Total Pageviews

Tuesday, September 4, 2018

ಚಾತುರ್ಮಾಸ್ಯ ವ್ರತ ಪ್ರಾಯೋಗಿಕ ಕೈಪಿಡಿ

ಚಾತುರ್ಮಾಸ್ಯ ವ್ರತ ಏಕಾದಶಿ ಹಾಗೂ ಕೃಷ್ಣ ಜಯಂತಿಯಂತೆ ಕಡ್ಡಾಯ ವ್ರತ. ಕೆಲವೊಮ್ಮೆ ಇದು ಗೊತ್ತಿರಬಹುದು. ಗೊತ್ತಾದ ಮೇಲೂ ಹೇಗೆ ಆಚರಿಸಬೇಕು ಎಂಬ ಗೊಂದಲದಿಂದ ಆಚರಣೆ ಮಾಡದಿರಬಹುದು. ಗೊಂದಲಗಳಿಂದ ಆಚರಣೆ ತಪ್ಪದಿರಲಿ ಎಂಬ ಸದುದ್ದೇಶದಿಂದ ಅಭಿಜಿತ ವೀ ಆ ಮತ್ತು ನನ್ನ ನಡುವೆ ಈ ವಿಷಯವಾಗಿ ನಡೆದ ಸಂವಾದವನ್ನು ದಾಖಲಿಸುತ್ತಿರುವೆ.

ಪ್ರಥಮವಾಗಿ ಈ ವ್ರತ ನಾಲ್ಕು ಭಾಗಗಳಿಂದ ಕೊಡಿದ್ದಾಗಿದೆ. ಪ್ರತಿ ಭಾಗದಲ್ಲೂ ಒಂದೊಂದು ಪದಾರ್ಥ ವರ್ಜ್ಯವೆನಿಸಿದೆ.

ಸಂಕಲ್ಪ ಹಾಗೂ ಸಮರ್ಪಣೆ ಪ್ರತಿ ದೇವ ಕಾರ್ಯದ ಮುಖ್ಯ ಅಂಗಗಳು. ಚಾತುರ್ಮಾಸ್ಯ ಕೂಡ ಇದಕ್ಕೆ ಹೊರತಲ್ಲ. ಮುಖ್ಯ ವ್ರತ ಹಾಗೂ ಪ್ರತಿ ಭಾಗದ ಮೊದಲು ಮತ್ತು ಕೊನೆಗೆ ಸಂಕಲ್ಪ ಹಾಗೂ ಸಮರ್ಪಣೆ ಮಾಡುವುದು ಕಡ್ಡಾಯ.

ಚಾತುರ್ಮಾಸ್ಯದ ನಾಲ್ಕು ಭಾಗಗಳು :

ಶಾಕ ವ್ರತ: ಹಣ್ಣು ಮತ್ತು ತರಕಾರಿ ತ್ಯಾಗ
ದಧಿ ವ್ರತ: ಮೊಸರಿನ ತ್ಯಾಗ
ಕ್ಷೀರ ವ್ರತ: ಹಾಲಿನ ತ್ಯಾಗ
ದ್ವಿದಳ ವ್ರತ: ದ್ವಿದಳ ಧಾನ್ಯ ತ್ಯಾಗ

ನಮ್ಮ ಸಂವಾದದ ಮುಖ್ಯ ಗುರಿ ವ್ರತ ಕಾರ್ಯ ರೂಪಕ್ಕೆ ತರುವಾಗ ಪ್ರತಿ ದಿನ ಅನುಕೂಲವಾಗುವ ಕೆಲವು ಸಲಹೆ ಸೂಚನೆಗಳು. ಅದರಲ್ಲೂ ಅನೇಕ ಗ್ರಂಥಗಳು ಏನು ತಿನ್ನಬಾರದು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತವೆ. ಆದರೆ ಏನು ತಿನ್ನಬಹುದು ಎಂಬ ಬಗ್ಗೆ ಮಾಹಿತಿ ದೊರಕುವುದು ಕಡಿಮೆ.

ಇದು ಚಾತುರ್ಮಾಸ್ಯದ ಬಗ್ಗೆ ಸಂಪೂರ್ಣ ಆಧ್ಯಾತಿಕ ಪರಿಚಯವಲ್ಲ. ಮಂತ್ರ, ಜಪ, ತಪ, ಅನುಸಂಧಾನ ಇದರ ಬಗ್ಗೆ ನಾವು ಇಲ್ಲಿ ಗಮನ ಹರಿಸಿಲ್ಲ.  ಅದಕ್ಕಾಗೇ ಅನೇಕ ಗ್ರಂಥಗಳುಂಟು. 

ಡಾ|| ವ್ಯಾಸನಕೆರೆ ಪ್ರಭಂಜನಚಾರ್ಯರು ಈ ಬಗ್ಗೆ ಎರಡು ಗ್ರಂಥ ಪ್ರಕಟಿಸಿದ್ದಾರೆ. ಒಂದು ಚಾತುರ್ಮಾಸ್ಯ ವ್ರತ ಇನ್ನೊಂದು ಸದಾಚಾರ ವಿನೋದ. ಭಕ್ತರು ಅದರ ಪ್ರಯೋಜನ ಪಡೆಯಬೇಕು ಎಂದು ವಿನಂತಿ.

ಚಾತುರ್ಮಾಸ್ಯ ವ್ರತ ಕಾರ್ಯ ರೂಪಕ್ಕೆ ತರುವಾಗ ಎರಡು ಭಾಗಗಳು ಸವಾಲಿನಿಂದ ಕೂಡಿದವಾಗಿವೆ. ಅವು ಶಾಕ ವ್ರತ ಹಾಗೂ ದ್ವಿದಳ ವ್ರತ. ಇವೆರಡಕ್ಕೂ ಮನೆಯಲ್ಲಿ ಎಲ್ಲರ ಸಹಕಾರ ಬಲು ಮುಖ್ಯ. ಏಕೆಂದರೆ ಎಲ್ಲರೂ ವ್ರತ ಮಾಡದಿರುವಾಗ ಎರಡು ಅಡಿಗೆ ಒಂದು ವ್ರತದ್ದು ಮತ್ತೆ ಇನ್ನೊಂದು ಸಾಮಾನ್ಯದ್ದು ಮಾಡುವುದು ಕಠಿಣ.

ಶಾಕ ವ್ರತ

ತರಕಾರಿ ಮತ್ತು ಹಣ್ಣುಗಳನ್ನು ಬಿಡುವುದಾಗಿದೆ.

