Total Pageviews

Friday, December 29, 2017

ಭಾಗವತ : ಪ್ರಿಯವ್ರತ ರಾಜನಿಂದ ಕಲಿತ ಪಾಠ

ಸಂನ್ಯಾಸ ಇಲ್ಲದಿದ್ದರೆ ಮೋಕ್ಷ ಇಲ್ಲ ಎಂಬ ಮೂಢ ನಂಬಿಕೆ ಆಚಾರ್ಯರ ಮೊದಲು ಮನೆ ಮಾಡಿತ್ತು.

ಯೋಷಿತ ಸಂಗ ಮಾಡಬಾರದು ಎಂದರೆ ಸ್ತ್ರೀ ಸಂಗ ಮಾಡಬೇಡಿ ಎಂದಲ್ಲ, ಭಗವಂತನ ತಪ್ಪು ತಿಳುವಳಿಕೆ ಮಾಡಿಕೊಳ್ಳಬೇಡಿ ಹಾಗೂ ಅಂಥವರ ಸಂಗ ಮಾಡಬೇಡಿ.

ಸಂಕಲ್ಪ ಮಾಡಿಕೊಂಡ ಸತ್ಕರ್ಮವನ್ನು ಭಗವದ ಅರ್ಪಣ ಬುದ್ಧಿಯಿಂದ ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕವಾಗಿ ನಮ್ಮ ಸ್ವಕರ್ಮದಲ್ಲಿ ತೊಡಗುವುದರಲ್ಲಿ ಸಿದ್ಧಿ, ಶ್ರೇಯಸ್ಸು ಹಾಗೂ ಯಶಸ್ಸಿದೆ. ಅದನ್ನು ಮರೆತು ಧರ್ಮ ಎಂದು ಬರೀ ಪೂಜೆ ಪುನಸ್ಕಾರ, ತೀರ್ಥ ಕ್ಷೇತ್ರ ಸಂಚಾರ ಮಾಡುವುದರಲ್ಲಿ ಅರ್ಥವಿಲ್ಲ. ಈ ಮಾತನ್ನು ಸ್ವತ: ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ.

ಕಲಿಯುಗದಲ್ಲಿ ತೀರ್ಥಗಳ ಸಾರ ಹೋಗಿದೆ. ತೀರ್ಥ ಕ್ಷೇತ್ರಗಳಲ್ಲಿ ಈಗ ದುಷ್ಟ ಶಕ್ತಿಗಳು ಸೇರಿಕೊಂಡು ಬ್ರಷ್ಟತೆ ಬೆಳೆಯುತಿದೆ.

ಕಲಿಯುಗದಲ್ಲಿ ಗೃಹಸ್ಥ ಆಶ್ರಮಲ್ಲಿ ಕೂಡ ಇಂದ್ರಿಯ ನಿಗ್ರಹ ಮಾಡಿಕೊಂಡು ಸ್ವಕರ್ಮ ಮಾಡಿಕೊಂಡು ಕೂಡ ಸಿದ್ಧಿ ಹೊಂದಬಹುದು. ಕ್ಷೇತ್ರದ ಮಹತ್ವಕಿಂತ ಇಂದ್ರಿಯ ನಿಗ್ರಹ ಮುಖ್ಯ. ಯಾವುದರಲ್ಲಿ ಇದ್ದರೂ ಸಂಯಮದಿಂದ ಕರ್ತವ್ಯ ಮಾಡಿದರೆ ಸಿದ್ಧಿ ಪಡೆಯಬಹುದು.

(ವೈಕುಂಠ ಏಕಾದಶಿ (೨೯/೧೨/೨೦೧೭) ವ್ಯಾಸರಾಜ ಮಠ ನಡೆಸಿಕೊಟ್ಟ ಅಖಂಡ ಭಾಗವತ ಪ್ರವಚನ ಭಾಗ ೨ - ಪಂಚಮ ಸ್ಕಂದದಲ್ಲಿ ಕೇಳಿದ್ದು)

ಕೃಷ್ಣನ ಕತೆ ಸಂಪೂರ್ಣವಾಗಿ ತಿಳಿದು ಸಂದೇಹಗಳನ್ನು ಆಚಾರ್ಯರ ನಿರ್ಣಯವದಿಂದ ನಿವಾರಿಸಿಕೊಂಡಾಗಲೇ ಭಕ್ತಿ ಹುಟ್ಟುವುದು.

