ಪಡೆದರೋ ಅದರ ಚಿಂತನೆ ಮಾಡಿದಾಗ ಅವರ ಅನುಗ್ರಹ ಆಗುತ್ತದೆ. ಆಯಾ ಗ್ರಹದ ಮಹಿಮೆಯ ಅರಿವು ಇರಬೇಕು.
ಸೂರ್ಯ ಚಂದ್ರ ಶ್ರೇಷ್ಟ ದೇವತೆಗಳು.
ಸೂರ್ಯ: ವಿರಾಟ ರೂಪಿ ಬಲಗಣ್ಣಿಂದ ಹುಟ್ಟಿದವ. ಅದಕ್ಕೆ ತೇಜಸ್ಸು. ಕಣ್ಣಿನ ಅಭಿಮಾನಿ. ಅದಿತಿ ಹಾಗೂ ಕಶ್ಯಪ ಮಗನಾಗಿ ಹುಟ್ಟಿ ತ್ವಷ್ಟುಪ್ಪ ಪ್ರಜಾಪತಿಯ ಮಗಳಾದ ಸಂಧ್ಯಾದೇವಿಯನ್ನು ಮದುವೆ ಆಗುತ್ತಾನೆ. ಅವಳು ಸೂರ್ಯನ ಬಿಸಿ ತಾಳಲಾಗದೆ ತನ್ನ ಛಾಯೆಯಿಂದ ಛಾಯೆ ಎಂಬುವಳನ್ನು ಸೃಷ್ಟಿಸಿ ತಂದೆಯ ಮನೆಗೆ ಹೋಗುತ್ತಾಳೆ. ತಂದೆ ಮತ್ತೆ ಗಂಡನ ಮನೆಗೆ ಹೋಗು ಅಂದಾಗ ಕುದ್ರೆ ವೇಷದಿಂದ ಉತ್ತರ ಕುರು ದೇಶಕ್ಕೆ ಹೋಗುತ್ತಾಳೆ. ಆಗ ಸೂರ್ಯ ತಪಸ್ಸು ಮಾಡಿ ಅಂತ: ಚಕ್ಷುವಿನಿಂದ ಕಂಡು ತಾನು ಕುದ್ರೆ ರೂಪದಿಂದ ಹೋಗಿ ಅವಳನ್ನು ಸೇರುತ್ತಾನೆ. ಇಬ್ಬರು ತಪಸ್ಸು ಮಾಡಿ ಕುದ್ರೆ ಮೂಗಿನಿಂದ ಅಶ್ವಿನಿ ದೇವತೆಗಳು ಜನಿಸುತ್ತಾರೆ.
ಇಬ್ಬರು ತ್ವಷ್ಟುಪ್ಪ ಪ್ರಜಾಪತಿಯ ಹತ್ತಿರ ಬರುತ್ತಾರೆ. ಅವನು ಸೂರ್ಯನ ತಾಪ ಕಡಿಮೆ ಮಾಡಲು ಒಂದು ಚಕ್ರ ಮೇಲೆ ಕೂಡಿಸಿ ತಿರುಗಿಸಿದನಂತೆ. ಅದರಿಂದ ಉಂಟಾದ ತಾಪದ ಚಕ್ರವೇ ಸುದರ್ಶನ. ಸೂರ್ಯನಿಗೆ ತಪಸ್ಸು ಮಾಡಲು ಹೇಳುತ್ತಾರೆ. ಅವನ ತಪಸ್ಸಿಗೆ ಮೆಚ್ಚಿ ಭಗವಂತ ಸೂರ್ಯ ಮಂಡಲದ ಅಧಿಪತ್ಯ ಕೊಡುತ್ತಾನೆ. ಸಪ್ತ ಅಶ್ವಗಳಿಂದ ಲೋಕಕ್ಕೆ ಬೆಳಕನ್ನು ಕೊಡುವವ.