ಮಾಸ ನಿಯಾಮಕ : ಶ್ರೀಧರ


ತಿನ್ನಬಹುದು:
ತೊಗರಿ ಬೆಳೆ
ಹೆಸರ ಕಾಳು
ಉದ್ದಿನ ಬೆಳೆ
ಎಳ್ಳು
ಜೀರಿಗೆ
ಮೆಣಸು
ಬೆಲ್ಲ
ಒಣಗಿದ ಮಾವಿನಕಾಯಿ ಪುಡಿ (ಆಮ್ಚುರ್)
ಅಕ್ಕಿ ಹಿಟ್ಟು
ಗೋಧಿ ಹಿಟ್ಟು
ರವಾ
ಒಣ ಕೊಬ್ಬರಿ

ಹಣ್ಣಾದ ಮಾವು
ಒಣಗಿದ ನೆಲ್ಲಿಕಾಯಿ
ಒಣಗಿದ ಶುಂಠಿ
ಸಕ್ಕರೆ
ಹಾಲು, ಮೊಸರು, ಬೆಣ್ಣೆ

ಅಗಿಸೆ ಸೊಪ್ಪು
ಬಿಳೆ ದಂಟು ಸೊಪ್ಪು
ಗೋಯಿನ ಜೋಳ ಅಥವಾ ಮುಸುಕಿನ ಜೋಳ


ತಿನ್ನಬಾರದ್ದು:

ತರಕಾರಿ
ಹುಣಸೆ
ಕಡ್ಲಿ ಬೆಳೆ ಹಾಗೂ ಹಿಟ್ಟು
ತೆಂಗಿನ ಕಾಯಿ
ಹಣ್ಣು (ಮಾವಿನ ಹಣ್ಣು ಮತ್ತು ಉತ್ತತ್ತಿ ಬಿಟ್ಟು)
ಕೆಂಪು ಮೇಣಸೀನ ಕಾಯಿ
ಅರಿಶಿಣ
ಇಂಗು
ಕೇಸರಿ, ಪಚ್ಚ ಕರ್ಪೂರ , ಲವಂಗ ದೇವರ ತೀರ್ಥಕ್ಕೆ ಹಾಕುವಂತಿಲ್ಲ
ಜೇನು (ಪಂಚಾಮೃತಕ್ಕೂ ಉಪಯೋಗಿಸಕೂಡದು)
ಒಣ ಹಣ್ಣುಗಳು (ಯಾಲಕ್ಕಿ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ )
ಬಾಳಿ ಕಾಯಿ



ಶಾಕ ವ್ರತ ಕಾಲದಲ್ಲಿ ಕರಿ ಮೆಣಸಿನ ಹೆಚ್ಚಿನ ಉಪಯೋಗದಿಂದ ಪಿತ್ತ ಹೆಚ್ಚಾಗಿ ಹೊಟ್ಟೆ ಉರಿತ ಅಥವಾ ಕೆಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ತಂಪಾಗಿಸಲು ಮುಂಜಾನೆ ಹೆಚ್ಚಿನ ಮೊಸರು, ಮಜ್ಜೆಗೆ ಮತ್ತು ಮಧ್ಯಾನ್ಹ ತುಪ್ಪದ ಉಪಯೋಗ ಮಾಡಬಹುದು. ಹೆಸರ ಬೇಳೆ ಪಾಯಸ ಕೂಡ ಹೊಟ್ಟೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.  ಹೆಚ್ಚಾದ ಬೆಲ್ಲ ಕೂಡ ಪಿತ್ತದ ಹೆಚ್ಚಿಸಲು ಕಾರಣವಾಗಬಹುದು. ಅದಕ್ಕೆ ನೋಡಿಕೊಂಡು ಬೆಲ್ಲದ ಬಳಕೆ ಮಾಡಬೇಕು.

ಮಾವಿನ ಹಣ್ಣು ಅಷ್ಟು ಒಳ್ಳೆಯದು ಮಾರುಕಟ್ಟೆಯಲ್ಲಿ ಸಿಗದಿರಬಹುದು. ಅಂದರೆ ಅತಿಯಾಗಿ ಹಣ್ಣಾಗಿರಬಹುದು. ಹಾಗಿದ್ದಾಗ ತಿನ್ನಲಾಗದಿದ್ದಾರೆ ಅದಕ್ಕೆ ಹಾಲು ಸೇರಿಸಿ  ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು.

ಆಮ್ ಚುರ್ ಪುಡಿ ಎವರೆಸ್ಟ್ ಬ್ರಾಂಡಿನದ್ದು ಎಲ್ಲ ಮಳಿಗೆಗಳಲಿ ದೊರೆಯುತ್ತದೆ. ಇದನ್ನು ಚಾಟ್ ಮಾಡಲು ಕೂಡ ಉಪಯೋಗಿಸುತ್ತಾರೆ.

ಒಣಗಿದ ಮಾವಿನ ಕಾಯಿ ಸಾರಿಗಾಗಿ.  ಇದು ಮಾಧ್ವ ಬಂಧುಗಳು ನಡೆಸುವ ಸಾರಿನ ಪುಡಿ ಅಂಗಡಿಗಳಲ್ಲಿ ದೊರಕುತ್ತದೆ.



ಸಾಬೂದಾನೆ, ಮುಸುಕಿನ ಜೋಳ ಹಾಗೂ ಕರಿ ಮೆಣಸಿನ ಬೋಂಡಾ ಸವಿಯಲು ಬೊಂಬಾಟಾಗಿ ಇರುತ್ತೆ.




















ಎಳ್ಳು ಬೆಲ್ಲದ ಉಂಡೆ (ಯಾಲಕ್ಕಿ ಇರಕೂಡದು)





ಶಾಕ ವ್ರತ ಮಾಡುವಾಗ ಏಕಾದಶಿ ಹೆಚ್ಚು ಸಹನೀಯವಾಗಿ ಅದು ಕೂಡ ಉತ್ತಮ ಪುಣ್ಯ ಫಲ ಪ್ರಾಪ್ತಿಗೆ ಕಾರಣವಾಗುತ್ತದೆ.

ಶಾಕ ವ್ರತದ ಕೊನೆಗೆ ತರಕಾರಿಗಳ ದಾನವನ್ನು ಯೋಗ್ಯ ಬ್ರಾಹ್ಮಣನಿಗೆ ಕೊಡಬೇಕು. ಅದರಲ್ಲಿ ಟೊಮ್ಯಾಟೋ ಹಾಗೂ ಗಜ್ಜರಿ ನಿಷಿದ್ಧ. ಆಲೂಗಡ್ಡೆ ಕೊಡಬಹುದು.



Sunday, September 2, 2018

ಭಕ್ತರಿಗಾಗಿ ರಾಯರ ಅಮರ ಸಂದೇಶ

[೧] ಸಂಧ್ಯಾವಂದನೆ , ದೇವರ ಪೂಜೆ ಬಿಟ್ಟು ಬರೀ ರಾಯರ ಸ್ತೋತ್ರ ಅಂದರೆ ಅದು ಸರಿಯೆ?