ಮಹಾತ್ಮ್ಯಜ್ಞಾನ ಸ್ನೇಹ ಪೂರ್ವಕವಾಗಿ ನವ ವಿಧ ಭಕ್ತಿಯಿಂದ ಎಂಟು ಭಗವಂತನ ಲಕ್ಷಣಗಳನ್ನು ತಿಳಿಬೇಕು:
[೧] ಸೃಷ್ಟಿ
[೨] ಸ್ಥಿತಿ
[೩] ಲಯ
[೪] ನಿಯಮನ
[೫] ಬಂಧ
[೬] ಮೋಕ್ಷ
[೭] ಜ್ಞಾನ
[೮] ಅಜ್ಞಾನ

(ವೈಕುಂಠ ಏಕಾದಶಿ (೨೯/೧೨/೨೦೧೭) ವ್ಯಾಸರಾಜ ಮಠ ನಡೆಸಿಕೊಟ್ಟ ಅಖಂಡ ಭಾಗವತ ಪ್ರವಚನ ಭಾಗ 3 - ದಶಮ ಸ್ಕಂದದಲ್ಲಿ ಕೇಳಿದ್ದು)



Tuesday, December 26, 2017

ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವವಾದ

ವಿದ್ವಾನ್. ಕೃಷ್ಣ ರಾಜ ಕುತ್ಪಾದಿ ಯವರ  ಈ  ಸುಂದರ ಪ್ರವಚನ ಮಾಲಿಕೆಯ ಮುಖ್ಯಾಂಶಗಳು:
ಪ್ರವಚನ ದಿನ ೧
ಪ್ರವಚನ ದಿನ ೨
ಪ್ರವಚನ ದಿನ ೩
ಪ್ರವಚನ ದಿನ 

ಆಚಾರ್ಯ ಮಧ್ವರು ಪ್ರತಿಪಾದಿಸಿದ್ದು ತತ್ವವಾದ. ತತ್ವ - ಹೇಗಿದೆಯೋ ಹಾಗೆ. ಯಥಾರ್ಥ. ಏಕೆಂದರೆ ಅವರು
೧. ತಮ್ಮ ವಿಚಾರಗಳನ್ನು ಎಂದು ತೂರಿಸಲಿಲ್ಲ
೨. ವೇದ, ಉಪನಿಷತ್ತು, ಇತಿಹಾಸ, ಪುರಾಣಗಳ ಹೃದಯವನ್ನು ಅದು ಹೇಗಿದೆಯೋ ಹಾಗೆ ತೆರೆದು ಇಟ್ಟರು
೩. ಹೇಳಿದ ಪ್ರತಿ ಮಾತಿಗೂ ಆಕರ ಗ್ರಂಥಗಳ ಪಟ್ಟಿ ಮಾಡಿದರು
೪. ಕೊನೆಗೆ ಪ್ರತಿಯೊಬ್ಬರ ಸ್ವಂತ ಅನುಭವಿಸಿ ತಿಳಿದು ಒಪ್ಪಲು ಒತ್ತು ಕೊಟ್ಟು ಹೇಳಿದರೆ ಹೊರತು ಯಾರ ತಲೆಯ ಮೇಲೂ ತಮ್ಮ ಮಾತನ್ನು ಕಣ್ಣು ಮುಚ್ಚಿ ಒಪ್ಪಬೇಕೆಂದು ಹೇರಲಿಲ್ಲ

ಸಂಧ್ಯಾವಂದನೆ ಹಾಗೂ ದೇವರ ಪೂಜೆ ಮಾಡುವಾಗ  ತೋರುವ ಶ್ರದ್ಧೆ ಹಾಗೂ ಪ್ರಾಮಾಣಿಕತೆ ದಿನ ಪೂರ್ತಿ ನಾವು ಮಾಡುವ ಪ್ರತಿ ಕೆಲಸದಲ್ಲಿ ಕೂಡ ಕಾಣ ಬೇಕೆಂಬುದರ ಪ್ರತೀಕ.  


ಧರ್ಮಗಳು ಮೂರು:
೧. ಸನಾತನ ಧರ್ಮ
೨. ಸಾಮಾಜಿಕ ಧರ್ಮ
೩. ವಯಕ್ತಿಕ ಧರ್ಮ

೧ ಮತ್ತು ೨, ೩ ರಲ್ಲಿ ಗೊಂದಲ ಅಥವಾ ವೈರುಧ್ಯ ಕಂಡು ಬಂದಾಗ ೧ ನ್ನು ಆರಿಸಿಕೊಳ್ಳುವುದು.

