Total Pageviews

Sunday, May 27, 2018

ಮಂತ್ರ ಸಿದ್ಧಿ

ಯಾವುದೇ ಮಂತ್ರ ಸಿದ್ಧಿಯಾಗಲು ಏನು ಮಾಡಬೇಕು?

[೧] ಮಂತ್ರದ ಮುಖ್ಯ ಪ್ರತಿಪಾದ್ಯರ ಬಗ್ಗೆ ತಾರತಮ್ಯಕ್ಕೆ ಅನುಗುಣವಾದ ಸರಿಯಾದ ಜ್ಞಾನ
[೨] ಮಂತ್ರದ ಸರಿಯಾದ ಅರ್ಥದ ಅನುಸಂಧಾನ
[೩] ಮಂತ್ರದ ಸರಿಯಾದ ಉಚ್ಚಾರಣೆ
[೪] ಗುರುಗಳಿಂದ ಮಂತ್ರೋಪದೇಶ ?
[೫] ಕಾಲ ಮತ್ತು ದೇಶ ?
[೬] ಮಂತ್ರ ಪ್ರತಿಪಾದ್ಯರ ರೂಪದ ಧ್ಯಾನ
[೭] ಧ್ಯಾನ ಶ್ಲೋಕ ಮತ್ತು ಫಲಶ್ರುತಿಯ ಮಹತ್ವ
[೮]  ಮುಖ್ಯ ಆಧ್ಯತೆ ಯಾವುದಕ್ಕೆ

Wednesday, April 18, 2018

ಪ್ರಾರ್ಥನೆ

[೧] ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷ ಎಂಬ ಅಷ್ಠ ವಿಧ ಕಾರ್ಯಗಳನ್ನು ಸ್ವ ಪ್ರೇರಣೆಯಿಂದ ಮಾಡುವ 
[೨] ಅನಂತ ಕಲ್ಯಾಣ ಗುಣ ಪರಿಪೂರ್ಣ ಹಾಗೂ ಸರ್ವ ದೋಷ ದೂರನಾದ
[೩] ಎಲ್ಲವನ್ನು ಸೃಷ್ಟಿಸಿ, ಎಲ್ಲದರಲ್ಲೂ ವ್ಯಾಪಿಸಿ, ಎಲ್ಲವನ್ನೂ ಮಾಡಿ ಮಾಡಿಸುವ 
[೪] ಜೀವಿಗಳ ಸ್ವರೂಪ ಅನುಭೂತಿಗಾಗಿ ಈ ಕರ್ಮ ಭೂಮಿ ಸೃಷ್ಟಿಸಿ, ವೇದಗಳ ಸಂವಿಧಾನ ರೂಪಿಸಿ, ಅವರವರ ಕರ್ಮ ಶೇಷ ಹಾಗೂ ಯೋಗ್ಯತೆಗೆ ಅನುಗುಣವಾಗಿ ಸರಿಯಾದ ಫಲಗಳನ್ನು ಕೂಡುವ
ಭಗವಂತ ನನ್ನಲ್ಲಿ ಕಿಂಚಿತ್ತೂ ಪ್ರಾಮಾಣಿಕತೆ ಇದ್ದರೆ ಈ ಜೀವನ ಸಾರ್ಥಕವಾಗುವಂತ ದಾರಿ ತೋರಿಸಿ ಕೈ ಹಿಡಿದು ನಡೆಸು.     

Friday, April 13, 2018

ವಿದುರ ನೀತಿ

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ವಿದುರ - ವಿದ್ದೆಯಲ್ಲಿ ಸದಾ ರತ

ಮಹಾಭಾರತದಲ್ಲಿ ವಿದುರನ ಜ್ಞಾನ ನೋಡು

ನಿದ್ದೆ ಬರದಿರುವದಕ್ಕೆ ಕಾರಣಗಳು:

[೧] ನಮಗಿಂತ ಬಲಿಷ್ಟ ನಮ್ಮೆ ಮೇಲೆ ಸವಾರಿ ಮಾಡಿದಾಗ
[೨] ಸರ್ವಸ್ವ ಕಳೆದುಕೊಂಡು ಬೀದಿಗೆ ಬಿದ್ದವನಿಗೆ
[೩] ಕಾಮಿಗೆ
[೪] ಕಳ್ಳ
[೫] ಬೇರೆಯವರ ಸ್ವತ್ತನ್ನು ಒಳಗೆ ಹಾಕಬೇಕು ಎಂಬ ಯೋಚನೆ


ದೇಶವನ್ನು ಆಳುವ ಒಳ್ಳೆಯ ಆಡಳಿತ ಕೊಡಲು ಮಾಡಬೇಕಾದ್ದು:

ಒಂದು ಇರಬೇಕು. ಒಂದರಿಂದ ಎರಡನ್ನು ತೀರ್ಮಾನ ಮಾಡಬೇಕು
ಮೂರನ್ನು ನಾಲ್ಕರಿಂದ ಸ್ವಾಧೀನ ಪಡಿಸಿಕೊಳ್ಳಬೇಕು
ಐದನ್ನು ಗೆಲ್ಲು
ಆರು ಸಂಗತಿ ತಿಳಿ
ಏಳು ಚಟ ಬಿಡು