[೨] ರಾಯರು ಇಷ್ಟು ಭಕ್ತರ ಮೇಲೆ ಅನುಗ್ರಹ ಮಾಡಲು ಶಕ್ತಿ ಬಂದದ್ದು ಎಲ್ಲಿಂದ?
- ರಾಯರು ಪ್ರಹ್ಲಾದ, ಬಾಹ್ಲಿಕ ರಾಜನಾಗಿದ್ದರು ಎಂಬುದಕ್ಕೆ  ಪುರಾವೆಗಳು

[೩] ರಾಘವೇಂದ್ರ ಎಂಬ ಹೆಸರಲ್ಲೇ ಹೇಗೆ ಹರಿ ಸರ್ವೋತ್ತಮತ್ವ ಹಾಗೂ ವಾಯು ಜೀವೋತ್ತಮತ್ವ ಹೇಗೆ ಅಡಗಿದೆ?

[೪] ರಾಘವೇಂದ್ರ ಸ್ವಾಮಿಗಳು ಭಕ್ತರಿಗಾಗಿ ಕೊಟ್ಟ  ಅಮರ ಸಂದೇಶ ಏನು?

[೫] ರಾಘವೇಂದ್ರ ಸ್ವಾಮಿಗಳು ರಚಿಸಿದ ದಶಾವತಾರ ಸ್ತುತಿಯ ವಿಶೇಷತೆ ಏನು?
- ಅವರೇಕೆ ಬುದ್ದ ಮತ್ತು ಕಲ್ಕಿ ರೂಪ ಬಿಟ್ಟರು

[೬] ರಾಯರು ರಚಿಸಿದ ಆದರೆ ಹೆಚ್ಚು ಬೆಳಕಿಗೆ ಬಂದಿರದ ಸ್ತೋತ್ರಗಳು ಯಾವುವು?
- ನದಿ ತಾರತಮ್ಯ ಸ್ತೋತ್ರ
- ರಾಜಗೋಪಾಲ ಸ್ತುತಿ

ಅಭಿಜಿತ್ ವೀ. ಆ. ರಾಯರ ಆರಾಧನೆ ಅಂಗವಾಗಿ ಅವರ ದೊಡ್ಡಮ್ಮನ ಮನೆಯಲ್ಲಿ ೨೮/೦೮/೨೦೧೮ ಮಾಡಿದ ಪ್ರವಚನದಲ್ಲಿ ಉಲ್ಲೇಖಿಸಿದ ಅಂಶಗಳ ಸಾರಾಂಶ. ಶ್ರೀ ಹರಿ ವಾಯುಗಳ ಕೃಪೆಯಿಂದ ಇನ್ನೂ ಹೆಚ್ಚಿನ ಸೇವೆ ಹೀಗೆ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.

Friday, August 31, 2018

ರಾಘವೇಂದ್ರ ಸ್ವಾಮಿಗಳು : ಜೀವನ ಮತ್ತು ಕೃತಿಗಳು

ಡಾ || ವ್ಯಾಸನಕೆರೆ ಪ್ರಭ೦ಜನಾಚಾರ್ಯರ ೨೦೧೮ ಪ್ರವಚನ

ಮತದ ಸೀಮೆಗಳನ್ನು ದಾಟಿದವರು. ರಾಯರ ಮಹಿಮೆ ಕಲಿಯುಗದಲ್ಲಿ ದೇಶ ಮತ್ತು ಜಾತಿಯ ಸೀಮೆ ದಾಟಿ ಬೆಳಿದಿದೆ.

ಮಧ್ವ ಮತ ವರ್ಧನ. ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಆಚಾರ್ಯರನ್ನು ಸಂಪೂರ್ಣ ನಂಬಿದವರು.

ಹರಿಪಾದ ಕಂಜ ನೀಷೇವಣಾಲಬ್ಧ ಸಮಸ್ತ ಸಂಪತ್


ವಂಶಾವಳಿ ಹೇಳುವ ಉದ್ದೇಶ, ಒಳ್ಳೆಯ ವಂಶದಲ್ಲಿ ದೊಡ್ಡ ಮಹಾ ಪುರುಷರು ಹುಟ್ಟಿ ಬರ್ತಾರೆ ಎಂಬ ಸೂಚನೆ.

ಪೀಠ ಹಾಗೂ ಹುಟ್ಟಿದ ವಂಶದಲ್ಲಿ ಶುದ್ದತೆ. ವಿಜಯೀ೦ದ್ರ ತೀರ್ಥರು (೧೦೪ ಗ್ರಂಥ) => ಸುಧೀಂದ್ರ ತೀರ್ಥರು
ಗುರುಗಳು: ಸುಧೀಂದ್ರ ತೀರ್ಥರು


ರಾಘವೇಂದ್ರರ ಅಜ್ಜರು ವಿಜಯನಗರ ಪ್ರಾಂತದವರು. ವೀಣೆಯ ಪಂಡಿತರು. ತಿಮ್ಮಣ್ಣ ಭಟ್ಟರು ತಂದೆ. ವಿಜಯೀ೦ದ್ರರ ಶಿಷ್ಯರು. ವೆಂಕಮ್ಮ ಹಾಗೂ ಗುರುರಾಜರು ಮೊದಲು ಇಬ್ಬರು ಮಕ್ಕಳು. ಪೂರ್ವಾಶ್ರಮದ ಹೆಸರು ವೆಂಕಟನಾಥ. ತಂದೆ ಚೌಲದ ನಂತರ ವೈಕುಂಠ ಯಾತ್ರೆ ಮಾಡಿದರು. ತಾಯಿಯ ಆಶ್ರಯದಲ್ಲಿ ಬೆಳೆದರು. ಲಿಪಿಶಾಸ್ತ್ರ ಓದಿದರು. ಪಾಠಾಂತರ ಹೇಳಿದ್ದು.

ಸರಸ್ವತಿ ಎಂಬ ಕನ್ಯೆಯ ಜೊತೆ ಮದುವೆ. ವಿದ್ಯಾವತಿ. ರಾಯರ ತಾಯಿ ಗೋಪಿಕಾಂಬ ವಿದುಷಿ ಆಗಿದ್ದರು. ರಾಯರ ಚಿಕ್ಕಂದಿನಲ್ಲಿ ತುಂಬಾ ಶ್ರೀಮಂತರು. ವಿದ್ಯೆಗೆ ಸಿಕ್ಕ ಮನ್ನಣೆ. ವಿದ್ವಾಂಸರು ತುಂಬಾ ಉದಾರಿಗಳು. ದಾನ ಮಾಡಿ ಮಾಡಿ ದಾರಿದ್ರ್ಯ ಬಂದಿತು. ಕೂಡುವ ಮೂಲಕ ಉಳಿಯುತ್ತದೆ. ಸತ್ಪಾತ್ರ ದಾನ.  ಒಪ್ಪತ್ತು ಊಟಕ್ಕೆ ಗತಿ ಇರದ ಸ್ಥಿತಿ. ರಾಯರ ಚರಿತ್ರೆ ಅವರ ಅಕ್ಕನ ಮಗ ಬರೆದಿದ್ದು.