ಚಂದ್ರ: ದೇವರ ಕಣ್ಣಿಂದ ಹುಟ್ಟಿದವ. ಇನ್ನೊಮ್ಮೆ ಅತ್ರಿ ಮಹರ್ಷೀ ಗಳ ಕಣ್ಣಿಂದ ಹಾಗೂ ಕ್ಷೀರ ಸಾಗರ ಮಥನ ಮಾಡುವಾಗ ಹುಟ್ಟುತ್ತಾನೆ. ಚಂದ್ರನನ್ನು ಔಷಧಿಗಳ ರಾಜನನ್ನಾಗಿ ಮಾಡುತ್ತಾರೆ ಬ್ರಹ್ಮ ದೇವರು. ಒಮ್ಮೆ ದೇವ ಅಸುರರ ಯುದ್ಧದಲ್ಲಿ ಗೆಲುವು ತಂದು ಕೊಟ್ಟಾಗ ದೇವತೆಗಳೆಲ್ಲ ಸಂತೋಷ ಪಡುತ್ತಾರೆ. ಆಗ ಬ್ರಹ್ಮ ದೇವರು ಅವನಿಗೆ ಗ್ರಹ ಪಟ್ಟವನ್ನು ಕೊಡುತ್ತಾರೆ. ಆಗ ಅವನಿಗೆ ಅಹಂಕಾರ ಬಂದು ಬೃಹಸ್ಪತಿಯ ಧರ್ಮ ಪತ್ನಿಯದ ತಾರಾದೇವಿಯನ್ನು ಕದ್ದು ಕೊಂಡು ಹೋಗುತ್ತಾನೆ. ರುದ್ರ ದೇವರು ಅವನೊಂದಿಗೆ ಕಾದಾಡಿ ಸೋಲಿಸಿ ಗ್ರಹ ಪಟ್ಟದಿಂದ ಇಳಿಸುತ್ತಾರೆ. ಆಗ ಚಂದ್ರ ಬ್ರಹ್ಮ ದೇವರ ಕ್ಷಮೆ ಕೇಳಿ ಪ್ರಭಾಸ ಕ್ಷೇತ್ರದಲ್ಲಿ ತನ್ನ ಶಕ್ತಿ ಕ್ಷೀಣತೆ (ರುದ್ರರ ಪೆಟ್ಟು + ದಕ್ಷನ ಶಾಪ )ತುಂಬಿಕೊಳ್ಳಲು ತಪಸ್ಸು ಮಾಡುತ್ತಾನೆ. ಆಗ ಮತ್ತೆ ಗ್ರಹತ್ವ ಸಿಗುತ್ತದೆ.
ಸೂರ್ಯನ ಕಿರಣದಿಂದ ಯಜ್ಞದ ಸಾರ ಭಾಗ ಧೂಮದ ಮೂಲಕ ಎಳೆದುಕೊಂಡು ಒಂದು ಭಾಗ ಚಂದ್ರ ಲೋಕಕ್ಕೆ ತಲುಪಿ ಅದು ಅಮೃತವಾಗಿ ದೇವತೆಗಳಿಗೆ ತಲುಪುತ್ತದೆ. ಇನ್ನೊಂದು ಭಾಗ ಮೋಡಗಳಾಗಿ ಮಳೆ ಸುರಿದು ಅನ್ನವಾಗಿ ಅದರ ಸೂಕ್ಷ್ಮ ಭಾಗ ಮನಸ್ಸಿಗೆ ಸೇರುತ್ತದೆ. ಕೆಟ್ಟ ಸಂಪಾದನೆಯ ಅನ್ನ ತಿಂದಾಗ ನಮಗೂ ಕೂಡ ಕೆಟ್ಟ ಬುದ್ಧಿ ಬರುತ್ತದೆ. ಯಜ್ಞದ ಮೋಡದಿಂದ ಸುರಿದ ಮಳೆ ನೀರಿಂದ ಬೆಳೆದ ಅನ್ನ ಸಾತ್ವಿಕ ಅನ್ನ. ಸೂರ್ಯ ಚಂದ್ರರು ನಮಗೆ ಸಾತ್ವಿಕ ಅನ್ನ ಕೊಟ್ಟು ಬುದ್ಧಿಯನ್ನು ಸಾತ್ವಿಕ ಮಾಡುವುದು.
ಔಷಧ ಸೇವನೆ ಮಾಡುವ ಮೊದಲು ಅದನ್ನು ಕೈಯಲ್ಲಿ ಹಿಡಿದುಕೊಂಡು ಚಂದ್ರನ ಸ್ತೋತ್ರ ಮಾಡಿದರೆ ಅದಕ್ಕೆ ಒಳ್ಳೆಯ ಬಲ ಬರುತ್ತದೆ.