ಒಂದು: ನಿಷ್ಪಕ್ಷಪಾತಿ - ಸೂಕ್ಷ್ಮ ವಿವೇಕ /  - ನ್ಯಾಯ ಪೀಠದಲ್ಲಿ ಕುಳಿತವ
ಎರಡು: ಪ್ರಾಮಾಣಿಕವಾಗಿ ಅಪರಾಧಿ ನಿರಪರಾಧಿ ಹಾಗೂ ನಿರಪರಾಧಿ ಅಪರಾಧಿ ಆಗದಂತೆ ಎಚ್ಚರ ವಹಿಸು
ಮೂರು: ಒಳ್ಳೆಯವರು, ತಟಸ್ಥರು, ಕೆಟ್ಟವರು/ ಸಾತ್ವಿಕ, ರಾಜಸ, ತಾಮಸ
ನಾಲ್ಕು: ಸಾಮ, ದಾನ, ಬೇಧ, ದಂಡ/ ಋಗ್ವೇದ, ಯಜುರ್ವೇದ, ಅಥರ್ವಣವೇದ, ಸಾಮವೇದ
ಐದು : ಪಂಚೇಂದ್ರಿಯ(ಜ್ಞಾನೇಂದ್ರಿಯ, ಕರ್ಮೇಂದ್ರಿಯ)  - ನಿನ್ನನ್ನು ನೀನು ಗೆಲ್ಲು
ಆರು: 
ಏಳು: ಸ್ತ್ರೀ (ಕಾಮಾಂಧ) , ಜೂಜಾಟ, ಬೇಟೆ (ರಕ್ತ ಪಿಪಾಸು), ಕುಡಿಯುವುದು (ಸುರಪಾನ),  ಅಧಿಕಾರ ಮದದಿಂದ ಇನ್ನೊಬ್ಬರನ್ನು ಸಸಾರ ಅಥವಾ ಅವಮಾನ ಮಾಡಿ ಮಾತಾಡದಿರು (ಮಾತಿನಲ್ಲಿ ಕ್ರೌರ್ಯ ಅಥವಾ ದುರುಪಯೋಗ) ,  ಅಧಿಕಾರದ ದುರುಪಯೋಗ (ನಮಗಾಗದವರ ಮೇಲೆ ಸೇಡು ತೀರಿಸಿಕೊಳ್ಳುವುದು), ದುಡ್ಡಿನ ದುರುಪಯೋಗ ಅಥವಾ ದುಂದು ವೆಚ್ಚ 

===


ಅಧ್ಯಕ್ಷನಾಗಿ ಭಗವಂತ ಇರುವದರಿಂದ ನಡೆಯುತ್ತದೆ.  ಅಧಿಯಜ್ಞ.

ಅಧಿಭೂತ, ಆಧ್ಯಾತ್ಮ, ಅಧಿದೈವ, ಅಧಿಯಜ್ಞ.

ನಿರಹಂಕಾರ ಬರಲು ತಿಳಿಯಬೇಕಾದ್ದು ಆರು:
[೧] ಪ್ರಪಂಚದ ಅರಿವು
[೨] ಪ್ರಪಂಚದಲ್ಲಿ ಚೈತನ್ಯ ಅಥವಾ ಆತ್ಮದ ಅರಿವು
[೩] ಚೈತನ್ಯವನ್ನು ನಿಯತ್ರಿಸಲು ನೂರಾರು ದೇವತಾ ಶಕ್ತಿಗಳು ಅರಿವು
[೪] ನೂರಾರು ದೇವತೆಗಳನ್ನು ಹಾಗೂ ಚೈತನ್ಯವನ್ನು ನಿಯಂತ್ರಿಸುವ ಪರಮಾತ್ಮನ ಅರಿವು
[೫] ಪರಮಾತ್ಮ ಎಲ್ಲಡೆ ವ್ಯಾಪಿಸಿದ್ದಾನೆ ಎಂಬ ಸರ್ವಗತತ್ವದ ಅರಿವು
[೬] ಸರ್ವವೂ ಅವನಿಂದ ಆಗ್ತಾ ಇದೆ ಎಂಬ ಕರ್ಮದ ಅರಿವು

ಕ್ಷಮೆ ದುರ್ಬಲನಿಗೆ ಗುಣ ಹಾಗೂ ಸಬಲನಿಗೆ ಅಲಂಕಾರ.

ಒಳ್ಳೆಯ ಕೆಲಸಕ್ಕೆ ದುಡ್ಡು ಕೊಡದ ಧನವಂತ, ಬಡವನಾಗಿ ಕೂಡ ಬದುಕು ತಿಳಿಯದವನನ್ನು ಕಲ್ಲು ಕಟ್ಟಿ ಭಾವಿಗೆ ತಳ್ಳು.

ಕಾಮ(ಅಸಂತೃಪ್ತಿ), ಕ್ರೋಧ, ಲೋಭ ನರಕಕ್ಕೆ ದಾರಿ. ಬೇಕು ಹೆಚ್ಚಾದಾಗ ಸಿಗದೆ ಇರುವ ಸಂಭವನೀಯತೆ ಹೆಚ್ಚುತ್ತೆ. ಕಾಮದ ಮರಿ ಕ್ರೋಧ. ದುರಾಸೆ ಹೆಚ್ಚು ಇದ್ದವನಿಗೆ ಕೋಪ ಹೆಚ್ಚು. ಕೋಪ ಅನಪೇಕ್ಷಿತ ವಸ್ತು. ಕೋಪಿಷ್ಟರಿಂದ ಚಿತ್ರಹಿಂಸೆ. ಬಯಕೆ ಈಡೇರಿದರೆ ಲೋಭ. ಇನ್ನೊಬ್ಬರಿಗೆ ಸಿಗಬಾರದು. ಎಲ್ಲ ನನಗೆ ಸಿಗಬೇಕು. 