ಗ್ರಹ ಎಂದರೆ ನಮ್ಮ ಮನಸಿನ ಪ್ರಭಾವ ಬೀರುವ ಆಕಾಶ ಕಾಯ. ಅದಕ್ಕೆ ಸೂರ್ಯನನ್ನು ಗ್ರಹ ಎಂದು ಕರೆದಿರುವುದು.

ಕಬ್ಬಿಣದ ಬಾಣಲೆಯಲ್ಲಿ ಹೋಮದ ಅಗ್ನಿ ಉರಿಸಕೊಡದು. ಯಾಗ್ನಿಯ ವೃಕ್ಷಗಳ ಕಟ್ಟಿಗೆಯನ್ನು ಇಟ್ಟಿಗೆ ಮರಳಿನ ಯಜ್ಞ ಕುಂಡದಲ್ಲಿ ಶುದ್ಧ ಆಕಳಿನ ಶುದ್ಧ ತುಪ್ಪದಿಂದ ಮಾಡಿದರೆ ಯಾವುದೇ ಆಮ್ಲೀಯ ಹೊಗೆ ಹೊರ ಸೋಸುವುದಿಲ್ಲ.

ಭಗವಂತನ ಸರಿಯಾದ ದೃಡವಾದ ಅರಿವೇ ಜ್ಞಾನ.

ಬೃಹತಿಸಹಸ್ರ ವೇದದ ಸಾರ. ಭಗವಂತನಿಗೆ ಅತಿ ಪ್ರೀತಿ ಪಾತ್ರವಾಗಿದ್ದು.

ವೇದವನ್ನು ತಿಳಿಯಲು ಆರು ಅಂಗಗಳು:
[೧] ವ್ಯಾಕರಣ
[೨] ಛಂದಸ್ಸು
[೩] ಜ್ಯೋತಿಷ್ಯ
[೪] ನಿರುಕ್ತ
[೫] ಅನಿರುಕ್ತ
[೬] ಕಲ್ಪ

ಪ್ರವಚನ ದಿನ ೪ :: 1:12:00

ಜೀವವನ್ನು ದೇವರು ಸೃಷ್ಟಿ ಮಾಡಲಿಲ್ಲ. ದೇವರು ಸ್ವಭಾವವನ್ನು ಕೂಡ ಕೊಟ್ಟಿಲ್ಲ. ಸ್ವಭಾವ ಎಂಬ ಪದವೇ ಸೂಚಿಸುವಂತೆ ಅದು ಜೀವದಿಂದ ಬೇರ್ಪಡಿಸಲಾಗದ್ದು. ಜೀವದ ಸ್ವಭಾವ ಎಂಬ ಬೀಜವನ್ನು ಪಂಚಭೂತದ ಭೂಮಿಯಲ್ಲಿ ಕರ್ಮದ ನೀರು ಹಾಕಿ ಜ್ಞಾನದ ಬೆಳಕು ಕೊಟ್ಟವನು ದೇವರು. ಜೀವದ ಕರ್ಮವು ಶಕ್ತಿಯ ರೂಪದಲ್ಲಿ ಅಡಗಿದೆ. ಅದು ದೇಹ ದೊರೆತಾಗ ಹೊರ ಬರುತ್ತದೆ.

ಒಳಗೆ ಇಲ್ಲದೆ ಹೊಸದನ್ನು ದೇವರು ಮಾಡಿ ತೋರಿಸುವದಿಲ್ಲ. ಯಾವುದರ ಗುಣಧರ್ಮ ಹೇಗೆ ಇದೆಯೋ ಹಾಗೆ ಉಳಿಸುವುದು ದೇವರ ಸಹಜ ಗುಣ.

ನಮ್ಮ ಕರ್ಮದ ಆಧಾರವಾಗಿ ದೇವರು ನಮಗೆ ಫಲ ಕೊಡಲೇಬೇಕೆಂಬ ನಿಯಮ ಇಲ್ಲದಿದ್ದರೂ ಅನಂತ ಜೀವಗಳನ್ನು ಅವರವರ ಕರ್ಮಕ್ಕನುಗುಣವಾಗಿ ಪ್ರತಿ ಕ್ಷಣ ತನಗೆ ಯಾವುದೇ ಲಾಭ ಇಲ್ಲದಿದ್ದರೂ ದೇವರು ನಮಗಾಗಿ ಮಾಡುವುದು ಅವನ ಕಾರುಣ್ಯ.