ಲಕ್ಷ್ಮೀನಾರಾಯಣ ಎಂಬ ಮಗು ಹುಟ್ಟಿದೆ. ಮಧುರೈ ಇಂದ ಕುಂಭಕೋಣ ಸುಧೀಂದ್ರ ತೀರ್ಥರ ಹತ್ತಿರ ಓದಲು ಹೊರಟರು. ಯಜುರ್ವೇದಿಗಳು. ಯಮಕ ಚಮಕ ಹೇಳುತ್ತಾ ಕುಳಿತರು. ರಾಯರ ಗಂಧ ತೇಯುವ ಕೆಲಸ. ಅಗ್ನಿ ಸೂಕ್ತ ಹೇಳುತ್ತಾ ಗಂಧ ತೆಯ್ಡಿದ್ದರಿಂದ ಗಂಧ ಉರಿಯಲು ಪ್ರಾರಂಭ. ವೇದದ ಶಕ್ತಿಗೆ ಪ್ರಾಮಾಣ್ಯ. ವರುಣ ಸೂಕ್ತದಿಂದ ತಕ್ಷಣ ತಂಪಾಗಿಸಿದರು. ಫಲ ಬೀಡುವ ಅಭ್ಯಾಸ ಇದ್ದುವರು ಹೇಗೆ ಆಗುತ್ತಾರೆ ಎಂಬುದಕ್ಕೆ ನಿದರ್ಶನ.

ಶ್ರೀ ಮೂಷ್ಣ ನಿತ್ಯ ಪುಷ್ಕರ್ಣಿ ಸುತ್ತ ಬ್ರಾಹ್ಮಣರ ಮನೆ. ಇನ್ನೂ ಇದೆ. ಅಲ್ಲಿಂದ ಕುಂಭ ಕೋಣಕ್ಕೆ ಹೋದರು. ಮಠದಿಂದ ದೂರ ಮನೆ. ಮಠ ಎಂದರೆ ಪಾಠ. ಬೆಳಗಿನಿಂದ ಮಧ್ಯಾನ್ಹ ಪಾಠ ಹೇಳುವುದು ಹಾಗೂ ಕೇಳುವುದು. ಮಧ್ಯಾನ್ಹ ಮನೆಯಲ್ಲಿ ಉಪವಾಸ. ರಾಯರ ಅಸಾಧಾರಣ ಪಾಂಡಿತ್ಯ. ಪ್ರಶಸ್ತಿ ಕೂಡ ಬಂದಿತ್ತು. ಫಲದ ಬಗ್ಗೆ ವೈರಾಗ್ಯ. ಆಧ್ಯಾತ್ಮ ಅಧ್ಯಯನ ಸಂಪಾದನೆಗಲ್ಲ. ಗುರುಗಳ ಮುಂದೆ ದಾರಿದ್ರ್ಯ ಹೇಳಲಿಲ್ಲ. ಹೆಂಡತಿ ಹಾಗೂ ಮಕ್ಕಳು ಮಠದಲ್ಲಿ ಊಟ ಮಾಡಕೂಡದು ಏಕೆಂದರೆ ಅವರು ವಿದ್ಯಾರ್ಥಿಗಳಲ್ಲ. ತಮ್ಮ ಬಡತನ ಉಪಯೋಗಿಸಿಕೊಳ್ಳಲಿಲ್ಲ. ಉಪನಿಷತ್ತು ಇನ್ನೊಬ್ಬರ ಮುಂದೆ ಕೈ ಚಾಚಬಾರದು. ದೇವರನ್ನು ನಂಬಿ ಬದುಕಬೇಕು. ಇನ್ನೊಬ್ಬರನ್ನು ಕೇಳಬಾರದು. ಹಣೆಯಲ್ಲಿ ಉಂಡ ಚಿನ್ಹೆ ಇಟ್ಟು ಕೊಂಡು ಬರುತ್ತಿದ್ದರು. ಶಾಸ್ತ್ರ ಬರೀ ಓದಿದಲ್ಲ ಅನುಷ್ಟಾನಕ್ಕೆ ತಂದರು. ಎಲ್ಲ ಪ್ರತಿಕೂಲ ಇದ್ದಾಗ ಧರ್ಮಾಚಾರಣೆ ಮಾಡುವುದು ಬಲು ಕಷ್ಟ. ಪಾಠ ಪ್ರವಚನ ಅತಿ ಮುಖ್ಯ. ಲೌಕಿಕ ಹಾಗೂ ವೈದಿಕ ಕೆಲಸ ಕಡಿಮೆ ಮಾಡಿ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳಿ. ಸನ್ಯಾಸ ಸಮಯ ವ್ಯರ್ಥ ಕಡಿಮೆ ಮಾಡಿ ಕೊಳ್ಳಲು ಅವಕಾಶ. ರಾಯರ ಮನೆಯಲ್ಲಿ ಇದ್ದ ಒಡಕು ಪಾತ್ರೆ ಕಳ್ಳತನ ಆಯಿತು.

ಸುಧೀಂದ್ರ ಸ್ವಾಮಿಗಳಿಗೆ ಸ್ವಪ್ನದಲ್ಲಿ ವೆಂಕಟ ಭಟ್ಟರು ಪೀಠಾದಿಪತಿಗಳು ಎಂಬದು ರಾಮ ದೇವರ ಸೂಚನೆ. ರಾಯರು ನನಗೆ ಏನು ಅರ್ಹತೆ ಇದೆ?   ನಿಮಗೆ ನಾಲ್ಕು ಗುಣ ಇದೆ. ಶಾಂತಿ(ಭಗವಂತನ ನಿಷ್ಟೆ), ದಾಂತಿ(ಇಂದ್ರಿಯ ನಿಗ್ರಹ), ಧೀರತಾ(ಧ್ಯರ್ಯ), ಉದಾರತ. ಹೆಂಡತಿ ಚಿಕ್ಕವಳು, ಉಪನಯನವಾಗದ ಮಗ, ೨೪ ವರ್ಷ ಚಿಕ್ಕ ವಯಸ್ಸು ಅದಕ್ಕೆ ನನಗೆ ಬೇಡ.  ತನ್ನ ಜವಾಬ್ದಾರಿಯ ಅರಿವು. ಒಬ್ಬ ಮನುಷ್ಯನ ಯಶಸ್ಸಿಗೆ ಸನ್ಯಾಸದ ಅವಶ್ಯಕತೆ ಇಲ್ಲ. ಸಂಸಾರವೋ ಸನ್ಯಾಸವೋ? ರಾಯರಿಗೆ ಸರಸ್ವತಿ ವಿದ್ಯಾ ಲಕ್ಷ್ಮಿಯ ದರ್ಶನ. ಗ್ರಂಥ ರಚನೆ, ವಾದಿ ನಿಗ್ರಹ, ತತ್ವ ಪ್ರಸಾರ ಆಗಬೇಕಿದೆ. ನೀವು ಹುಟ್ಟಿರುವುದು ಅದಕಾಗಿ.  ಸರಸ್ವತಿ ಒಂದು ಶ್ಲೋಕ ಹೇಳಿ ಅದೃಶ್ಯರಾದರು. ರಾಯರು ತಮ್ಮ ಮಗನ ಉಪನಯನ ಮಾಡಿ ಸನ್ಯಾಸ ತಗೆದುಕೊಂಡರು.

ಕುಂಭ ಕೋಣದಿಂದ  ತಂಜಾವೂರಿಗೆ ಕರೆದುಕೊಂಡು ಹೋಗಿ ರಾಘವೇಂದ್ರ (ರಾಮ ದೇವರ) ಹೆಸರು ಕೊಟ್ಟು ಸನ್ಯಾಸ ಪಡೆದುಕೊಂಡರು. ರಾಯರ ಹೆಂಡತಿ ಭಾವಿ ಹಾರಿದರು. ಗಂಡನಿಗಾಗಿ ಪ್ರಾಣ ತ್ಯಾಗ ಮಾಡಿದರೆ ದೋಷವಿಲ್ಲ. ಅದು ದುರ್ಮರಣ ಅಲ್ಲ. ಪ್ರೇತಯೋನಿ (ಸತ್ತು ಹತ್ತು ದಿನ ಎಲ್ಲರು ಪ್ರೇತರಾಗುವುದು) ಹೆಂಡತಿ ಬಂದಾಗ ಪ್ರೇತ ಯೋನಿ ಪರಿಹಾರ ಮಾಡಿ ವೈಕುಂಠಕ್ಕೆ ಕಳಿಸಿದರು. ಲಕ್ಷ್ಮೀನಾರಾಯಣ ಮಗ ಅವರ ಹತ್ತಿರ ಪಾಠ ಕಲಿತರು. ಸುಧೀಂದ್ರರ ಬೃಂದಾವನ ನವ ವೃಂದಾವನ ಕೊನೆಯೆದು. ಕುಂಭ ಕೋಣ ದಲ್ಲಿ ಪೀಠದ ಬಗ್ಗೆ ಗೊಂದಲ, ವಾದ ವಿವಾದ. ರಾಯರು ಯಾದವೇಂದ್ರ ತೀರ್ಥರಿಗೆ ಬಿಟ್ಟು ಕೊಟ್ಟರು. ಆದರೆ ರಾಯರಿಗೆ ಗುರುಗಳು ಕೊನೆಗೆ ಪೀಠ ಕೊಟ್ಟಿದರಿಂದ  ಯಾದವೇಂದ್ರ ತೀರ್ಥರು ರಾಯರಿಗೆ ಬಿಟ್ಟು ಕೊಟ್ಟರು. ಕೃಷ್ಣ ರಾಜ್ಯ ಅಳಲಿಲ್ಲ ರಾಮ ರಾಜ ಆಳಿದ. ಅದಕ್ಕೆ ಯಾದವೇಂದ್ರರು ರಾಯರೇ ಪೀಠಾದಿಪತಿಗಳು ಎಂದು ಬಿಟ್ಟುಕೊಟ್ಟರು.

೧೨ ವರ್ಷದ ಬರಗಾಲ. ಊರಿನ ಜನರಿಗೆಲ್ಲ ರಾಯರ ತಪಃ ಸಿದ್ಧಿಯಿಂದ ಮಠದಲ್ಲೇ ಊಟ.  ಜಗನ್ನಾಥ ದಾಸರು ಬರೆದಿದ್ದಾರೆ.  ಆಪತ್ತು ಬರಲಿ ಆದರೆ ನಿನ್ನ ಸ್ಮರಣೆ ತಪ್ಪದಿರಲಿ. ಸಮಸ್ಯೆ ಬಂದಾಗಲೆ ಸಾಧನೆ. ರಾಯರ ಜೀವನದಲ್ಲಿ ಹೇಗೆ ಗೆಲ್ಲಬಹುದು ಎಂದು ತೋರಿಸುತ್ತಾರೆ. ಭಗವಂತನ ಆರಾಧನೆ ಮಾಡಿ ಎಲ್ಲ ಫಲಗಳನ್ನು ಪಡೆಯಬಹುದು ಎಂಬುದಕ್ಕೆ ನಿದರ್ಶನ. ಎಲ್ಲ ಪುಣ್ಯ ಕಾರ್ಯಗಳ ಫಲ ದೇವರ ಪೂಜೆ ಮಾಡುವ ಯೋಗ.     


ರಾಘವೇಂದ್ರ ಸ್ವಾಮಿಗಳ ವಿಜಯದ ಹಿಂದೆ ವಿದ್ಯೆಯ ಸಾಧನೆ, ತ್ಯಾಗದ ಸಾಧನೆ, ವೈರಾಗ್ಯದ ಸಾಧನೆ,  ವಿವೇಕದ ಸಾಧನೆ ತುಂಬಿ ಕೊಂಡಿದೆ.

ಮಣಿ ಶೃಂಗ ಹತ್ತು ವರ್ಷ ದೊಡ್ಡ ಪಾಠದ ಕ್ರಾಂತಿ. ಶಿಷ್ಯರನ್ನು ತಯಾರಿ ಮಾಡಿದರು.

ದೇಶ ಸಂಚಾರ ಮಾಡಿ. ವಾದಿಗಳನ್ನು ಗೆದ್ದು ವೈಷ್ಣವ ಪರಿವರ್ತನೆ ಮಾಡುವುದು. ಸಾಮಾನ್ಯರನ್ನು ಮಹಿಮೆ ತೋರಿಸಿ ಸುಮ್ಮನಾಗಿಸಿದರು.  ನಿರಕ್ಷರ ಕುಕ್ಷಿ ಓದಲು ಬಂದಿದ್ದು. ಹೆಸರು(ರಾಮ ದೇವರ) ಹೇಳಿದರೆ ಜ್ಞಾನ ಬರುತ್ತೆ. 

ಹತ್ತು ವರ್ಷ ಉಡುಪಿಯಲ್ಲಿ ವಾಸ.ಹತ್ತು ಬಾರಿ ಚಂದ್ರಿಕಾ ಪ್ರವಚನ. ಚಿನ್ನದ ಕೃಷ್ಣ ತಾವೇ ಮಾಡಿದರು.