Tuesday, March 13, 2018

ಊಟಕ್ಕೆ ಯಾವ ದಿಕ್ಕಿಗೆ ಮುಖ ಮಾಡಿ ಕೂಡಬೇಕು?

ಕೂರ್ಮ ಪುರಾಣದ ಪ್ರಕಾರ:
ಪೂರ್ವಕ್ಕೆ ಮುಖ ಮಾಡಿ ಕುಳಿತರೆ ಆಯುಷ್ಯ ವೃದ್ಧಿ
ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಕೀರ್ತಿ ಹೆಚ್ಚುತ್ತದೆ. ಜಪಕ್ಕೆ ನಿಷಿದ್ಧ.
ಪಶ್ಚಿಮ  ಮುಖ ಮಾಡಿ ಸಂಪತ್ತು ಹೆಚ್ಚುತ್ತೆ
ಉತ್ತರಕ್ಕೆ ಮುಖ ಮಾಡಿ ಕುಳಿತರೆ ಯಥಾರ್ಥ ಜ್ಞಾನ ಹಾಗೂ ಪ್ರಾಮಾಣಿಕತೆ ಹೆಚ್ಚುತ್ತದೆ ಆದ್ದರಿಂದ ಆ ದಿಕ್ಕು ಧ್ಯಾನಕ್ಕೆ ಪ್ರಶಸ್ತ. ಅಂತಹ ಮಾನಸಿಕ ಶಕ್ತಿಯನ್ನು ಊಟ ಮಾಡಿ ವ್ಯಯ ಮಾಡಬಾರದು. ಆದ್ದರಿಂದ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬಾರದು

Monday, March 5, 2018

ನಿರ್ಭಯವಾಗಿ ಬದುಕುವುದು ಹೇಗೆ?

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

[೧] (ಯೋ ಧರ್ಮಶೀಲ) ನಾನು ಜೀವನದಲ್ಲಿ ಧರ್ಮದ ದಾರಿಯಲ್ಲಿ ನಡೆಯುತ್ತೇನೆ
[೨] (ಜೀತ ಮಾನ ದೋಷ) ಧರ್ಮದ ಹಾದಿ ನಡೆಯುವಾಗ ತಟಸ್ಥರಾಗಿರುವುದು. ಹೊಗಳಿದಾಗ ಹಿಗ್ಗದಿರುವುದು ಅಥವಾ ತೆಗಳಿದಾಗ ಕುಗ್ಗಬಾರದು
- ಟೀಕೆಯಲ್ಲಿ ಸತ್ಯಾಂಶ ಇದ್ದರೆ ತಿದ್ದಿಕೊ. ಇಲ್ಲದಿದ್ದರೆ ಬಿಟ್ಟು ಬಿಡು.
[೩] (ವಿದ್ಯಾ ವಿನೀತ) ಜ್ಞಾನ ಸಂಪಾದನೆ ಮಾಡಿ ನಾನೆಷ್ಟು ಚಿಕ್ಕವನು ಎಂದು ತಿಳಿ
[೪] (ನ ಪರೋ ತಪಾತಿ) ಅವರಿಗೆ ಸರಿ ಕಂಡಂತೆ ಅವರು ಬದುಕುತ್ತಾರೆ. ಸೇಡಿನ ಪ್ರವೃತ್ತಿ ಬಿಟ್ಟು ಬಿಡುವುದು
[೫] (ಸ್ವಾದಾರ ತುಷ್ಟ ಪರದಾರ ಮಾತೃವತ್/ ವರ್ಜಿತ) ಬೇರೆಯವರ ಹೆಂಡತಿಯನ್ನು ತಾಯಿಯಂತೆ ಕಾಣುವುದು

===

ಜಾನಾತಿ - ಸಾಕ್ಷಾತ್ಕಾರ ಮಾಡಿ ಕೊಳ್ಳುವದು. ಬರೀ ಓದಿ ತಿಳಿಯುವದಲ್ಲ

ಯಾವ ಕೆಲಸ ಮಾಡುವದರಿಂದ ದೇವರ ನೆನಪು ಮಾಡಿಸುತ್ತದೆಯೋ ಅದು ಧರ್ಮ
ಕೆಳಗಿನ ಪ್ರತಿಯೊಂದು ಪ್ರಯತ್ನ ಮಾಡದಿದ್ದಾಗ ಅಹಂಕಾರ ಬರುತ್ತದೆ.


Monday, February 26, 2018

ಪ್ರತಿಯೊಬ್ಬರಲ್ಲು ಇರಬೇಕಾದ ಮುಖ್ಯವಾದ ೮ ಗುಣಗಳು

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ಅಷ್ಟ ಗುಣಗಳು: ಜೀವನ ಬೆಳಗಲು ಸದಾ ಕಾಲ ಎಲ್ಲ ಜನರಿಗೆ ಅನ್ವಯ ಆಗುವ ಮಾನವೀಯ ಗುಣಗಳು.

ಒಬ್ಬ ಮನುಷ್ಯ ಪ್ರಾಮಾಣಿಕವಾಗಿ ಬದುಕಿದಾಗ ಅವನ ಮಾನಸಿಕ ದೃಡತೆ (ಇಚ್ಛಾ ಶಕ್ತಿ) ಬೆಳೆಯುತ್ತೆ. ಅಂಥವನಿಗೆ ವಾಕ ಸಿದ್ಧಿ ಕೂಡ ಪ್ರಾಪ್ತವಾಗುತ್ತೆ.