ನಾವು ಮಾಡಿದ ಶ್ರಾದ್ಧ ಹಾಗೂ ಬೇರೆಯವರ ಉದ್ದಿಶ್ಯ ಮಾಡಿದ ದಾನ ಸೂರ್ಯನ ಕಿರಣಗಳ ಮುಖಾಂತರ ಮುಟ್ಟುತ್ತದೆ. ಮೊದಲು ವರುಣ, ಆಮೇಲೆ ಭಗವಂತನಿಗೆ ಮುಟ್ಟಿ ಆಮೇಲೆ ಸೂರ್ಯನ ಮುಖಾಂತರ ಅವರನ್ನು ತಲುಪುತ್ತದೆ.
ಅಂಗಾರಕ, ಕುಜ: ಭೂಮಿಯಿಂದ ಹುಟ್ಟಿದವ. ಹಿರಣ್ಯಾಕ್ಷನ ಸಂಹಾರ ಮಾಡಿದ ನಂತರ ವರಾಹ ದೇವರು ಧರಣಿ ದೇವಿಯನ್ನು ತೊಡೆಯ ಮೇಲೆ ಕುಡಿಸಿಕೊಳ್ಳುತ್ತಾರೆ. ಆಗ ಧರಣಿ ದೇವಿಗೆ ಅಹಂಕಾರ ಬಂತಂತೆ. ಆ ಅಹಂಕಾರವನ್ನು ವರಾಹ ದೇವರು ಮೂರು ಭಾಗ ಮಾಡಿ ಸಾತ್ವಿಕ ಅಹಂಕಾರದಿಂದ ವಾಸ್ತುವಿನ ಜನನ. ರಾಜಸಿಕ ಅಹಂಕಾರದಿಂದ ಕುಜನ ಜನನ. ಕುಜ ಆರಾಧನೆ ಮಾಡಿದ್ದು ನೀಗಿ ನೀಗಿ ಕೆಂಡದಂತೆ(ಅಂಗಾರ ವರ್ಣ) ಹೊಳೆಯುವ ಪರಶುರಾಮನನ್ನು. ಅದಕ್ಕೆ ಅವನು ಬೆಂಕಿಯ ತುಂಡಿನಂತೆ ಇದ್ದುದರಿಂದ ಅಂಗಾರಕ. ರಕ್ತ ವರ್ಣ. ರಜೋ ಗುಣಕ್ಕೆ ಅಭಿಮಾನಿ. ಸಿಟ್ಟಿಗೆ, ಕ್ರೋಧಕ್ಕೆ ಅಭಿಮಾನಿ. ಕುಜನ ದೋಷ ಇದ್ದರೆ ದಾಂಪತ್ಯಕ್ಕೆ ಸಾಮರಸ್ಯ ಬರುವುದಿಲ್ಲ. ಕುಜ ಮಾಂಗಲ್ಯ ಹಾರಕ ಅಂದರೆ ನಮ್ಮ ದಾಂಪತ್ಯ ದೋಷ ತೋರಿಸಿ ಕೊಡುತ್ತಾನೆ. ನಮ್ಮ ದಾಂಪತ್ಯ ದೋಷಗಳನ್ನು ಅವನ ಮುಖಾಂತರ ಚಿಂತಿಸಬೇಕು.
