ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ
ಅಷ್ಟ ಗುಣಗಳು: ಜೀವನ ಬೆಳಗಲು ಸದಾ ಕಾಲ ಎಲ್ಲ ಜನರಿಗೆ ಅನ್ವಯ ಆಗುವ ಮಾನವೀಯ ಗುಣಗಳು.
ಒಬ್ಬ ಮನುಷ್ಯ ಪ್ರಾಮಾಣಿಕವಾಗಿ ಬದುಕಿದಾಗ ಅವನ ಮಾನಸಿಕ ದೃಡತೆ (ಇಚ್ಛಾ ಶಕ್ತಿ) ಬೆಳೆಯುತ್ತೆ. ಅಂಥವನಿಗೆ ವಾಕ ಸಿದ್ಧಿ ಕೂಡ ಪ್ರಾಪ್ತವಾಗುತ್ತೆ.
[೧] ಅನಸೂಯಾ : ಅಸೂಯೆ ಅಥವಾ ಹೊಟ್ಟೆಕಿಚ್ಚು ಪಡಬೇಡ.
ಅಸೂಯೆ ಎಂದರೆ: ಇನ್ನೊಬ್ಬರ ಒಳ್ಳೆಯ ಗುಣ ಗುರುತಿಸು. ಇನ್ನೊಬ್ಬರ ಒಳ್ಳೆಯ ಗುಣದ ಕೊಲೆ ಮಾಡಬೇಡ. ನಮ್ಮ ಒಳ್ಳೆ ಗುಣ ಕೊಚ್ಚಿಕೊಳ್ಳಬೇಡ. ಇನ್ನೊಬ್ಬರ ಗುಣ ಹೇಳುವಾಗ ಸಂತೋಷಪಡು. ಬೇರೆಯವರ ದೋಷ ಟೀಕಿಸಿದಾಗ ಸಂತೋಷಪಡಬೇಡ. ಇನ್ನೊಬ್ಬರ ದೋಷ ಚಿಂತನೆ ಮಾಡಬೇಡ.
[೨] ದಯಾ: ನಮಗೆ ಕಷ್ಟ ಬಂದಾಗ ಸಹಾಯ ದೊರೆಯಬೇಕು ಎಂದು ಅಪೇಕ್ಷಿಸುತ್ತೇವೋ ಅದನ್ನು ಶತ್ರುಗಳಿಗೂ ಕೂಡ ಮಾಡು
[೩] ಶಾಂತಿ: ಮಾತು, ಮನಸು, ದೈಹಿಕವಾಗಿ ಕಷ್ಟ ಕೊಟ್ಟಾಗ ಅವನ ಮೇಲೆ ಕೋಪಿಸಿಕೊಂಡು ಅಸಮಾಧಾನ ಪಡಬೇಡ. ಜಗತ್ತಿನಲ್ಲಿ ಅಕಾರಣವಾಗಿ ಏನು ಘಟಿಸುವುದಿಲ್ಲ. ಆ ಗುಣವನ್ನು ದ್ವೇಷಿಸು ಆ ಮನುಷ್ಯನನ್ನು ದ್ವೇಷಿಸಿ ಪರಿಹಾರವಿಲ್ಲ.
[೪] ಅನಾಯಾಸ: ಬದುಕಿನಲ್ಲಿ ಆಯಾಸ ಮಾಡಿ ಕೊಳ್ಳಬಾರದು. ಯೋಗ್ಯತೆ ಮೀರಿ ಯಾವುದನ್ನು ಮಾಡಬೇಡ. ಒಳ್ಳೆಯ ಕೆಲಸವಾದರೂ ಸರಿ ಅದನ್ನು ಮಾಡಬೇಡ. ನಮ್ಮ ದೇಹಕ್ಕೆ ತಡೆಯದನ್ನು ಅತಿಯಾಗಿ ಮಾಡಬೇಡ. ಪುಣ್ಯ ಕಾರ್ಯ ಕೂಡ ಯೋಗ್ಯತೆ ಮೀರಿ ಮಾಡಬೇಡ.
[೫] ಮಂಗಳ: ಮಂಗಳವಾದ ಬದಕು ಮಾಡಿಕೊ. ಶಾಸ್ತ್ರದ ಪ್ರಕಾರ ಒಳ್ಳೆಯದೋ ಅದನ್ನು ಅಳವಡಿಸಿಕೊಳ್ಳಬೇಕು.
[೬] ಆಕಾರ್ಪಣ್ಯ: ಮನುಷ್ಯ ಕೃಪಣನಾಗಬಾರದು. ನಿನ್ನಲಿ ಸ್ವಲ್ಪ ಇದ್ದರೂ ನಿನ್ನಗಿಂತ ಕಡಿಮೆ ಇರುವನಿಗೆ ದಾನ ಕೊಡು. ಸಂತೋಷವಾಗಿ ಕೊಡು. ಯಾವುದೋ ಆಸೆ ಅಥವಾ ಪ್ರಲೋಭ ದಿಂದ ಮಾಡದಿರು. ಹಂಚಿಕೊ.
[೭] ಶೌಚ: ತಿನ್ನಬಾರದ ವಸ್ತು ತಿನ್ನಬೇಡ. ಮನಸಿನ ಆರೋಗ್ಯಕ್ಕೆ ಒಳ್ಳೆಯದನ್ನು ಮಾಡದಿರುವ ವಸ್ತು ತಿನ್ನಬೇಡ. ಬುದ್ಧಿ ಕೆಡಿಸುವ ಆಹಾರ ತಿನ್ನಬೇಡ. ದುಷ್ಟರ ಸಹವಾಸ ಮಾಡಬೇಡ.
[೮] ಅಸ್ಪೃಹ: ಏನೋ ಸಿಕ್ಕಿತೋ ಅದರಲ್ಲಿ ಸಂತೃಪ್ತಿ ಪಡು. ನಿನ್ನಲ್ಲಿ ಇರುವದನ್ನು ನೋಡಿ ಖುಷಿ ಪಡು, ಬೇರೆಯವರ ನೋಡಿ ಸಂಕಟ ಪಡಬೇಡ. ಏನು ಕಿಂಚಿತ್ತೂ ಇದೆ ಅದರಲ್ಲಿ ಸಂತೋಷ ಪಡು.