[೧] ಅನಸೂಯಾ : ಅಸೂಯೆ ಅಥವಾ ಹೊಟ್ಟೆಕಿಚ್ಚು ಪಡಬೇಡ.
ಅಸೂಯೆ ಎಂದರೆ: ಇನ್ನೊಬ್ಬರ ಒಳ್ಳೆಯ ಗುಣ ಗುರುತಿಸು. ಇನ್ನೊಬ್ಬರ ಒಳ್ಳೆಯ ಗುಣದ ಕೊಲೆ ಮಾಡಬೇಡ. ನಮ್ಮ ಒಳ್ಳೆ ಗುಣ ಕೊಚ್ಚಿಕೊಳ್ಳಬೇಡ. ಇನ್ನೊಬ್ಬರ ಗುಣ ಹೇಳುವಾಗ ಸಂತೋಷಪಡು. ಬೇರೆಯವರ ದೋಷ ಟೀಕಿಸಿದಾಗ ಸಂತೋಷಪಡಬೇಡ. ಇನ್ನೊಬ್ಬರ ದೋಷ ಚಿಂತನೆ ಮಾಡಬೇಡ.

[೨] ದಯಾ: ನಮಗೆ ಕಷ್ಟ ಬಂದಾಗ ಸಹಾಯ ದೊರೆಯಬೇಕು  ಎಂದು ಅಪೇಕ್ಷಿಸುತ್ತೇವೋ ಅದನ್ನು ಶತ್ರುಗಳಿಗೂ ಕೂಡ ಮಾಡು

[೩] ಶಾಂತಿ: ಮಾತು, ಮನಸು, ದೈಹಿಕವಾಗಿ ಕಷ್ಟ ಕೊಟ್ಟಾಗ ಅವನ ಮೇಲೆ ಕೋಪಿಸಿಕೊಂಡು ಅಸಮಾಧಾನ ಪಡಬೇಡ. ಜಗತ್ತಿನಲ್ಲಿ ಅಕಾರಣವಾಗಿ ಏನು ಘಟಿಸುವುದಿಲ್ಲ. ಆ ಗುಣವನ್ನು ದ್ವೇಷಿಸು ಆ ಮನುಷ್ಯನನ್ನು ದ್ವೇಷಿಸಿ ಪರಿಹಾರವಿಲ್ಲ.

[೪] ಅನಾಯಾಸ: ಬದುಕಿನಲ್ಲಿ ಆಯಾಸ ಮಾಡಿ ಕೊಳ್ಳಬಾರದು. ಯೋಗ್ಯತೆ ಮೀರಿ ಯಾವುದನ್ನು ಮಾಡಬೇಡ. ಒಳ್ಳೆಯ ಕೆಲಸವಾದರೂ ಸರಿ ಅದನ್ನು ಮಾಡಬೇಡ. ನಮ್ಮ ದೇಹಕ್ಕೆ ತಡೆಯದನ್ನು ಅತಿಯಾಗಿ ಮಾಡಬೇಡ. ಪುಣ್ಯ ಕಾರ್ಯ ಕೂಡ ಯೋಗ್ಯತೆ ಮೀರಿ ಮಾಡಬೇಡ.

[೫]  ಮಂಗಳ: ಮಂಗಳವಾದ ಬದಕು ಮಾಡಿಕೊ. ಶಾಸ್ತ್ರದ ಪ್ರಕಾರ ಒಳ್ಳೆಯದೋ ಅದನ್ನು ಅಳವಡಿಸಿಕೊಳ್ಳಬೇಕು.

[೬] ಆಕಾರ್ಪಣ್ಯ: ಮನುಷ್ಯ ಕೃಪಣನಾಗಬಾರದು. ನಿನ್ನಲಿ ಸ್ವಲ್ಪ ಇದ್ದರೂ ನಿನ್ನಗಿಂತ ಕಡಿಮೆ ಇರುವನಿಗೆ ದಾನ ಕೊಡು. ಸಂತೋಷವಾಗಿ ಕೊಡು. ಯಾವುದೋ ಆಸೆ ಅಥವಾ ಪ್ರಲೋಭ ದಿಂದ ಮಾಡದಿರು. ಹಂಚಿಕೊ.

[೭] ಶೌಚ: ತಿನ್ನಬಾರದ ವಸ್ತು ತಿನ್ನಬೇಡ.   ಮನಸಿನ ಆರೋಗ್ಯಕ್ಕೆ ಒಳ್ಳೆಯದನ್ನು ಮಾಡದಿರುವ ವಸ್ತು ತಿನ್ನಬೇಡ. ಬುದ್ಧಿ ಕೆಡಿಸುವ ಆಹಾರ ತಿನ್ನಬೇಡ. ದುಷ್ಟರ ಸಹವಾಸ ಮಾಡಬೇಡ.

[೮] ಅಸ್ಪೃಹ: ಏನೋ ಸಿಕ್ಕಿತೋ ಅದರಲ್ಲಿ ಸಂತೃಪ್ತಿ ಪಡು. ನಿನ್ನಲ್ಲಿ ಇರುವದನ್ನು ನೋಡಿ ಖುಷಿ ಪಡು, ಬೇರೆಯವರ ನೋಡಿ ಸಂಕಟ ಪಡಬೇಡ. ಏನು ಕಿಂಚಿತ್ತೂ ಇದೆ ಅದರಲ್ಲಿ ಸಂತೋಷ ಪಡು.