ಬುಧ: ಅವನ ಮೈ ಬಣ್ಣ ತುಂಬಾ ಚೆನ್ನ. ನವಣೆ ತುಂಬಾ ಹಸಿರಾಗಿ ಚೆನ್ನಾಗಿ ಹೊಳೆಯುತಿರುತ್ತಾನೆ. ಬೃಹಸ್ಪತಿ ತಾರೆಗೆ ಚಂದ್ರನ ಗರ್ಭ ತೊರೆ ಎಂದಾಗ ಹುಟ್ಟಿದವ ಬುಧ. ಅದಕ್ಕೆ ತಾನು ಒಂದು ಸ್ಥಾನ ಗಳಿಸಬೇಕು ಯಾರು ಹೀಯಾಳಿಸಬಾರದು. ತುಂಬಾ ಸಾತ್ವಿಕ ಸ್ವಭಾವ. ತುಂಬಾ ಜ್ಞಾನಿ ಹಾಗೂ ತಿಳುವಳಿಕೆ ಉಳ್ಳವ. ಅವನ ಸಾಧನೆ ಕಂಡು ಭಗವಂತ ಗ್ರಹತ್ವ ಕೊಡುತ್ತಾನೆ. ನಮಗೆ ಜ್ಞಾನ ಬರಬೇಕಾದರೆ ಬುಧನ ಅನುಗ್ರಹ ಬೇಕು. ಬುಧ ಶತ್ರು ಸ್ಥಾನದಲ್ಲಿ ಇದ್ದರೆ ಅಥವಾ ಅವನ ಶತ್ರುಗಳು ಇದ್ದಾಗ ವಿಷ್ಣುವಿನ ಆರಾಧನೆಯಿಂದ ಬುಧಾನಿಗೆ ಶಕ್ತಿ ತುಂಬಿ ಜ್ಞಾನ ಪಡೆಯಬೇಕು. ಅಜ್ಞಾನ ನಿವಾರಕ ಹಾಗೂ ಜ್ಞಾನಕಾರಕ.
ಗ್ರಹಗಳು ಅಸ್ತವಾಗುವುದುಂಟು. ಅವರ ಶತ್ರು ಗ್ರಹಗಳ ದಷೆಯಿಂದ ಹೀಗಾಗುವುದು. ಗುರುಗೆ ಶುಕ್ರ ಹಾಗೂ ರಾಹು ಕಂಡರೆ ಆಗುವುದಿಲ್ಲ. ಶತ್ರು ಗ್ರಹಗಳಿದ್ದಾಗ ಅವರು ಸ್ತಬ್ದರಾಗುತ್ತಾರೆ.
ಬೃಹಸ್ಪತಿ: ಅಂಗೀರ ಪ್ರಜಾಪತಿಯ ಮಗ. ದೊಡ್ಡ ಜ್ಞಾನಿಗಳು. ಆದರೆ ದುಡ್ಡಿನ ಆಸೆ ಬಹಳ. ಇಂದ್ರ ಅವರನ್ನು ದೇವರ ಗುರುಗಳನ್ನಾಗಿ ಕರೆದುಕೊಂಡು ಸ್ವಗ್೯ ಕ್ಕೆ ಕರೆದುಕೊಂಡು ಹೋದನಂತೆ. ಕುಬೇರ್ನ್ ಸಂಪತ್ಟಿಗಿಂತ ೧೦ ಪಟ್ಟು ಹೆಚ್ಚು ಸಂಪತ್ತು ಗಳಿಸಿದರಂತೆ. ಆದರೆ ಈ ಆಸೆಯಿಂದ ಅವರ ಪೌರೋಹಿತ್ಯ ಶಕ್ತಿ ಉಡುಗಿ ಹೋಯಿತು. ಆಗ ಸ್ವ ಗ್೯ ಬಿಟ್ಟು ಎಷ್ಟೋ ವರ್ಷ ತಪಸ್ಸು ಮಾಡಿದರಂತೆ. ತಪಸ್ಸು ಮಾಡಿ ಗ್ರಹತ್ವ ಪಡೆದರಂತೆ. ದೊಡ್ಡ ಗ್ರಹ. ಗುರುವಿನ ಅನುಗ್ರಹ ಇದ್ದರೆ ಬೇರೆ ಗ್ರಹಗಳ ದೋಷ ಪರಿಣಾಮ ಆಗದಿರುವಂತ ವರ. ದೇವ ಗುರು ಆದ್ದರಿಂದ ಎಲ್ಲ ಗ್ರಹಗಳಲ್ಲಿ ಅಧಿಕ ಫಲ ಕೊಡುವ ಗ್ರಹ ಗುರು ಗ್ರಹ. ಗುರು ಗ್ರಹದ ಮೂಲಕ ಬ್ರಹ್ಮ ದೇವರ ಚಿಂತನೆ ಮಾಡಬೇಕು. ಗು ಅಂದರೆ ಅಂಧಕಾರ ರ ಅಂದರೆ ನಿವರ್ತಕರು. ಜೀವನದ ಅಂಧಕಾರ ನಿವರ್ತಕ ಶಕ್ತಿ ಗುರು ಗ್ರಹಕ್ಕೆ ಉಂಟು. ಜೀವನದಲ್ಲಿ ಬರುವ ಸಂಪೂರ್ಣ ಕತ್ತಲೆ ಅನಾರೋಗ್ಯ, ದಾರಿದ್ರ್ಯ, ಮಾನಸಿಕ ಕಿರಿಕಿರಿ ಎಲ್ಲದಕ್ಕೂ ಗುರುವಿನ ಚಿಂತನೆ ಮಾಡಬೇಕು. ಎಲ್ಲದಕ್ಕೂ ಗುರು ಅನುಗ್ರಹ ಬೇಕು. ಜಾತಕ ತಗೆದರೆ ಮೊದಲು ನೋಡುವುದು ಗುರು ಅನುಗ್ರಹ. ಗುರು ಅನುಗ್ರಹ ಪ್ರಥಮವಾಗಿ ನೋಡಬೇಕು. ತಾರತಮ್ಯದಲ್ಲಿ ಇಂದ್ರನಿಗಿಂತ ಕಡಿಮೆ ಇದ್ದರೂ ದೇವ ಗುರು. ಬೃಹಸ್ಪತಿ ಬಂದಾಗ ಇಂದ್ರ ನಿಂತುಕೊಳ್ಳುತ್ತಾನೆ. ದೊಡ್ಡ ಸ್ಥಾನ ಅದಕ್ಕೆ ದೊಡ್ಡ ಫಲ. ತಪಸ್ಸಿನ ನಂತರ ಅವರು ಸಂಪತ್ತಿನ ಆಸೆ ತೊರೆದು ನಿರ್ವಿಕಾರ ಆದರು.
ಶುಕ್ರ: ಒಳ್ಳೆಯ ಸಂಪತ್ತು. ಭೃಗು ಕ್ಯಾತೆಯ ವಂಶದಲ್ಲಿ ಹುಟ್ಟಿದವ. ಭೃಗುವಿನ ಮಗಳಾಗಿ ಹಾಗೂ ಶುಕ್ರನ ತಂಗಿಯಾಗಿ ಲಕ್ಷಿ ಇಬ್ಬರನ್ನೂ ಅನುಗ್ರಹಿಸಿದ್ದಾಳೆ. ಲಕ್ಷ್ಮಿ ಅನುಗ್ರಹದಿಂದ ಅವನಿಗೆ ಸಂಪತ್ತು. ಶೋಕಂ ರಾತಿ ಅಂದರೆ ಶೋಕ ನಾಶ ಮಾಡಿ ಆನಂದವನ್ನು ಕೊಡುವವ. ದೇಹದ ಸಂಪತ್ತಾದ ಆರೋಗ್ಯ ಹಾಗೂ ವ್ಯಾವಹಾರಿಕ ಸಂಪತ್ತಾದ ಹಣ ಎರಡು ಕೊಡುವವ. ಆದ್ದರಿಂದ ಶುಕ್ರವಾರ ಲಕ್ಷ್ಮಿ ಪೂಜೆ. ಶುಕ್ರ ದಶೆಯಲ್ಲಿ ಲಕ್ಷ್ಮಿಯ ಅನುಗ್ರಹ(ಇಂದ್ರಾಣಿ) ರೂಪದಿಂದ ಕೊಟ್ಟ ಸಂಪತ್ತು ಶಾಶ್ವತವಾಗಿ ಉಳಿಯುತ್ತದೆ. ದೈತ್ಯರು ದೇವತೆಯೇ ಗುರುವಾಗಿ ಅವರಿಂದ ಅವರ ಸ್ವರೂಪಕ್ಕೆ ಅನುಗುಣವಾಗಿ ಅವರ ಸಾಧನೆ ಮಾಡಿಸುತ್ತಾನೆ.