೫೦ ಕಿಂತ ಹೆಚ್ಚು ಗ್ರಂಥ. ರಸಗವಳ. ರಾತ್ರಿ ಹೊತ್ತಿನಲ್ಲಿ ಎಡಗೈಯಲ್ಲಿ ಒಣಗಿದ ಎಲೆ ಉರಿಸಿ ಬಲಗೈಯಿಂದ ಬರೆದರು. ತಾಳೆಗರಿ,  ಒಣಗಿಸಿ ಮಶಿ ತಾವೇ ತಯಾರಿಸಿ ಬರೆದರು.  ರಾಯರ ಆರಾಧನೆ ಜ್ಞಾನದ ಸಮಾರಾಧನೆ. ಫಲಾಪೇಕ್ಷೆ ಬಿಟ್ಟು ಹೇಗೆ ಬದುಕಬೇಕು. ಶಾಸ್ತ್ರ ಹೇಗೆ ಓದಬೇಕು.ನಮ್ಮ ಮೈನಸ್ ಪಾಯಂಟ್ ಪಾಸಿಟಿವ್ ಹೇಗೆ ಮಾಡಿಕೊಳ್ಳಬೇಕು. ಅದನ್ನು ಬೇರೆಯರಿಗೆ ಹೇಗೆ ತಲುಪಿಸಬೇಕು.

ರಾಮ ಚಾರಿತ್ರ್ಯ ಮಂಜರಿ(೧೧ ಶ್ಲೋಕ), ಕೃಷ್ಣ ಚಾರಿತ್ರ್ಯ ಮಂಜರಿ(೨೮ ಶ್ಲೋಕ), ಮಹಾ ಭಾರತ ತಾತ್ಪರ್ಯ ನಿರ್ಣಯ ಭಾವ ಸಂಗ್ರಹ(೩೨ ಶ್ಲೋಕ), ಪ್ರಾತಃ ಸಂಕಲ್ಪ ಗದ್ಯ
ಪರಿಮಳ => ನ್ಯಾಯ ಸುಧಾ
ಗೀತಾ ವಿವೃತ್ತಿ, ಪ್ರಮೇಯ ದೀಪಿಕಾ,
ತಂತ್ರ ದೀಪಿಕಾ
ಗುರಗಳ ಸ್ತವನ
ಮೂರು ವೇದಗಳಿಗೆ ವಿವೃತ್ತಿ (ಸಿಕ್ಕಿಲ್ಲ)
ಹನುಮತ ಭುಜಂಗ ಸ್ತೋತ್ರ (ಸಿಕ್ಕಿಲ್ಲ)


ಉಡುಪಿ, ತಿರುಪತಿ, ಪಂಡರಾಪುರ : ದೇವಸ್ಥಾನ ಕೇಂದ್ರ
ಮಂತ್ರಾಲಯ : ಗುರುಗಳ ಕೇಂದ್ರ

ಮಧ್ವ ಸಿದ್ಧಾಂತ ಸರಿಯಾಗಿ ಅರ್ಥ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಏನಾಗಬಹುದು  ಎಂಬುದಕ್ಕೆ ರಾಘವೇಂದ್ರ ಸ್ವಾಮಿಗಳು ನಿದರ್ಶನ. ಆಚಾರ್ಯರ ವಿಶೇಷ ಸನ್ನಿಧಾನ.

ಗಂಭೀರ ಅರ್ಥ ಹಾಗೂ ಸರಳ ಭಾಷೆ. ಶಿಷ್ಯರಿಗೆ ಜ್ಞಾನ ಬರಲು ಬರೆದದ್ದು.

ಕಲ್ಪವೃಕ್ಷ, ಕಾಮಧೇನು : ಎರಡು ಒಂದೇ ರೀತಿಯ ಪದಗಳಾದರೂ ಏಕೆ ಬಳಸಿದ್ದಾರೆ. ಕಾಮಧೇನು ಎಲ್ಲಡೆ ತಲುಪಬಲ್ಲದು ಆದರೆ ಕಲ್ಪ ವೃಕ್ಷ ಒಂದೇ ಕಡೆ ಇರುವುದು. ರಾಯರು ಮಂತ್ರಾಲಯ ಅಷ್ಟೇ ಎಲ್ಲಡೆ ಅನುಗ್ರಹ ಮಾಡುವವರು.

ರಾಯರ ಶಕ್ತಿಯ ಮೂಲ ಭಗವಂತನ ಅನುಗ್ರಹದಿಂದ ಎಂಬುದನ್ನು ಮರೆಯಬಾರದು.

ಶ್ರೀ ಪೂರ್ಣ ಬೋಧ ಏಕೆ ಅಷ್ಟೋತ್ತರ ?

ಅಪ್ಪಣಾ ಚಾರ್ಯರು ಪ್ರೀತಿಯ ಭಕ್ತರು ಹಾಗೂ ಶಿಷ್ಯರು. ತುಂಗೆಯ ಪ್ರವಾಹದಲ್ಲಿ ಧುಮಕಿ ಸ್ತೋತ್ರ ಅನ್ನುತ್ತಾ ಬರುವುದರಲ್ಲಿ ವೃಂದಾವನ ಪ್ರವೇಶ ಆಗಿತ್ತು. ಅಪ್ಪಣಾ ಚಾರ್ಯರು ಸುಮ್ಮನಾಗಿ ಬಿಟ್ಟರು. ವೃಂದಾವನದಿಂದ "ಸಾಕ್ಷಿ ಹಯಾಸ್ತೋತ್ರಹಿ" ಎಂದು ಸ್ತೋತ್ರವನ್ನು ಪೂರ್ಣ ಮಾಡಿದ್ದರಿಂದ ಅದಕ್ಕೆ ಅಷ್ಟು ಮಹತ್ವ.

ರಾಯರ ಸ್ತೋತ್ರ ವಾಯು ದೇವರ ಹೆಸರಿಂದ ಶುರುವಾಗಿ ಹಯಗ್ರೀವ ದೇವರ ಹೆಸರಿಂದ ಮುಗಿದದ್ದು.

ವೃಂದಾವನ ಪ್ರವೇಶ ಮಾಡಿದ್ದು ಕೂಡ: ಕೃಷ್ಣನ ಪಕ್ಷ ಬಿಡಬೇಡಿ. ದ್ವಿತೀಯ ದ್ವೈತ ನಂಬಿ.

ಫಲ ಶ್ರುತಿ ಹೇಳಬೇಕು ಆದರೆ ಕೇಳಬಾರದು.

ಓಂ ಶ್ರೀ ರಾಘವೆಂದಾಯ ನಮಃ, ಓಂ ಕಾರ ಹೇಳಲೇಬೇಕು. ಆದರೆ ಅದು ದೇವರಿಗೆ ಸಂಬಂಧಿಸಿದ್ದು ಎಂಬ ಅನುಸಂಧಾನ ಇಟ್ಟುಕೊಳ್ಳಬೇಕು.