Thursday, January 25, 2018

ಸಂಧ್ಯಾವಂದನೆ - ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ಪ್ರವಚನ ೧
ಪ್ರವಚನ ೨
ಪ್ರವಚನ ೩
ಪ್ರವಚನ ೪
ಪ್ರವಚನ ೫
ಪ್ರವಚನ ೮
ಪ್ರವಚನ ೯
ಪ್ರವಚನ ೧೦
ಪ್ರವಚನ ೧೧

ಸೂರ್ಯೋದಯದ ೯೦ ನಿಮಿಷ ಮೊದಲು. ರಾತ್ರಿಯ ಕೊನೆಯ ೧/೮ ಭಾಗ ಸಂಧ್ಯಾ ಕಾಲ.

ಮುಂಜಾನೆ ೪:೩೦ ರಿಂದ ೬. ಬ್ರಹ್ಮ ನಿಯಂತ್ರಿಸುವ ಕಾಲ. ಚಿತ್ತವನ್ನು ನಿಯಂತ್ರಿಸುತ್ತಾನೆ. ಅದಕ್ಕಾಗಿ ಈ ಕಾಲದಲ್ಲಿ ಮಾಡಿದ ಅಭ್ಯಾಸ ಚೆನ್ನಾಗಿ ನೆನಪು ಉಳಿಯುತ್ತದೆ.

ದಿನಕ್ಕೆ ಬೇಕಾದ ನಿದ್ದೆ: ೪-೬ ತಾಸು. ೪ ಘಂಟೆ ನಿದ್ದೆ ೨೦ ಘಂಟೆಯ ಚಟುವಟಿಕೆಗೆ ಸಾಕು.

ಮಾನಸಿಕವಾಗಿ ಭಾಗವಹಿಸುವುದು ಮುಖ್ಯ.

ಹಸಿದ ಅತಿಥಿಯಲ್ಲಿ ವೈಶ್ವಾನರ ರೂಪಿ(ಬೆಂಕಿ) ಭಗವಂತ ಇರುತ್ತಾನೆ. ಬಂದವರಿಗೆ ನೀರು ಕೂಡುವುದು. ಹಸಿವಿನ ಬೆಂಕಿ ಮನೆಗೆ ಬೀಳುತ್ತೆ.

ಅಘ್ಯ೯ : ಕೈ ತೊಳೆಯುವುದು
ಪಾದ್ಯ : ಕಾಲು ತೊಳೆಯುವುದು
ಎರಡು ನೀರನ್ನು ಬೇರೆ ಬೇರೆಯಾಗಿ ಇಡುವುದು. ಒಂದನೊಂದು ಸೇರಿಸದಿರುವುದು.
ಆಹಾರ ಸೇವಿಸುವ ಮೊದಲು ಹಾಗೂ ನಂತರ ಬಾಯಿ ತೊಳೆದುಕೊಳ್ಳುವುದು. ಆಚಮನ.
ಮಧುಪರ್ಕ: ಹಾಲು ಹಾಗೂ ಜೇನು

ಇಂಗ್ಲೀಷ್ ಕಳ್ಳರ ಭಾಷೆ. ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಕದ್ದು ಕದ್ದು ಸೇರಿಸಿದ್ದಾರೆ.

 ಪ್ರತಿ ಚಲನವಲನದಲ್ಲೂ ಭಗವಂತನ ಅನುಸಂಧಾನ ಇಟ್ಟುಕೊಂಡಿರುತಿದ್ದರು ಪ್ರಾಚೀನರು.

ಪೂಜೆ ಒಂದು ಪ್ರತೀಕ / ಪರಿಕಲ್ಪನೆ ಅದು ಬರೀ ಕ್ರಿಯೆಯಲ್ಲ. ಅದರ ಹಿಂದಿನ ಕಾರಣ ಅರಿತು ಅನುಸಂಧಾನ ಮಾಡುವುದು ಮುಖ್ಯ.

ಭಗವಂತನ ಕರ್ಣದಿಂದ ತೀರ್ಥ ಸೃಷ್ಟಿ (ಭಾಗವತ). ಬಲಗಿವಿ ಮುಟ್ಟಿದರೆ ಸಮಸ್ತ ಶಾಸ್ತ್ರ ಹಾಗೂ ಗಂಗಾದಿ ತೀರ್ಥಗಳ ಮುಟ್ಟಿದಂತೆ.

ಅಹಂಕಾರ ನಮ್ಮನ್ನು ಭಗವಂತನಿಂದ ದೂರ ಸರಿಸುವ ಮೂಲವ್ಯಾಧಿ. ಹರಿ ಸರ್ವೋತ್ತಮಕ್ಕೆ ಧಕ್ಕೆ.

ಶಾಸ್ತ್ರ ಓದಿದ್ದು, ದಿನ ನಿತ್ಯ ಕರ್ಮ, ಸತ್ಕರ್ಮ ನಾನು ಮಾಡಿದೆ ನಾನು ಮಾಡಿದೆ ಎಂಬುದನ್ನು ಮೊದಲು ಕಡಿಮೆ ಮಾಡಬೇಕು.