ಶನಿ: ನಿಧಾನವಾಗಿ ಹೋಗುವವನು. ಜನ್ಮಾಂತರದ ಅತಿ ದೊಡ್ಡ ಪಾಪದ ಬಗ್ಗೆ ಚಿಂತನೆ ಮಾಡಬೇಕು. ಸೂರ್ಯ ಮತ್ತು ಛಾಯಾ ದೇವಿಯ ಮಗ. ಸೂರ್ಯ ಛಾಯಾ ತನ್ನ ನಿಜ ಹೆಂಡತಿ ಅಲ್ಲವೆಂದು ತಿಳಿದಾಗ ಅವಳ ಕೂದಲು ಹಿಡಿದು ಹೊಡೆಯಲು ಹೋದಾಗ ಶನಿಗೆ ಸಿಟ್ಟು ಬಂದು ಸೂರ್ಯನನ್ನು ಒಡೆಯಲು ಹೋಗುತ್ತಾನೆ. ಆಗ ಸೂರ್ಯನ ಶಾಪದಿಂದ ಅವನ ಒಂದು ಕಾಲು ಬಿದ್ದು ಹೋಗುತ್ತದೆ. ಆದ್ದರಿಂದ ಆತನ ಚಲನೆ ನಿಧಾನ. ಶನಿಗೆ ಹಾಗೂ ಸೂರ್ಯನಿಗೆ ಆಗುವುದಿಲ್ಲ. ಸಿಂಹ ರಾಶಿಗೆ ಶನಿಯ ತೊಂದ್ರೆ ಬಹಳ. ನಮಗೆ ಶನಿ ದೋಷ ಇದ್ದಾಗ ಒಳ್ಳೆಯ ಕೆಲಸ ಮಾಡಲು ಮನಸ್ಸು ಕೊಡುವುದಿಲ್ಲ. ಪ್ರಾಣ ದೇವರನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ವಾಯು ದೇವರನ್ನು ಕಾಡಲು ಹನುಮಂತನ ರೂಪದ ಹೆಗಲು ಏರುತ್ತಾನೆ. ಆಗ ಆಂಜನೇಯ ದೇವರು ಗುಹೆಯಲ್ಲಿ ಎದ್ದು ನಿಂತು ಅವನ ಉಸಿರುಗಟ್ಟಿಸುತ್ತಾರೆ. ಆಗ ಕ್ಷಮೆ ಕೇಳುತ್ತಾನೆ. ಆಗ ಆಂಜನೇಯ ದೇವರು ನನ್ನ ಹಾಗೂ ಶನಿವಾರ ನನ್ನ ಆರಾಧಿಸುವ ಭಕ್ತರ ಕಾಡ ಕೂಡದು ಎಂದು ಹೇಳಿ ಅನುಗ್ರಹಿಸುತ್ತಾರೆ. ಶನಿಯ ದೃಷ್ಟಿ ಕ್ರೂರ ಅಂದರೆ ಪಾಪದ ಫಲ ಪಡೆಯುತ್ತೇವೆ. ಅವನನ್ನು ಭಕ್ತಿಯಿಂದ ಆರಾಧಿಸಿ ಅವನ ಅನುಗ್ರಹ ಪಡೆದರೆ ಅದು ಅತಿ ದೊಡ್ಡ ಅನುಗ್ರಹ. ಅಶ್ವತ ವೃಕ್ಷ ಶನಿವಾರ ಪ್ರದಕ್ಷಿಣೆ ಮಾಡಿದರೆ ಶನಿ ಅನುಗ್ರಹ. ದಿನಕ್ಕೆ ಮೂರು ಬಾರಿ ವಿಷ್ಣು ಸಹಸ್ರ ನಾಮ ಪಾರಾಯಣ. ಶನಿ ತಪಸ್ಸು ಮಾಡಿ ಗ್ರಹತ್ವ ಪಡೆಯುತ್ತಾನೆ. ಶನಿ ದೊಡ್ಡ ವಿಷ್ಣು ಭಕ್ತ.