ರಾಜಸ ಜೀವದಲ್ಲಿ ಸಾತ್ವಿಕ ಪ್ರಮಾಣ ಸ್ವಲ್ಪ ಹೆಚ್ಚು ಇದ್ದರೆ ಮೋಕ್ಷಕ್ಕೆ ಹೋಗುತ್ತಾರೆ. ರಾಜಸ ಜೀವದಲ್ಲಿ ತಾಮಸ ಪ್ರಮಾಣ ಸ್ವಲ್ಪ ಹೆಚ್ಚು ಇದ್ದರೆ ತಮ್ಮಸ್ಸಿಗೆ ಹೋಗುತ್ತಾರೆ. ಇನ್ನೂ ಎರಡು ಇಲ್ಲದಿದ್ದರೆ ನಿತ್ಯ ಸಂಸಾರಿಗಳಾಗಿ ಸ್ವರ್ಗ, ಭೂಮಿ ಹಾಗೂ ನರಕದ ಮಧ್ಯೆ ಸುತ್ತುತ್ತಾ ಇರುತ್ತಾರೆ.

ಜೀವಗಳಲ್ಲಿ ಕೂಡ ಸಸ್ಯ, ಪ್ರಾಣಿ, ಮನುಷ್ಯ, ಕ್ರಿಮಿ ಕೀಟ ಮುಂತಾದ ಎಲ್ಲ ಎಂಬತ್ತು ನಾಲ್ಕು ಲಕ್ಷ್ಯ ಯೋನಿಗಳ ಜೀವಗಳಿವೆ. ಸಹಜ ಸ್ವಭಾವ ಒಂದಿದ್ದರೂ ಕರ್ಮಗಳ ಆಧಾರದ ಮೇಲೆ ಯೋನಿಗಳ ಬದಲಾವಣೆ ನಡೆಯುತ್ತದೆ. ಕರ್ಮಗಳ ಆಧಾರದ ಮೇಲೆ ಎಲ್ಲ ರೀತಿಯ ಜೀವಗಳು ಮೋಕ್ಷಕ್ಕೆ ಹೋಗಲು ಅರ್ಹತೆ ಪಡೆದಿವೆ. ಮೋಕ್ಷದಲ್ಲಿ ಅವುಗಳ ಆಯ್ಕೆಯಂತೆ ಯಾವುದೇ ಯೋನಿಯಲ್ಲಿ ಇದ್ದರೂ ಸುಖ ಅನುಭವಿಸಲು ಸಾಧ್ಯವಿದೆ.
ನೈವೇದ್ಯ : ದೇವರೇ ಇದು ನಿನ್ನದು ಎಂಬ ಹೃದಯದ ಭಾವ ನೀವೇದನೆ ಮಾಡಿಕೊಳ್ಳುವುದು ಸ್ವೀಕರಿಸುವುದು. ಹೃದಯದ ಪ್ರಾಮಾಣಿಕತೆಯ ಮೇಲೆ ನಮ್ಮ ಇಡೀ ಜೀವನದ ಯಶಸ್ಸು ನಿಂತಿದೆ.

ಮಡಿ : ನಾವು ಶುಚಿಯಾಗಿದ್ದರೆ ಮಡಿ ಎಲ್ಲಿಯೂ ಇರುತ್ತದೆ. ಹೀನ ಗುಣಗಳಿಂದ ಕೂಡಿ ಗಂಗೆಯ ಸ್ನಾನ ಮಾಡಿದರೂ ಉಪಯೋಗವಿಲ್ಲ. ನಾವು ಉಡುವ ಬಟ್ಟೆ ಹಾಗೂ ಕೂಡುವ ಜಾಗ ಶುದ್ಧವಾಗಿರಬೇಕು.

ನಿದ್ದೆಯಲ್ಲಿ ದೇವರ ಮರೆವು ಇರುವುದರಿಂದ ಹಾಸಿಗೆ ಮೈಲಿಗೆ.

ಜಪ ಉಪಾಂಶು. ತುಟಿ ಅಲ್ಲಾಡಿದರೂ ಶಬ್ದ ಬೇರೆಯವರಿಗೆ ಕೇಳಬಾರದು.
ಪಾರಾಯಣ ಎಲ್ಲರಿಗೂ ಕೇಳುವಂತೆ ಮಾಡಬೇಕು.