ನಿಶುಸಿದ ಗಣಪತಿ: ಜೀವಗಣಗಳ ಇಂದ್ರಿಯಗಳ ಸ್ವಾಮಿ ಬಾ ಕೂಡು. ಪೀಠದಲ್ಲಿ ನಿನ್ನ ಪ್ರತೀಕ ಇಟ್ಟಿದ್ದೇನೆ ಅದರಲ್ಲಿ ಹಾಗೂ ನನ್ನಲ್ಲಿ ಬಂದು ಕೂತು ಪೂಜೆ ಮಾಡಿಸು. ನೀನೆಲ್ಲದೆ ಏನು ನಡೆಯದು. ಜ್ಞಾನಿಗಳ ಸಮುದಾಯದಲ್ಲಿ ಶ್ರೇಷ್ಟ ಏಕೆಂದರೆ ನಿನಗೆಲ್ಲ ತಿಳಿದಿದೆ. ಪೂಜಿಸುವ ವಸ್ತುಗಳಲ್ಲಿ ಶ್ರೇಷ್ಟ. ನೀನು ಅತ್ಯಂತ ಆಶ್ಚರ್ಯಕಾರ ವಸ್ತು. ನಾನೇನು ಮಾಡುತಿಲ್ಲ. ನಿನ್ನ ಪೂಜೆಯನ್ನು ನೀನೇ ಮಾಡು. ನಾನು ಕೇವಲ ಒಂದು ಪೂಜಾ ಸಾಮಗ್ರಿ. ನನಗೆ ಏನು ಮಾಡುವ ಶಕ್ತಿ ಇಲ್ಲ. ನಾವು ದೇವರ ಪ್ರತಿಬಿಂಬ. ಪ್ರತಿಬಿಂಬಕ್ಕೆ ಸ್ವತಂತ್ರ ಕ್ರಿಯೆಯಿಲ್ಲ.  

ಬ್ರಾಹ್ಮಣ: ಶಬ್ದದ ಅರ್ಥ ಜ್ಞಾನಿ ಎಂದರ್ಥ. ಜನ್ಮದಿಂದ ಬರುವುದಲ್ಲ. ಗಳಿಸಬೇಕಾದದ್ದು. ದೇವರ ಬಗ್ಗೆ ಜ್ಞಾನ ಇದ್ದು ಹಾಗೂ ಉಪಾಸನೆ ಮಾಡುವವರು.

ಅನುಸೃತ ಸ್ವಭಾವತ: ಸಮಸ್ತ ಇಂದ್ರಿಯ, ಮನಸ್ಸು ಆತ್ಮ, ಎಲ್ಲ ಪರಿವಾರ

ಆಚಮನ:

ಮೃತ್ತಿಕಾ: ಹಿಟ್ಟಿನಂತ ಸಾರಯುತ್ತವಾದ ಕೆಂಪು ಮಣ್ಣು. ಬೆಣ್ಣೆಯಂತ ಮೃದು ಮಣ್ಣು.

ಮಡಿ: ಯಾವುದು ಮನಸ್ಸನ್ನು ಶುದ್ಧಪಡಿಸುತ್ತೋ ಅದೇ ನಿಜವಾದ ಮಾಡಿ. ಮನಸ್ಸು ನಿರ್ಮಲವಾಗುವದೇ ಮಾಡಿ

ಯಾವುದು ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸುತ್ತದೋ ಅದೇ ಮಾಡಿ ಯಾವುದು ದೂರ ಮಾಡುತ್ತೋ ಅದೇ ಮೈಲಿಗೆ. ಇದು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರಬಹುದು.

ಉಧ್ವ೯ ಪುಂಡ್ರ ವೈದಿಕ ಚಿನ್ಹೆ. ವೇದಾಧಿಕಾರ ಬರಲು ಪುಂಡ್ರ ಹಾಕಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಶಕ್ತಿ ಮೇಲ್ಮುಖವಾಗಿ ಚಲಿಸಲು ೭ ಶಕ್ತಿ ಕೇಂದ್ರಗಳನ್ನು ಸಕ್ರಿಯಗೊಳಿಸಿ ವೇದ ಮಂತ್ರದ ಧ್ಯಾನಕ್ಕೆ ಅಣಿಗೊಳಿಸುವುದು.

ನೀರ್ನಾಳ ಗ್ರಂಥಿಗಳು  ೭ ಚಕ್ರಗಳಿಂದ ಪ್ರತಿನಿಧಿಸಿ ಅವನ್ನು ಸಕ್ರಿಯಗೊಳಿಸಲು ಪುಂಡ್ರ ಧಾರಣೆ. ಪ್ರತಿಯೊಂದನ್ನೂ ಒಂದೊಂದು ಸಮುದ್ರ ಎಂದು ಗುರುತಿಸಿದ್ದಾರೆ. ಪ್ರತಿ ಗ್ರಂಥಿಯಲ್ಲಿ ಶಕ್ತಿ ಸಹಜವಾಗಿ ಕೆಳ ಮುಖವಾಗಿ ಹರಿಯುತ್ತದೆ. ಉಧ್ವ೯ ಪುಂಡ್ರ ಅವನ್ನು ಸಕ್ರಿಯಗೊಳಿಸಿ ಶಕ್ತಿಯನ್ನು ಮೇಲೆ ಹರಿಯುವಂತೆ ಮಾಡುತ್ತದೆ. ಆಧ್ಯಾತ್ಮಿಕ ಕೇಂದ್ರಗಳು.

೩೬೦ ಎಲಬುಗಳು ೩೬೦ ಇಟ್ಟಿಗೆ ಇಟ್ಟು ಹೋಮ ಮಾಡುವ ಸಂಕೇತ. ದೇವರು ಸೃಷ್ಟಿ ಮಾಡಿ ಕೊಟ್ಟಿರುವ ಯಜ್ಞ ಕುಂಡ. ೩೬೦ ದಿನದ ಕಾಲ ಕುಂಡ. ೩೬೦ ಡಿಗ್ರೀ ಪೂರ್ಣ ವೃತ್ತ.