ರಾಯರ ಸೇವೆ ಸರಿಯಾಗಿ ಮಾಡುವ ಕ್ರಮ ಯಾವುದು:
[೧] ವಿದ್ವಾಂಸರು ಪಾರಾಯಣ ಹೆಚ್ಚು ಮಾಡಬೇಕು
[೨] ಸ್ತೋತ್ರದ ಅರಿವಿರದವರು ಪ್ರದಕ್ಷಿಣೆ ಮಾಡಬಹುದು
ಭಕ್ತಿಯಿಂದ ಮಾಡುವುದು ಮುಖ್ಯ.

ವಾಯುಸ್ತುತಿ, ರಾಯರ ಸ್ತುತಿ ಹೆಂಗಸರು ಅವರ ಯೋಗ್ಯತೆ ಹಾಗೂ ಸಂಪ್ರದಾಯದ  ಪ್ರಕಾರ ನೋಡಿಕೊಂಡು ಹೇಳಬಹುದು..





Sunday, May 27, 2018

ಮಂತ್ರ ಸಿದ್ಧಿ

ಯಾವುದೇ ಮಂತ್ರ ಸಿದ್ಧಿಯಾಗಲು ಏನು ಮಾಡಬೇಕು?

[೧] ಮಂತ್ರದ ಮುಖ್ಯ ಪ್ರತಿಪಾದ್ಯರ ಬಗ್ಗೆ ತಾರತಮ್ಯಕ್ಕೆ ಅನುಗುಣವಾದ ಸರಿಯಾದ ಜ್ಞಾನ
[೨] ಮಂತ್ರದ ಸರಿಯಾದ ಅರ್ಥದ ಅನುಸಂಧಾನ
[೩] ಮಂತ್ರದ ಸರಿಯಾದ ಉಚ್ಚಾರಣೆ
[೪] ಗುರುಗಳಿಂದ ಮಂತ್ರೋಪದೇಶ ?
[೫] ಕಾಲ ಮತ್ತು ದೇಶ ?
[೬] ಮಂತ್ರ ಪ್ರತಿಪಾದ್ಯರ ರೂಪದ ಧ್ಯಾನ
[೭] ಧ್ಯಾನ ಶ್ಲೋಕ ಮತ್ತು ಫಲಶ್ರುತಿಯ ಮಹತ್ವ
[೮]  ಮುಖ್ಯ ಆಧ್ಯತೆ ಯಾವುದಕ್ಕೆ

Wednesday, April 18, 2018

ಪ್ರಾರ್ಥನೆ

[೧] ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷ ಎಂಬ ಅಷ್ಠ ವಿಧ ಕಾರ್ಯಗಳನ್ನು ಸ್ವ ಪ್ರೇರಣೆಯಿಂದ ಮಾಡುವ 
[೨] ಅನಂತ ಕಲ್ಯಾಣ ಗುಣ ಪರಿಪೂರ್ಣ ಹಾಗೂ ಸರ್ವ ದೋಷ ದೂರನಾದ
[೩] ಎಲ್ಲವನ್ನು ಸೃಷ್ಟಿಸಿ, ಎಲ್ಲದರಲ್ಲೂ ವ್ಯಾಪಿಸಿ, ಎಲ್ಲವನ್ನೂ ಮಾಡಿ ಮಾಡಿಸುವ 
[೪] ಜೀವಿಗಳ ಸ್ವರೂಪ ಅನುಭೂತಿಗಾಗಿ ಈ ಕರ್ಮ ಭೂಮಿ ಸೃಷ್ಟಿಸಿ, ವೇದಗಳ ಸಂವಿಧಾನ ರೂಪಿಸಿ, ಅವರವರ ಕರ್ಮ ಶೇಷ ಹಾಗೂ ಯೋಗ್ಯತೆಗೆ ಅನುಗುಣವಾಗಿ ಸರಿಯಾದ ಫಲಗಳನ್ನು ಕೂಡುವ
ಭಗವಂತ ನನ್ನಲ್ಲಿ ಕಿಂಚಿತ್ತೂ ಪ್ರಾಮಾಣಿಕತೆ ಇದ್ದರೆ ಈ ಜೀವನ ಸಾರ್ಥಕವಾಗುವಂತ ದಾರಿ ತೋರಿಸಿ ಕೈ ಹಿಡಿದು ನಡೆಸು.     

Friday, April 13, 2018

ವಿದುರ ನೀತಿ

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ವಿದುರ - ವಿದ್ದೆಯಲ್ಲಿ ಸದಾ ರತ

ಮಹಾಭಾರತದಲ್ಲಿ ವಿದುರನ ಜ್ಞಾನ ನೋಡು

ನಿದ್ದೆ ಬರದಿರುವದಕ್ಕೆ ಕಾರಣಗಳು:

[೧] ನಮಗಿಂತ ಬಲಿಷ್ಟ ನಮ್ಮೆ ಮೇಲೆ ಸವಾರಿ ಮಾಡಿದಾಗ
[೨] ಸರ್ವಸ್ವ ಕಳೆದುಕೊಂಡು ಬೀದಿಗೆ ಬಿದ್ದವನಿಗೆ
[೩] ಕಾಮಿಗೆ
[೪] ಕಳ್ಳ
[೫] ಬೇರೆಯವರ ಸ್ವತ್ತನ್ನು ಒಳಗೆ ಹಾಕಬೇಕು ಎಂಬ ಯೋಚನೆ


ದೇಶವನ್ನು ಆಳುವ ಒಳ್ಳೆಯ ಆಡಳಿತ ಕೊಡಲು ಮಾಡಬೇಕಾದ್ದು:

ಒಂದು ಇರಬೇಕು. ಒಂದರಿಂದ ಎರಡನ್ನು ತೀರ್ಮಾನ ಮಾಡಬೇಕು
ಮೂರನ್ನು ನಾಲ್ಕರಿಂದ ಸ್ವಾಧೀನ ಪಡಿಸಿಕೊಳ್ಳಬೇಕು
ಐದನ್ನು ಗೆಲ್ಲು
ಆರು ಸಂಗತಿ ತಿಳಿ
ಏಳು ಚಟ ಬಿಡು