ರಾಹು: ಅಸುರ. ಆಹುತಿ ಹಾಗೂ ಪೂಜೆ ಇಲ್ಲ. ರಾಹು ಅಮೃತ ಕೂಡಿದಾಗ ತಲೆ ಗ್ರಹ ಆಯಿತು. ತಲೆಯಲ್ಲಿ ಬ್ರಹ್ಮ ದೇವರ ಕೇತು ಮಾನಸ ಪುತ್ರರಿದ್ದಾರೆ. ಮುಂಡ ಮಾತ್ರ ದೇವತೆಗಳಿಗೆ ಉಪದ್ರವ ಕೊಡುತಿತ್ತು. ಆಗ ರಾಹುವೆ ಮುಂಡದ ಹೃದಯ ಭಾಗದಲ್ಲಿ ಅಮೃತ ಇದೆ ಅದನ್ನು ಸೀಳಿ ತಗೆಯಿರಿ ಎಂದು ಸಲಹೆ ನೀಡಿದನಂತೆ. ಆಗ ದುರ್ಗಾ ದೇವಿ ಕಾಳಿಯ ರೂಪದಿಂದ ಆ ಅಮೃತ್ವನನ್ನು ತಗೆದುದೇವತೆಗಳಿಗೆ ಉಪಕಾರ ಮಾಡಿದಳು. ಆದ್ದರಿಂದ ಅವಳಿಗೆ ಅಮೃತೇಶ್ವರಿ ಎಂದು ಕೂಡ ಕರೆಯುತ್ತಾರೆ. ತನ್ನ ಸಾವಿನ ರಹಸ್ಯ ಹೇಳಿದ್ದರಿಂದ ಅವನಿಗೆ ದೇವತೆಗಳು ಅನುಗ್ರಹ ಮಾಡಿ ಗ್ರಹತ್ವ ಕೊಟ್ಟರು.
ಕೇತು: ಭಗವಂತ ರಾಹುವಿನ ರುಂಡದಲ್ಲಿ ಇಡುತ್ತಾನೆ. ೧೦೦ ಜನ ಕೇತುಗಳು. ದೇವತೆಗಳು. ರಾಹು ಜೇಷ್ಠ. ಆದ್ದರಿಂದ ಅವರಿಗೂ ಆಗಾಗ ಪ್ರಭಾವ ಬಂದು ಸೂರ್ಯ ಚಂದ್ರನನ್ನು ಹಿಡಿಯಲು ಹೋಗುತ್ತಾರೆ. ಕೇತುಗಳು ಸಾಧನೆಯಿಂದ ಗ್ರಹತ್ವ.
ಮೇಷಾದಿ ಹನ್ನೆರಡು ರಾಶಿಗಳು ಸ್ಥಾನಗಳು. ಸೂರ್ಯನ ಚಲನೆ ಮಾಡ ತಕ್ಕ ರಾಶಿಯ ಮೇಲೆ ಪ್ರಭಾವ ಬೀರುತ್ತಾರೆ. ನಾವು ತಾಯಿಯ ಗರ್ಭದಿಂದ ಹೊರ ಬಂದು ಪ್ರಥಮ ಬಾರಿ ಅತ್ತಾಗ ಸೂರ್ಯನ ರಾಶಿಗಳಲ್ಲಿ ಯಾವ ಯಾವ ರಾಶಿಗಳಲ್ಲಿ ಅವನ ಪ್ರಭಾವ ಇರತದೋ ಆ ರಾಶಿಗಳಲ್ಲಿ ಆ ಗ್ರಹ್ಗಳು ಕೂತಿದ್ದಾರೆ ಎಂದು ಅರ್ಥ.
ನಮ್ಮ ಜೀವಮಾನವಿಡಿ ನಮ್ಮ ಸಾಧನೆ ಮಾಡಲು ಆ ರಾಶಿಯ ಪ್ರಕಾರ ನಮ್ಮ ಜನ್ಮಾಂತರದ ಪಾಪ ಪುಣ್ಯದ ಚಿಂತನೆ ಮಾಡಿ ಸಾಧನೆ ಮಾಡಲು ಗ್ರಹ, ಮಂಡಲ ಹಾಗೂ ಅವಗಳಿಗೆ ಅನುಗುಣವಾಗಿ ಆ ಸ್ವಭಾವ ಉಳ್ಳ ದೇವತೆಗಳ ಸೃಷ್ಟಿ ಮಾಡಿ ಇಟ್ಟಿದಾನೆ.
ಇದೆಲ್ಲ ನರಸಿಂಹ ದೇವರ ಅನುಗ್ರಹದಿಂದ ನವಗ್ರಹಗಳು ಮತ್ತು ಅಂತರ್ಗತ ಭಗವಂತನ ಚಿಂತನೆ ಆದಾಗ ನವಗ್ರಹಗಳ ಅನುಗ್ರಹ ಸಾಧ್ಯ.