ಜಪದಿಂದ ಒಳಗಿನ ೭೨೦೦೦ ನರ ನಾಡಿಗಳು ಶಕ್ತಿ ಕೇಂದ್ರಗಳು ಸಕ್ರಿಯಗೊಳಿಸು. ೧೦೦೦ * ೨೪ ಅಕ್ಷರ * ೩ = ೭೨೦೦೦ ಅದಕ್ಕೆ ಗರಿಷ್ಟ ಗಾಯತ್ರಿ ಜಪದ ಮೇಲೆ ಮಿತಿ ವಿಧಿಸಿದ್ದಾರೆ.

ಈಡ(ಎಡ), ಪಿಂಗಳ(ಬಲ), ಸುಶಮ್ನ(ಮಧ್ಯ)


ಆಚಮನ - ಅನ್ನಮಯ ಕೋಶ
ಪ್ರಾಣಾಯಾಮ - ಪ್ರಾಣಮಯ ಕೋಶ

ಪ್ರೋಕ್ಷಣೆ:: ಮಂತ್ರ ಸ್ನಾನ
ಓ ಭಗವಂತ ಪ್ರಾಣದೇವರೇ ಜಲಾಭಿಮಾನಿ ದೇವತೆಗಳೇ ನೀವು ನಮ್ಮ ಮನೆಯಲ್ಲಿ ಆನಂದ ತುಂಬುವವರು. ನಾವು ಒಳ್ಳೆಯ ಸಾರವತ್ತಾದ ಆಹಾರ ಸೇವಿಸಬೇಕು. ನಮ್ಮ ಕಂಠದಲ್ಲಿ ನೆಲಿಸಿ ನಮ್ಮಿಂದ ವೇದ ಮಂತ್ರಗಳನ್ನು ಹೇಳಿಸಿ ಭಗವಂತನ ಕಾಣುವ ಕಣ್ಣು ಕೊಡಿ. ನಿಮ್ಮ ಅತ್ಯಂತ ಮಂಗಳಕರ ಅಮೃತ ರಸಕ್ಕೆ ನಾವು ಭಾಜನರಾಗುವಂತೆ ಮಗುವನ್ನು ಪ್ರೀತಿಸಿ ಮುದ್ದಾಡುವ ತಾಯಿಯಂತೆ ಬಂದು ನೆಲಿಸಿ. ನೀವು ಜಿನುಗುತ್ತಿರುವ ಮನೆಗೆ ನಾವು ಹುಡುಕಿಕೊಂಡು ಹೋಗುತ್ತೇವೆ. ನಮಗೆ ಅಂತ ಎತ್ತರಕ್ಕೆ ಹೋಗುವ ಯೋಗ್ಯತೆ ಕೊಡಿ.

ಬಾಹ್ಯ ಆಚರಣೆಗೆ(ritual) ಒತ್ತು ಕೊಟ್ಟು ಆಂತರ್ಯವನ್ನು(spiritual) ಮರೆತು ಬಿಟ್ಟರು.

ಶಾಸ್ತ್ರ ಓದಿ ಮನುಷ್ಯತ್ವ ಕಳೆದುಕೊಳ್ಳುಬಾರದು.

ಹೊಟ್ಟೆ ಹಾಗೂ ತಲೆಗೆ ಎರಡಕ್ಕೂ ಆಹಾರ ಹಾಗೂ ವಿರಾಮ ಕೊಡಬೇಕು. ಪಾಡ್ಯ ತಲೆಗೆ ವಿರಾಮ. ಏಕಾದಶಿ ಹೊಟ್ಟೆಗೆ ವಿರಾಮ.

ಕ್ರೋಧ ನಾವು ಬರಿಸಿಕೊಂಡಿದ್ದು

ನಮ್ಮ ಇಷ್ಟ ಪೂರ್ತಿ ಆಗದಿದ್ದಾಗ ಸಿಟ್ಟು ಬರುವುದು. ನಾನು ಹೇಳಿದ ಹಾಗೆ ನಡೆಯಲಿಲ್ಲ ಎಂಬುದಕ್ಕೆ ಬರುವುದು.

ಕ್ರೋಧ ಅನಪೇಕ್ಷಿತ. ಆರೋಗ್ಯ ಕೆಡಿಸಿಕೊಂಡು ಮನೆ ನರಕ ಮಾಡುವ ಸಾಧನ. ಜಗಳದಿಂದ ಸಮಸ್ಯೆ ಬಗೆಹರೆಯುವುದಿಲ್ಲ. ಕೋಪ ಬಂದಾಗ ಸುಮ್ಮನಾಗುವುದೇ ಮಾರ್ಗ. ಕೋಪದಿಂದ ಕೆಟ್ಟ ಕೆಲಸವಾಗುವುದು.

ಕೈಯಿಂದ, ಹೊಟ್ಟೆ, ಮಾತು, ಜನೇನೇಂದ್ರಿಯ ಎಲ್ಲದಿಂದ ತಪ್ಪು ಮಾಡಿದ್ದೇನೆ. ನೀನು ಕರುಣಾಮಯಿ ನಾನು ಬರೀ ತಪ್ಪು ಮಾಡುವವನು. ನನ್ನನ್ನು ತಾಯಿಯಂತೆ ಕ್ಷಮಿಸಿ, ಸೂರ್ಯನ ಕಿರಣಗಳಲ್ಲಿ ಅಂತರ್ಗತನಾದ ನೀನು ಅವುಗಳನ್ನು ಸುಟ್ಟು ಬಿಡು.

ಮಂದೇಹ: ಆಲಸ್ಯ ಎಂಬ ರಾಕ್ಷಸರು. ಸೂರ್ಯೋದಯ ಕಾಲದಲ್ಲಿ ನಮಗೆ ಸೋಮಾರಿತನ ತುಂಬುವ ಶಕ್ತಿ ವಾತಾವರಣದಲ್ಲಿ ಜಾಗೃತವಾಗಿರುತ್ತೆ.

ಸೂರ್ಯೋದಯ ಹಾಗೂ ಸೂರ್ಯಾಸ್ತ ಕಾಲದಲ್ಲಿ ಪ್ರತಿ ದಿನ ಕೆಂಪು ಕಿರಣಗಳು ಬರೀ ಕಣ್ಣಿಗೆ ಹಾನಿಕರ. ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಬರಿಗಣ್ಣಿನಿಂದ ನೋಡಬಾರದು.

ಗ್ರಹಣ ಕಾಲದಲ್ಲಿ ವಿಶೇಷ ಶಕ್ತಿ ಜಾಗೃತವಾಗಿರುತ್ತದೆ. ಅದಕ್ಕೆ ಹೊಟ್ಟೆ ಖಾಲಿ ಇಟ್ಟು ತಲೆ ತುಂಬಿಸಿಕೊಳ್ಳಿ. ಊಟ ಮಾಡಿ ತಲೆಯ ಶಕ್ತಿ ಕುಗ್ಗಿಸಿಕೊಳ್ಳಬಾರದು. ಯಾವುದೇ ರೋಗ ಬರುತ್ತದೆ ಎಂಬುದು ಸರಿಯಲ್ಲ.

ಕೆಲಸ ಯಶಸ್ವಿಯಾಗಲು:
[೧] ಕಣ್ಣು ಮುಚ್ಚಿ ಮಾಡಬೇಡ
[೨] ಮಾಡುವ ಮುಂಚೆ ಹಿಂದೆ ಮುಂದೆ ತಿಳಿದುಕೊಳ್ಳಿ
[೩] ನಂಬು
[೪] ಕೆಲಸ ಮಾಡು
ಜ್ಞಾನವಿಲ್ಲದೆ ಬರೀ ಕರ್ಮ ಮಾಡುವುದು ಸರಿಯಲ್ಲ.

ನೀಲ ಪ್ರಭೆ : ಜ್ಞಾನದ ಪ್ರಭೆ. ಶ್ರೀ ಕೃಷ್ಣನ ಮೈ ಬಣ್ಣ ನೀಲಿ. ಅಗಾಧತೆ ಹಾಗೂ ಆಳದ ಸಂಕೇತ.

ಎರಡು ಅಡಿಗಳವರಗೆ ಪ್ರಭಾವಳಿ ಇರುವದರಿಂದ ಒಬ್ಬರಿಂದ ಒಬ್ಬರ ಮಾನಸಿಕ ಪವಿತ್ರತೆಯ ಮೇಲೆ ಪ್ರಭಾವ ಇರುತ್ತದೆ.

ದೃಢ ಮನೋ ನಿಶ್ಚಯದಿಂದ ನಮಗೆ ಏನೋ ಬೇಕೋ ಅದನ್ನು ಆಕರ್ಷಿಸಬಹುದು. ಪಾಪ ಸುಟ್ಟು ಹೋಯಿತು, ಅಮೃತ ಹರಿದು ಬಂದು ನಮ್ಮನ್ನು ಶುದ್ಧ ಮಾಡಿತು ಎಂಬ ದೃಡ ನಂಬಿಕೆ ಇದ್ದರೆ ಖಂಡಿತ ಸಾಧ್ಯ.

ವೇದದಲ್ಲಿ ಅನೇಕ ಗಾಯತ್ರಿ ಛಂದಸ್ಸಿನ ಮಂತ್ರಗಳಿವೆ.

ವೇದದಲ್ಲಿ ನಾಲ್ಕು ಸ್ವರಗಳಿವೆ. ಉದಾತ್ತ, ಅನುದಾತ್ತ,  ಪ್ರಚೆಯ,  ಸ್ವರಿತ. ಸ್ವರ ಗೊತ್ತಿರದಿದ್ದರೆ ಏಕ ಸ್ವರದಲ್ಲಿ ಅಥವಾ ಏಕ ಶ್ರುತಿ ಹೇಳಿ.

ಸಹಜ ಮೂರು ಸ್ಥಿತಿಗಳು: ಎಚ್ಚರ, ಕನಸು, ನಿದ್ರೆ. ನಾಲ್ಕನೆಯದು: ಧ್ಯಾನ.
ಮೂರು ರೂಪಗಳನ್ನು ಮೂರು ಪಾದಗಳು ಹೇಳುತ್ತವೆ
ಹತ್ತು ರೂಪಗಳನ್ನು ಹತ್ತು ಅಕ್ಷರಗಳು ಹೇಳುತ್ತವೆ
ಇಪ್ಪತ್ತುನಾಲ್ಕು ಅಕ್ಷರಗಳು ಇಪ್ಪತ್ತು ನಾಲ್ಕು ತತ್ವಗಳನ್ನು ಹೇಳುತ್ತವೆ.