ಒಂದು: ನಿಷ್ಪಕ್ಷಪಾತಿ - ಸೂಕ್ಷ್ಮ ವಿವೇಕ /  - ನ್ಯಾಯ ಪೀಠದಲ್ಲಿ ಕುಳಿತವ
ಎರಡು: ಪ್ರಾಮಾಣಿಕವಾಗಿ ಅಪರಾಧಿ ನಿರಪರಾಧಿ ಹಾಗೂ ನಿರಪರಾಧಿ ಅಪರಾಧಿ ಆಗದಂತೆ ಎಚ್ಚರ ವಹಿಸು
ಮೂರು: ಒಳ್ಳೆಯವರು, ತಟಸ್ಥರು, ಕೆಟ್ಟವರು/ ಸಾತ್ವಿಕ, ರಾಜಸ, ತಾಮಸ
ನಾಲ್ಕು: ಸಾಮ, ದಾನ, ಬೇಧ, ದಂಡ/ ಋಗ್ವೇದ, ಯಜುರ್ವೇದ, ಅಥರ್ವಣವೇದ, ಸಾಮವೇದ
ಐದು : ಪಂಚೇಂದ್ರಿಯ(ಜ್ಞಾನೇಂದ್ರಿಯ, ಕರ್ಮೇಂದ್ರಿಯ)  - ನಿನ್ನನ್ನು ನೀನು ಗೆಲ್ಲು
ಆರು: 
ಏಳು: ಸ್ತ್ರೀ (ಕಾಮಾಂಧ) , ಜೂಜಾಟ, ಬೇಟೆ (ರಕ್ತ ಪಿಪಾಸು), ಕುಡಿಯುವುದು (ಸುರಪಾನ),  ಅಧಿಕಾರ ಮದದಿಂದ ಇನ್ನೊಬ್ಬರನ್ನು ಸಸಾರ ಅಥವಾ ಅವಮಾನ ಮಾಡಿ ಮಾತಾಡದಿರು (ಮಾತಿನಲ್ಲಿ ಕ್ರೌರ್ಯ ಅಥವಾ ದುರುಪಯೋಗ) ,  ಅಧಿಕಾರದ ದುರುಪಯೋಗ (ನಮಗಾಗದವರ ಮೇಲೆ ಸೇಡು ತೀರಿಸಿಕೊಳ್ಳುವುದು), ದುಡ್ಡಿನ ದುರುಪಯೋಗ ಅಥವಾ ದುಂದು ವೆಚ್ಚ 

===


ಅಧ್ಯಕ್ಷನಾಗಿ ಭಗವಂತ ಇರುವದರಿಂದ ನಡೆಯುತ್ತದೆ.  ಅಧಿಯಜ್ಞ.

ಅಧಿಭೂತ, ಆಧ್ಯಾತ್ಮ, ಅಧಿದೈವ, ಅಧಿಯಜ್ಞ.

ನಿರಹಂಕಾರ ಬರಲು ತಿಳಿಯಬೇಕಾದ್ದು ಆರು:
[೧] ಪ್ರಪಂಚದ ಅರಿವು
[೨] ಪ್ರಪಂಚದಲ್ಲಿ ಚೈತನ್ಯ ಅಥವಾ ಆತ್ಮದ ಅರಿವು
[೩] ಚೈತನ್ಯವನ್ನು ನಿಯತ್ರಿಸಲು ನೂರಾರು ದೇವತಾ ಶಕ್ತಿಗಳು ಅರಿವು
[೪] ನೂರಾರು ದೇವತೆಗಳನ್ನು ಹಾಗೂ ಚೈತನ್ಯವನ್ನು ನಿಯಂತ್ರಿಸುವ ಪರಮಾತ್ಮನ ಅರಿವು
[೫] ಪರಮಾತ್ಮ ಎಲ್ಲಡೆ ವ್ಯಾಪಿಸಿದ್ದಾನೆ ಎಂಬ ಸರ್ವಗತತ್ವದ ಅರಿವು
[೬] ಸರ್ವವೂ ಅವನಿಂದ ಆಗ್ತಾ ಇದೆ ಎಂಬ ಕರ್ಮದ ಅರಿವು

ಕ್ಷಮೆ ದುರ್ಬಲನಿಗೆ ಗುಣ ಹಾಗೂ ಸಬಲನಿಗೆ ಅಲಂಕಾರ.

ಒಳ್ಳೆಯ ಕೆಲಸಕ್ಕೆ ದುಡ್ಡು ಕೊಡದ ಧನವಂತ, ಬಡವನಾಗಿ ಕೂಡ ಬದುಕು ತಿಳಿಯದವನನ್ನು ಕಲ್ಲು ಕಟ್ಟಿ ಭಾವಿಗೆ ತಳ್ಳು.

ಕಾಮ(ಅಸಂತೃಪ್ತಿ), ಕ್ರೋಧ, ಲೋಭ ನರಕಕ್ಕೆ ದಾರಿ. ಬೇಕು ಹೆಚ್ಚಾದಾಗ ಸಿಗದೆ ಇರುವ ಸಂಭವನೀಯತೆ ಹೆಚ್ಚುತ್ತೆ. ಕಾಮದ ಮರಿ ಕ್ರೋಧ. ದುರಾಸೆ ಹೆಚ್ಚು ಇದ್ದವನಿಗೆ ಕೋಪ ಹೆಚ್ಚು. ಕೋಪ ಅನಪೇಕ್ಷಿತ ವಸ್ತು. ಕೋಪಿಷ್ಟರಿಂದ ಚಿತ್ರಹಿಂಸೆ. ಬಯಕೆ ಈಡೇರಿದರೆ ಲೋಭ. ಇನ್ನೊಬ್ಬರಿಗೆ ಸಿಗಬಾರದು. ಎಲ್ಲ ನನಗೆ ಸಿಗಬೇಕು. 


Tuesday, March 13, 2018

ಊಟಕ್ಕೆ ಯಾವ ದಿಕ್ಕಿಗೆ ಮುಖ ಮಾಡಿ ಕೂಡಬೇಕು?

ಕೂರ್ಮ ಪುರಾಣದ ಪ್ರಕಾರ:
ಪೂರ್ವಕ್ಕೆ ಮುಖ ಮಾಡಿ ಕುಳಿತರೆ ಆಯುಷ್ಯ ವೃದ್ಧಿ
ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಕೀರ್ತಿ ಹೆಚ್ಚುತ್ತದೆ. ಜಪಕ್ಕೆ ನಿಷಿದ್ಧ.
ಪಶ್ಚಿಮ  ಮುಖ ಮಾಡಿ ಸಂಪತ್ತು ಹೆಚ್ಚುತ್ತೆ
ಉತ್ತರಕ್ಕೆ ಮುಖ ಮಾಡಿ ಕುಳಿತರೆ ಯಥಾರ್ಥ ಜ್ಞಾನ ಹಾಗೂ ಪ್ರಾಮಾಣಿಕತೆ ಹೆಚ್ಚುತ್ತದೆ ಆದ್ದರಿಂದ ಆ ದಿಕ್ಕು ಧ್ಯಾನಕ್ಕೆ ಪ್ರಶಸ್ತ. ಅಂತಹ ಮಾನಸಿಕ ಶಕ್ತಿಯನ್ನು ಊಟ ಮಾಡಿ ವ್ಯಯ ಮಾಡಬಾರದು. ಆದ್ದರಿಂದ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬಾರದು