Total Pageviews

Friday, May 20, 2016

ತೊರವಿ ನರಸಿಂಹ





















ನಮ್ಮೊಳಗಿನ ಹಿರಣ್ಯ ಕಶ್ಯಪು ಕೊಬ್ಬಿದ್ದಾನೆ
ಬಿದ್ದಿದ್ದಾನೆ ಹಿರಣ್ಯದ ಲೋಭದ ಹಿಂದೆ
ಕೇಳದಾಗಿದೆ ಪ್ರಹ್ಲಾದನ ಕರೆ ಆತನಿಗೆ
ನಾರಾಯಣನ ನಾಮವಿಲ್ಲ ನಾಲಗೆಯಲಿ || ೧ ||

ಮನದೊಳಗಿನ ಗಾಡಂಧಾಕಾರದ ಕಂಭ
ಸೀಳಿ ಬಾ ಉಗ್ರ ತೊರವಿ ನರಸಿಂಹನೇ
ಮಾಡು ದಮನ  ಹಿರಣ್ಯ ಕಶ್ಯಪುವನ್ನು
ಕೇಳುವಂತೆ ಮಾಡು ಪ್ರಹ್ಲಾದನ ಕರೆ || ೨ ||

ನಾಲಗೆಯಲಿ ನಲಿದಾಡಲಿ ನಿನ್ನ ನಾಮ
ಮಾಡು ದುಷ್ಟ ವಿಚಾರಗಳ ದಹನ
ಪ್ರೇರಿಸು ನಮ್ಮನು ನಡೆಯಲು ಸನ್ಮಾರ್ಗದಲಿ
ಕಾಪಾಡು ತ್ವರಿತವಾಗಿ ತೊರವಿ ನರಸಿಂಹನೇ  || ೩ ||
|| ಶ್ರೀ ಕೃಷ್ಣಾರ್ಪಣ ಮಸ್ತು ||

No comments:

Post a Comment