ಪ್ರಾಣಾಯಾಮ ಮನಸ್ಸಿಗೆ ಸ್ಥಿರತೆ ತಂದು ಕೊಡುತ್ತದೆ.

ಮನುಷ್ಯ ಓಡಲಿಕ್ಕೆ ಹುಟ್ಟಿದ ಪ್ರಾಣಿಯಲ್ಲ. ಮನುಷ್ಯ ನಡೆಯಲಿಕ್ಕೆ ಹುಟ್ಟಿದವ.

ಪ್ರವಚನ ದಿನ 

ಪ್ರಶ್ನೆ ಬಂದು ಉತ್ತರ ದೊರೆತಾಗ ಅದು ಹೆಚ್ಚು ಗಟ್ಟಿಯಾಗುತ್ತದೆ. ಅದಿಲ್ಲದೆ ಉತ್ತರ ದೊರೆತಾಗ ಅದು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ.

ಪ್ರತಿ ದಿನ ರಾತ್ರಿ ಆ ದಿನದ ಘಟನೆಗಳನ್ನು ನೆನೆದು ಆತ್ಮ ಸಾಕ್ಷಿಯಾಗಿ ಯಾವುದಾದರೂ ತಪ್ಪು ಆಗಿದ್ದರೆ ಪ್ರಾಯಶ್ಚಿತ್ತ ಪೂರ್ವಕವಾಗಿ ಇದನ್ನು ಮುಂದೆ ನನ್ನಿಂದ ಮಾಡಿಸಬೇಡ ಎಂದು ಬೇಡಿ ಕೊಂಡು ದೇವರಿಗೆ ಒಪ್ಪಿಸಬೇಕು.

ಮನಸ್ಸು ಎಂಬದು ಈ ಐದರ ಸಂಗಮ
[೧] ಮನಸ್ಸು
[೨] ಬುದ್ಧಿ/ವಿವೇಕ - ಬೇಕು ಬೇಡ
[೩] ಅಹಂಕಾರ
[೪] ಚಿತ್ತ
[೫] ಚೇತನಾ

ದೇಹಗಳು ನಾಲ್ಕು:
[೧] ಸ್ವರೂಪ ದೇಹ : ಮೂಲ ಜೀವ
[೨] ಲಿಂಗ : ಯಾವಾಗಲೂ ಅಂಟಿದ್ದು. ಗುಣತ್ರಯಗಳ ಪ್ರಭಾವದಿಂದ ಕೂಡಿದ ಶರೀರ. ಸೂಕ್ಷ್ಮ ದೇಹಕಿಂತ ಮೊದಲಿದನು
[೩] ಸೂಕ್ಷ್ಮ : ಪಂಚಭೂತದಿಂದ ಆಗಿದ್ದು. ಸ್ವರ್ಗ ನರಕದಲ್ಲಿ ಇರುವ ಸ್ಥಿತಿ
[೪] ಸ್ಥೂಲ: ಈಗಿನ ದೇಹ. ಕರ್ಮಕ್ಕನುಗುಣವಾಗಿದೊರೆತದ್ದು

ಸ್ವಭಾವ, ಸುತ್ತಮುತ್ತಲಿನ ವಾತಾವರಣ, ಅನುವಂಶೀಯತೆ ಪ್ರಭಾವ ಬೀರುವ ಮೂರು ಮುಖ್ಯ ಅಂಶಗಳು

ಅಪರೋಕ್ಷ ಜ್ಞಾನಿ: ಸಾಧನೆಯ ದಾರಿಯಲ್ಲಿ ಯಾವುದೋ ಒಂದು ಕ್ಷಣ ಭಗವಂತನ ಯಾವುದೋ ಒಂದು ಪಂಚೇದ್ರಿಯಗಳ ಮೂಲಕ ಅನುಭವಿಸಿದವರು.

ಯಾವುದೋ ಅತ್ಯಂತ ದೊಡ್ಡದ್ದೋ ಅಥವಾ ಅತ್ಯಂತ ಸೂಕ್ಷ್ಮವಾದದ್ದೋ ಹಾಗೂ ಆಕಾರವಿಲ್ಲದ್ದೋ ಅದು ನಾಶಾರಹಿತವಾದದ್ದು.